ಹಾವೇರಿ: ಶಿಕ್ಷಣವು ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬದಲಾಗಿ ವ್ಯಾಪಾರಿಕರಣವಾಗುತ್ತಿದೆ ಆದರಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು, ಹಾಗೂ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಸಂಘಟಿತರಾಗಬೇಕು ಎಂದು ವಕೀಲ ನಾರಾಯಣ ಕಾಳೆ ಹೇಳಿದರು.
ಹಾವೇರಿ ವಿಶ್ವವಿದ್ಯಾಲಯ, ಸರ್ಕಾರಿ ಶಾಲಾ-ಕಾಲೇಜು, ಹಾಸ್ಟೆಲ್ ಬಲವರ್ಧನೆಗಾಗಿ, ತಾಲ್ಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ನಗರದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ತಾಲ್ಲೂಕು ಸಮಿತಿ ಆಯೋಜಿಸಿದ 9ನೇ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ
ಹಾವೇರಿಯಲ್ಲಿ ಅನೇಕ ದಶಕಗಳಿಂದ ಸತತವಾಗಿ ವಿದ್ಯಾರ್ಥಿಗಳ ಪರವಾಗಿ ಹೋರಾಡುತ್ತಾ ಅನೇಕ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತ ಏಕೈಕ ಸಂಘಟನೆ ಎಸ್ಎಫ್ಐ ಎನ್ನಲು ಯಾವುದೇ ಸಂಶಯವಿಲ್ಲ. ಸರಕಾರಿ ಶಾಲಾ ಕಾಲೇಜುಗಳನ್ನು ಹೋರಾಟದ ಮೂಲಕ ಜಿಲ್ಲೆಯಲ್ಲಿ ನಿರ್ಮಿಸಲು ಪಾತ್ರವಾಯಿತು. ಇಷ್ಟೇಲ್ಲಾ ಹೋರಾಟಕ್ಕೆ ಪ್ರತಿಫಲ ಸಿಗಲು ತಾವೆಲ್ಲರೂ ಅಭ್ಯಾಸ ಹೋರಾಟವನ್ನು ಮುಂದುವರಿಸಬೇಕೆಂದು ಕರೆ ನೀಡಿದರು.
ಇದನ್ನೂ ಓದಿ: 101 ಲ್ಯಾಪ್‌ಟಾಪ್ ಕಳ್ಳತನ | ಕಾರ್ಮಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಅಪ್ರಮಾಣಿಕತೆ ಕಾರಣ – ಸಿಐಟಿಯು ಆರೋಪ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಾಚಾರ್ಯರಾದ ಡಿ.ಟಿ.ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳ ಪರವಾಗಿ ಹೀಗೆ ನಿರಂತರವಾಗಿ ಚಳುವಳಿ ರೂಪಿಸುವ ಸಂಘಟನೆಯ ನ್ಯಾಯಯುತ ಬೇಡಿಕೆಗಳು ಈಡೇರಲಿ. ಅಭ್ಯಾಸ ಕಡೆ ಹೆಚ್ಚು ಗಮನಾರ್ಹ ನೀಡಬೇಕು ದೇಶದ ಮುಂದಿನ ಪ್ರಜೆಗಳು ವಿದ್ಯಾರ್ಥಿ- ಯುವಕರು ಜಾಗೃತರಾಗಬೇಕು. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕಿಗಳಿಗೆ ಹೋರಾಟ ಸಂಘಟನೆ ಬಲಗೊಳ್ಳಬೇಕು ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದಂತೆ ಶಿಕ್ಷಣವನ್ನು ವ್ಯಾಪಾರ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.
‘ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ಖಾಸಗಿಕರಣಗೊಳಿಸುತ್ತಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರ ಜವಾಬ್ದಾರಿಗೆ ಒಪ್ಪಿಸುತ್ತಿದೆ. ಸಂಕಷ್ಟದಲ್ಲಿರುವ ಬಡವರನ್ನು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ಸಾಲ ತರುವ ಭಾರತ ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ, ಇದರ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿ-ಯುವಜನರ ಮುಂದಾಗಬೇಕು’ ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್, ರಾಣೇಬೆನ್ನೂರ ತಾಲ್ಲೂಕು ಕಾರ್ಯದರ್ಶಿ ಶೃತಿ ಆರ್ ಎಮ್, ಕೀರ್ತನಾ ಎಚ್ ವೇದಿಕೆಯಲ್ಲಿದ್ದರು. ಪಾರ್ವತಿ ಕರೆಮ್ಮಣ್ಣನವರ ಸ್ವಾಗತಿಸಿದರು, ಸ್ವಾತಿ ಓಲೇಕಾರ ನಿರೂಪಿಸಿದರು, ಗುದ್ಲೇಶ್ ಇಚ್ಛಂಗಿ ವಂದಿಸಿದ್ದರು. ಎಸ್ಎಫ್ಐ ಮುಖಂಡರಾದ ಸುಲೇಮಾನ್ ಮತ್ತಿಹಳ್ಳಿ, ಪರಶುರಾಮ ಹರಿಜನ, ಜಗದೀಶ್ ಎರೇಸೀಮಿ, ಜಗದೀಶ್ ಬಡಿಗೇರ್, ಮಲ್ಲಿಕಾರ್ಜುನ, ಪ್ರಗತಿ ಪಾಟೀಲ್, ವಿಜಯ ಶಿರಹಟ್ಟಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
ಇದನ್ನೂ ನೋಡಿ: ಸುಗ್ರೀವಾಜ್ಞೆ ಮೂಲಕ ಒಳ ಮೀಸಲಾತಿ ಜಾರಿ ಮಾಡಿ – ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಗ್ರಹ