ಶಿರೂರು: ಶಿರೂರು ಬಳಿಯಲ್ಲಿ ಜುಲೈ 16ರಂದು ಸಂಭವಿಸಿದ ಭೂ ಕುಸಿತದಲ್ಲಿ ಕೊಚ್ಚಿ ಹೋಗಿದ್ದ ಲಾರಿ ಹಾಗೂ ಅದರ ಚಾಲಕನ ಮೃತದೇಹ ಪತ್ತೆಯಾಗಿದ್ದು, ದೃಶ್ಯಗಳು ಮನಕಲುಕುವಂತಿತ್ತು.
ಭಾರತ್ ಬೆಂಜ್ ಲಾರಿಯ ಅವಶೇಷಗಳನ್ನು ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಹೊರಕ್ಕೆ ತೆಗೆದಿದ್ದು, ಚಾಲಕನ ದೇಹ ಎರಡು ತುಂಡಾಗಿತ್ತು. ಪ್ರಮುಖವಾಗಿ, ಲಾರಿಯ ಅವಶೇಷಗಳ ಅಡಿಯಲ್ಲಿ ಆಟಿಕೆಯ ಲಾರಿ ದೊರೆತಿದ್ದು, ಮೃತ ಚಾಲಕ ತನ್ನ ಮಗನಿಗಾಗಿ ಇದನ್ನು ಖರೀದಿಸಿ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರಧಾನಮಂತ್ರಿ ತುಂಬಾ ಶಕ್ತಿಶಾಲಿಯಾಗಿರಬಹುದು, ಆದರೆ ಅವರು ದೇವರಲ್ಲ: ಅರವಿಂದ್ ಕೇಜ್ರಿವಾಲ್
ದೊರೆತಿರುವ ಲಾರಿ ಸಂಪೂರ್ಣ ನಾಶವಾಗಿದ್ದು, ಒಳಭಾಗದಲ್ಲಿ ಚಾಲಕನ ಮೊಬೈಲ್ ಸಹ ಪತ್ತೆಯಾಗಿದೆ. ಅರ್ಜುನ್ ರವರ ಕೊಳತ ಸ್ಥಿತಿಯ ದೇಹವನ್ನು ಅಂಕೋಲದ ಶವಾಗಾರದಲ್ಲಿ ಇರಿಸಲಾಗಿತ್ತು. ನಂತರ ಡಿಎನ್’ಎ ಪರೀಕ್ಷೆಗೆ ಕಳುಹಿಸಲಾಗಿದ್ದು, ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ಒಟ್ಟು ಎರಡು ಮೊಬೈಲ್, ಪಾತ್ರೆಗಳು, ಲಾರಿ ಮಾದರಿಯ ಆಟಿಕೆ ದೊರೆತಿದ್ದು ಅರ್ಜುನ್ ಸಹೋದರ ಅಭಿಜಿತ್’ಗೆ ನೀಡಲಾಗಿದೆ. ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಮೃತ ದೇಹ ದೊರೆಯಬೇಕಿದ್ದು, ಇಂದು ಕೂಡ ಎಂದಿನಂತೆ ಡ್ರಜ್ಜಿಂಗ್ ಬಾಜರ್’ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂ ಕುಸಿತವಾಗಿ 11 ಜನ ಮೃತಪಟ್ಟಿದ್ದರು.
ಇದನ್ನೂ ನೋಡಿ: ಬಿಟ್ ಕಾಯಿನ್, ಪಿಎಸ್‌ಐ ನೇಮಕ ಸಮಗ್ರ ತನಿಖೆಗೆ ಆಗ್ರಹ – ಕಿಮ್ಮನೆ ರತ್ನಾಕರJanashakthi Media