ಬೆಂಗಳೂರು: ಮುಸ್ಲಿಂ ಸಮುದಾಯ ಹೆಚ್ಚಾಗಿ ಇರುವ ಸ್ಥಳವನ್ನು ಭಾರತವಲ್ಲ ಪಾಕಿಸ್ಥಾನ ಎಂದು ಕರ್ನಾಟಕದ ಉಚ್ಚನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ್ದಾರೆ ಎಂದು ವರದಿಯಾಗಿರುವುದು ನಮಗೆ ಆಘಾತ ಉಂಟುಮಾಡಿದೆ. ಸರ್ವ ಧರ್ಮ ಸಮಭಾವದ ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ ನಮ್ಮದು ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ ಹೇಳಿದೆ. ಧರ್ಮ
ಈಗಾಗಲೆ ವಿವಿಧ ರೀತಿಯಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ನಡೆಸುವ ಹಲವು ದೌರ್ಜನ್ಯ ಗಳಿಗೆ ದೇಶ ಸಾಕ್ಷಿಯಾಗುತ್ತಿದೆ.
ಇಂತಹ ಸಂದರ್ಭದಲ್ಲಿ ನ್ಯಾಯಪೀಠದಿಂದ ಬರುವ ಇಂತಹ ಅಭಿಪ್ರಾಯಗಳು ಜನರ ಮಧ್ಯೆ ಸಾಮರಸ್ಯವನ್ನು ಹದಗೆಡಿಸಲು ಕಾರಣವಾಗಬಹುದು ಎಂಬ ಆತಂಕ ನಮ್ಮದು ಎಂದು ಹೇಳಿದೆ. ಧರ್ಮ
ಈ ಮುಂಚೆ ಕರ್ನಾಟಕ ಹೈಕೋರ್ಟಿನ ಮತ್ತೊಬ್ಬ ನ್ಯಾಯಮೂರ್ತಿಗಳು ವಿಚಾರಣೆ ಸಂದರ್ಭದಲ್ಲಿ ಮನುಸ್ಮೃತಿಯು ಆಚಾರ, ವ್ಯವಹಾರ, ಪ್ರಾಯಶ್ಚಿತ್ತ ಬೋಧಿಸುತ್ತದೆ ಎಂದು ಪ್ರಶಂಸೆ ಮಾಡಿದ ಕೆಲವೇ ವಾರಗಳಲ್ಲಿ ಮೇಲಿನ ಕಳವಳಕಾರಿ ಪ್ರಸಂಗ ನ್ಯಾಯಾಂಗದಲ್ಲಿ ವರದಿಯಾಗಿರುವುದು ಅಘಾತಕಾರಿ ವಿದ್ಯಮಾನವಾಗಿದೆ.
ಇದನ್ನೂ ಓದಿ: ನಾಳೆ ಯಾವೆಲ್ಲಾ ಸಿನಿಮಾ ಬಿಡುಗಡೆಯಾಗಲಿವೆ: ಇಲ್ಲಿದೆ ಮಾಹಿತಿ
ವೈಯಕ್ತಿಕ ನೆಲೆಯಲ್ಲಿ ನಡೆಯಬೇಕಾದ ಪೂಜೆ ಹಬ್ಬಗಳು ಸಾರ್ವಜನಿಕ ಪ್ರಚಾರ ಸಾಧನವಾಗುವುದು ಮತ್ತು ನ್ಯಾಯಾಂಗದಲ್ಲಿರುವವರು ರಾಜಕೀಯ ವ್ಯಕ್ತಿಗಳಿಂದ ದೂರ ಇರಬೇಕು ಎಂಬ ಸದಾಶಯಗಳ ಗಡಿ ಮೀರಿ ಪ್ರಧಾನ ಮಂತ್ರಿಗಳು ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮನೆಯ ವ್ಯಕ್ತಿಗತ ಗಣೇಶ ಪೂಜೆಯಲ್ಲಿ ಪಾಲ್ಗೊಂಡು ಅದು ವಿಡಿಯೋ ಆಗಿ ಹಂಚಿಕೆಯಾಗುವುದು ಇವೆಲ್ಲವೂ ಬಹುತ್ವ ಭಾರತದ ಅಡಿಗಲ್ಲು ಸಡಿಲವಾಗುತ್ತಿದೆಯೇನೋ ಎಂಬ ಆತಂಕ ಹುಟ್ಟಿಸಿವೆ ಎಂದು ಹೇಳಿತು.
ಇಂತಹ ಸ್ಥಿತಿಗಳು ಮರುಕಳಿಸಲಾರದಂತೆ ಗಮನ ಹರಿಸುವುದು ಅಗತ್ಯವಿದೆ ಎಂದು ಬಹುತ್ವ ಭಾರತದ ಸಾಂಸ್ಕೃತಿಕ ನೆಲೆಯಲ್ಲಿ ಬದುಕಲು ಬಯಸುವ ನಾವು ಬಯಸುತ್ತೇವೆ ಎಂದಿದೆ.
ಜಾಗೃತ ನಾಗರಿಕರು ಕರ್ನಾಟಕ ಪರವಾಗಿ ಪ್ರೊ. ಕೆ. ಮರುಳಸಿದ್ಧಪ್ಪ, ಡಾ. ಜಿ. ರಾಮಕೃಷ್ಣ, ಪ್ರೊ. ಎಸ್. ಜಿ. ಸಿದ್ದರಾಮಯ್ಯ, ರುದ್ರಪ್ಪ ಹನಗವಾಡಿ, ಬಿ. ಶ್ರೀಪಾದ ಭಟ್, ಡಾ. ಮೀನಾಕ್ಷಿ ಬಾಳಿ, ಕೆ. ಎಸ್. ವಿಮಲಾ, ಜಾಣಗೆರೆ ವೆಂಕಟರಾಮಯ್ಯ, ಡಾ.ಎನ್.ಗಾಯತ್ರಿ, ಟಿ.ಸುರೇಂದ್ರ ರಾವ್, ವಸಂತ್ ರಾಜ್ ಎನ್.ಕೆ, ವಾಸುದೇವ ಉಚ್ಚಿಲ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ವಸುಂಧರಾ ಭೂಪತಿ, ಇಂದಿರಾ ಕೃಷ್ಣಪ್ಪ ಇದ್ದರು.
ಇದನ್ನೂ ನೋಡಿ: ಮುನಿರತ್ನ ರಾಜಕಾರಣಿಯೋ? ‘ವೈರ’ಸ್ ಪೀಡಕನೋ!!? Janashakthi Media