ಪ್ರತಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುತ್ತಿವೆ – ಗೃಹ ಸಚಿವ ಜಿ ಪರಮೇಶ್ವರ್‌

ಬೆಂಗಳೂರು :  ಮುಡಾ ಪ್ರಕರಣದಲ್ಲಿ ಸೇಡಿನ ರಾಜಕೀಯ ಆಗ್ತಿದೆ, ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡ್ತಾ ಇದೆ. EDಯಲ್ಲಿ ಕೇಸ್​ ದಾಖಲಾಗಿರೋದಕ್ಕೆ ಇದಕ್ಕೆ ಸಾಕ್ಷಿ, ನಾವು ಮೊದಲಿನಿಂದಲೂ ಇದೇ ಆರೋಪ ಮಾಡಿದ್ದೆವು ಎಂದು ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಕೇಂದ್ರ ಸರ್ಕಾರ ಇ.ಡಿ ಯನ್ನು ಅಸ್ತ್ರವಾಗಿ ಉಪಯೋಗಿಸಿಕೊಳ್ತಿದೆ. ಮುಡಾ ಪ್ರಕರಣದಲ್ಲಿ ರಾಜಕೀಯ ಮಾಡ್ತಿದ್ದಾರೆ. ಇದು ನಮ್ಮ ಆರೋಪ ಆಗಿತ್ತು, ಈಗ ಇದು ಸಾಬೀತಾಗಿದೆ ಎಂದರು‌. ಪ್ರಧಾನಿ ನರೇಂದ್ರ ಮೋದಿ ತನ್ನ ಚುನಾವಣಾ ಭಾಷಣದಲ್ಲಿ ಮುಡಾ ಬಗ್ಗೆ ಮಾತಾಡಿದ್ದಾರೆ‌. ಬಿಜೆಪಿ ನಾಯಕರು ದುರುದ್ದೇಶದಿಂದ ಇದನ್ನೆಲ್ಲ ಮಾಡಿಸ್ತಿದ್ದಾರೆ. ಇದೀಗ ಇ‌.ಡಿಯಿಂದ ತನಿಖೆ ಮಾಡಿಕೊಳ್ಳಲಿ ಎಂದರು.

ಇದನ್ನೂ ಓದಿಮುಡಾದಿಂದ ಪಡೆದ ಸೈಟ್‌ಗಳು ವಾಪಸ್‌; ಮುಡಾಗೆ ಪತ್ರ ಬರೆದ ಸಿಎಂ ಪತ್ನಿ ಪಾರ್ವತಿ

ಮುಡಾ ಸೈಟನ್ನು ವಾಪಸ್ ಕೊಟ್ಟ ಸಿದ್ದರಾಮಯ್ಯ ಪತ್ನಿ ನಡೆಯ ವಿಚಾರವಾಗಿ ಮಾತನಾಡಿ, ಸಿಎಂ ಅವರ ಶ್ರೀಮತಿಯವರು ಸೈಟುಗಳನ್ನು ವಾಪಸ್ ಮಾಡಲು ಪತ್ರ ಬರೆದಿದ್ದಾರೆ. ಇದರಿಂದ ಕಾನೂನಾತ್ಮಕವಾಗಿ ಮುಂದೇನು ಆಗುತ್ತದೆ ಎಂಬುದು ನೋಡಬೇಕು. ಇದರಲ್ಲೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕ್ತಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರದ ಏಜೆನ್ಸಿಗಳ ಮೂಲಕ ಸಿದ್ದರಾಮಯ್ಯಗೆ ಮಾನಸಿಕವಾಗಿ ತೊಂದರೆ ಮಾಡಬೇಕೆಂಬ ದುರುದ್ದೇಶ ಬಿಜೆಪಿಯವರದ್ದು. ದುರುದ್ದೇಶದಿಂದ ಸರ್ಕಾರ ಅಸ್ಥಿರ ಮಾಡಲು ಹೊರಟಿದ್ದಾರೆ. ತನಿಖೆಗೆ ನಮ್ಮ ತಕರಾರು ಇಲ್ಲ ಎಂದು ಗೃಹ ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *