ಮುನಿರತ್ನ ಪ್ರಕರಣ : ಶಾಸನ ಸಭಾ ಸದಸ್ಯತ್ವ ಅಮಾನತುಗೊಳಿಸಿ – ಸಿಪಿಐಎಂ ಒತ್ತಾಯ

ಮುನಿರತ್ನ ಮೇಲಿನ ಗಂಭೀರ ಆರೋಪಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಿ
ಬೆಂಗಳೂರು: ಶಾಸಕ ಮುನಿರತ್ನ ಮಾಡಿರುವ ಜಾತಿ ಹಾಗೂ ಮಹಿಳಾ ನಿಂದನೆ ಗಂಭೀರ ಸ್ವರೂಪದ್ದಾಗಿರುವಾಗಲೆ ಮತ್ತಷ್ಠು ಗಂಭೀರ ಸ್ವರೂಪದ ಹನಿಟ್ರ್ಯಾಪ್ ಹಾಗೂ ಆ ಮೂಲಕ ಜೀವ ವಿರೋದಿ ಏಡ್ಸ ರೋಗವನ್ನು ಹರಡುವ ದುಷ್ಖೃತ್ಯದ ಆರೋಪಗಳನ್ನು ಹೊತ್ತು ಜೈಲು ಪಾಲಾಗಿದ್ದಾರೆ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜ ಹೆಳಿದ್ದಾರೆ. ಅಮಾನತು

ಇದು ಶಾಸನ ಸಭಾ ಸ್ಥಾನಕ್ಕೆ ಮತ್ತು ಅವರು ಶಾಸಕನಾಗಿ ಮಾಡಿದ ಪ್ರತಿಜ್ಞೆಗೆ ತೀವ್ರ ಅಪಮಾನ ಉಂಟು ಮಾಡಿರುವುದನ್ನು ಸಂವಿಧಾನ ವಿರೋಧಿ ನಡೆಯನ್ನು ಎತ್ತಿ ತೋರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅಮಾನತು

ಇದನ್ನೂ ಓದಿ: ದೊಡ್ಡಬಳ್ಳಾಪುರ| ಮನೆ ಬಾಗಿಲು ಬಡಿಯುವ ಪುಂಡರು – ಜನರಲ್ಲಿ ಆತಂಕ

ಶಾಸನ ಸಭೆಯ ಘನತೆಯನ್ನು ಎತ್ತಿ ಹಿಡಿಯಲು ಈ ಕೂಡಲೆ ಅವರ ಶಾಸನ ಸಭಾ ಸ್ಥಾನವನ್ನು ಅಮಾನತಿನಲ್ಲಿಡಲು ಮತ್ತು ಅವರ ಮೇಲಿನ ಎಲ್ಲ ಪ್ರಕರಣಗಳನ್ನು ನ್ಯಾಯಾಂಗ ಸುಪರ್ಧಿಯ ತನಿಖೆಗೊಳಪಡಿಸಲು ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿ  ಸಿದ್ಧರಾಮಯ್ಯ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಅದೇ ರೀತಿ, ಶಾಸನ ಸಭೆಯ ಘನತೆಯನ್ನು ಎತ್ತಿ ಹಿಡಿಯಲು ಶಾಸಕ ಮುನಿರತ್ನರ ಅಮಾನತಿಗೆ ಕ್ರಮವಹಿಸುವಂತೆಯು, ವಿಧಾನ ಸಭೆಯ ಅಧ್ಯಕ್ಷರಿಗೂ ಸಿಪಿಐಎಂ ಮನವಿ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: ಮುನಿರತ್ನ ಭ್ರಷ್ಟಾಚಾರಿ, ಮನೆಯಲ್ಲಿಯೇ ಬಿಬಿಎಂಪಿ ಬಿಲ್ ಬರೆಯುತ್ತಾರೆ – ಸಚಿವ ಕೃಷ್ಣ ಬೈರೇಗೌಡ ಆರೋಪ

Donate Janashakthi Media

Leave a Reply

Your email address will not be published. Required fields are marked *