‘ಟೆಸ್ಟ್‌ ಕ್ರಿಕೆಟ್‌ʼನಲ್ಲಿ ವಿಶ್ವದಾಖಲೆ: 6 ಎಸೆತಕ್ಕೆ 6 ಸಿಕ್ಸರ್‌ ಹೊಡೆದ ಆರ್‌ ಅಶ್ವಿನ್!

ನವದೆಹಲಿ: ʼಟೀಂ ಇಂಡಿಯಾʼ ಕ್ರಿಕೆಟ್‌ ಆಟದ ಅದ್ಭುತ ಬೌಲರ್ ಆರ್ ಅಶ್ವಿನ್. ಎದುರಾಳಿ ತಂಡಗಳನ್ನು ಎದುರಿಸಲು ಹಗಲು ರಾತ್ರಿ ಯೋಜನೆಗಳನ್ನು ಸಿದ್ಧಪಡಿಸುವ ಸ್ಪಿನ್ನರ್.‌ ಇದೀಗ ಈ ಮಾತಿಗೆ ಸ್ಪಷ್ಟವಾಗಿ ನಿಂತ ಅಶ್ವಿನ್‌ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಕ್ರಿಕೆಟ್‌

6 ಎಸೆತಗಳಲ್ಲಿ ಈ ಸ್ಪಿನ್ ಮಾಸ್ಟರ್ 6 ಸಿಕ್ಸರ್ ಬಾರಿಸಿ ಚೆಪಾಕ್‌ʼನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 8ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದಾಖಲೆಯಲ್ಲಿ ನ್ಯೂಜಿಲೆಂಡ್‌ʼನ ಡೇನಿಯಲ್ ವೆಟ್ಟೋರಿ ಅವರನ್ನು ಸರಿಗಟ್ಟಿದ್ದಾರೆ. ಕ್ರಿಕೆಟ್‌

ಅಶ್ವಿನ್ 108 ಎಸೆತಗಳಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದರು. ಟೀಂ ಇಂಡಿಯಾದ ಮಹಾನ್ ಮಾಸ್ಟರ್ʼಗಳ ಬ್ಯಾಟ್ʼಗಳು ಸೈಲೆಂಟ್ ಆಗಿ ಕಾಣಿಸಿಕೊಂಡಾಗ ಅಶ್ವಿನ್ ಅಬ್ಬರಿಸಿ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಅಷ್ಟೇ ಅಲ್ಲದೆ, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆರನೇ ಶತಕವನ್ನು ಗಳಿಸಿದರು.

ಇದನ್ನೂ ಓದಿ: ಹರಿಯಾಣದಲ್ಲಿ ಅಧಿಕಾರಕ್ಕೆ ಬಂದರೆ 7 ಗ್ಯಾರಂಟಿ; 16 ಭರವಸೆ ಈಡೇರಿಕೆ: ಕಾಂಗ್ರೆಸ್ ಪಕ್ಷ

ದು ಭಾರತದ ನೆಲದಲ್ಲಿ ಅಶ್ವಿನ್ ಅವರ ನಾಲ್ಕನೇ ಶತಕವಾಗಿದೆ. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ ಬಂದ ಅಶ್ವಿನ್ ಕೊನೆಯ ಸೆಷನ್ʼನಲ್ಲಿ ಪಂದ್ಯವನ್ನು ತಲೆಕೆಳಗಾಗಿಸಿದರು. ಟೀಂ ಇಂಡಿಯಾ 250 ರನ್ ತಲುಪುವುದು ಕಷ್ಟ ಎನಿಸಿದ್ದಾಗ,  ಅದ್ಭುತ ಪಂದ್ಯವನ್ನಾಡಿದ ಅಶ್ವಿನ್‌ ತಂಡವನ್ನು 339 ಸ್ಕೋರ್ ಗೆ ಕೊಂಡೊಯ್ದರು.

ನ್ಯೂಜಿಲೆಂಡ್‌ʼನ ದಂತಕಥೆ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವೆಟ್ಟೋರಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಟೆಸ್ಟ್‌ʼನಲ್ಲಿ ಗರಿಷ್ಠ 4 ಶತಕಗಳನ್ನು ಗಳಿಸಿದ್ದರು. ಇದೀಗ ಅಶ್ವಿನ್ ಕೂಡ ಈ ಸ್ಥಾನವನ್ನು ಸಾಧಿಸಿದ್ದಾರೆ. ಮತ್ತೊಂದು ಶತಕ ಸಿಡಿಸಿದರೆ ಈ ದಾಖಲೆ ಮುರಿದು ಅಶ್ವಿನ್ ಒಂದು ಹೆಜ್ಜೆ ಮುಂದೆ ಸಾಗಲಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಅಶ್ವಿನ್ ಗೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬೆಂಬಲ ಕೂಡ ಸಿಕ್ಕಿತ್ತು. ಇನ್ನೊಂದು ತುದಿಯಿಂದ ಜಡೇಜಾ ಅದ್ಭುತ ಬ್ಯಾಟಿಂಗ್ ಮಾಡಿದ್ದರೆ. ದಿನದಾಟದ ಅಂತ್ಯಕ್ಕೆ ಇಬ್ಬರ ನಡುವೆ 195 ರನ್‌ʼಗಳ ಜತೆಯಾಟವಿತ್ತು. ಜಡೇಜಾ 86 ರನ್ ಗಳಿಸಿ ಕ್ರೀಸ್‌ʼನಲ್ಲಿದ್ದರೆ, ಅಶ್ವಿನ್ 102 ರನ್ ಗಳಿಸಿ ಅಜೇಯರಾಗಿದ್ದಾರೆ. ಈ ಜೊತೆಯಾಟ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಹ ಬ್ರೇಕ್‌ ಮಾಡಿದೆ. ಬಾಂಗ್ಲಾದೇಶದ ವಿರುದ್ಧ 7ನೇ ಕ್ರಮಾಂಕದ ಅತಿ ದೊಡ್ಡ ಟೆಸ್ಟ್ ಜೊತೆಯಾಟ ಎನಿಸಿಕೊಂಡಿದ್ದು, ಈ ಹಿಂದೆ ಸಚಿನ್ ಮತ್ತು ಜಹೀರ್ ಖಾನ್ ನಡುವೆ 133 ರನ್‌ʼಗಳ ಜೊತೆಯಾಟ ಕಂಡುಬಂದಿತ್ತು.

ಇದನ್ನೂ ನೋಡಿ: ಬಿವಿ ಕಾರಂತ ನೆನಪು| ಕನಸಿಲ್ಲದೆ ಬದುಕಿಲ್ಲ Janashakthi Media

Donate Janashakthi Media

Leave a Reply

Your email address will not be published. Required fields are marked *