ರಾಜ್ಯದಲ್ಲಿ ಮುಂದಿನ ಐದು ದಿನ ಹಲವೆಡೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ತುಸು ಬಿಡುವು ನೀಡಿದ್ದ ಮಳೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಅಬ್ಬರಿಸಲು ಶುರುವಗಿದೆ. ರಾಜ್ಯದ ದಕ್ಷಿಣ ಒಳನಾಡಿನಾದ್ಯಂತ ಸಕ್ರಿಯವಾಗಿರುವ ಮಳೆ ಮುಂದಿನ 03 ರಿಂದ 05 ದಿನಗಳ ಕಾಲ ಆರ್ಭಟಿಸಲಿದೆ. ಈ ಪೈಕಿ ಭಾನುವಾರ ಈ ಜಿಲ್ಲೆಗಳಲ್ಲಿ ಭಾರೀಯಿಂದ ಅತ್ಯಧಿಕ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಕ್ರಿಯವಾಗಿದ್ದು, ಭಾನುವಾರದಂದು ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಈ ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಹಿತ ಅತ್ಯಧಿಕ ಭಾರಿ ಮಳೆ ಸುರಿಯಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು.

ಇನ್ನೂ ಕರಾವಳಿಯ ದಕ್ಷಿಣ ಕನ್ನಡ ಉಡುಪಿ, ಗದಗ ಮತ್ತು ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಧಾರಾಕಾರ ಮಳೆ ಆಗುವ ಸಂಬಂಧ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು – ಮಲ್ಲಿಕಾರ್ಜುನ ಖರ್ಗೆ

ಸೋಮವಾರ ಚಿಕ್ಕಮಗಳೂರು, ಹಾಸನ, ಕೊಡುಗು ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆಯ ಪ್ರಯುಕ್ತ ‘ಯೆಲ್ಲೋ ಅಲರ್ಟ್’ ನೀಡಿರುವ ಬಗ್ಗೆ ಮುನ್ಸೂಚನಾ ವರದಿಯಲ್ಲಿ ಹವಾಮಾನ ತಜ್ಞರು ತಿಳಿಸಿದ್ದಾರೆ.

ಸಾಧಾರಣದಿಂದ ಭಾರಿ ಮಳೆ ಎಚ್ಚರಿಕೆ

ಉಳಿದಂತೆ ಮುಂದಿನ ಮೂರರಿಂದ ಐದು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗಲಿದೆ. ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆ, ಹೆಚ್ಚಾದ ಗಾಳಿಯ ತೀವ್ರತೆಯಿಂದ ರಾಜ್ಯದ ದಕ್ಷಿಣ ಭಾಗದಲ್ಲೂ ಮಳೆ ತೀವ್ರತೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಅಧಿಕ ಮಳೆ

ಇನ್ನೂ ಕಳೆದ ಒಂದೆರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಕಂಡು ಬಂದಿದೆ. ಶನಿವಾರ ರಾತ್ರಿ ದೊಡ್ಡಾನೆಕುಂದಿಯಲ್ಲಿ 1 ಸೆಂಟಿ ಮೀಟರ್‌ಗೂ ಹೆಚ್ಚು (107mm) ಮಳೆ ದಾಖಲಾಗಿದೆ. ಈ ಮೂಲಕ ಸೆಪ್ಟಂಬರ್‌ನಲ್ಲಿ ಅತ್ಯಧಿಕ ಮಳೆ ದಾಖಲಾದಂತಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ಮುಂದಿನ ಒಂದು ವಾರ ನಗರದಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ ಎಂದು ತಿಳಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಎಚ್‌ಎಎಲ್ ನಲ್ಲಿ ಉತ್ತಮ ಮಳೆ ದಾಖಲಾಗಿದೆ. ಇಲ್ಲಿ 7 ಮಿ.ಮೀ, ಚಾಮರಾಜನಗರ ಎಂಎಂ ಹಿಲ್ಸ್ 5 ಮಿ.ಮೀ, ಮಂಡ್ಯ 4ಮಿ.ಮೀ, ಚಿಕ್ಕಬಳ್ಳಾಪುರ 4ಮಿ.ಮೀ, ಕೊಳ್ಳೆಗಾಲ 3ಮಿ.ಮೀ, ಗಂಡ್ಲುಪೇಟೆಯಲ್ಲಿ 2 ಮಿ.ಮೀ. ನಷ್ಟು ಮಳೆ ದಾಖಲಾಗಿದೆ.

ಇದನ್ನೂ ನೋಡಿ: ಸೌಹಾರ್ದವಿಲ್ಲದೇ ಶಾಂತಿ ನೆಲೆಸದು. ಶಾಂತಿ ಇಲ್ಲದೇ ವಿಕಾಸ ಸಾಧ್ಯವಾಗದು – ಅಜಯ್ ಕುಮಾರ್ ಸಿಂಗ್Janashakthi Media

Donate Janashakthi Media

Leave a Reply

Your email address will not be published. Required fields are marked *