ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಕನಿಷ್ಠ ಬೆಲೆಯಲ್ಲಿ ಖರೀದಿ; ಶೀಘ್ರವೇ ಆದೇಶ: ಈಶ್ವರ ಖಂಡ್ರೆ

ಬೆಂಗಳೂರು: ಮಾರಾಟಗಾರರು ಗ್ರಾಹಕರಿಗೆ ಮನೆಯಲ್ಲಿ ಇರುವ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಹಾಗೂ ಚಾರ್ಜರ್‌ಗಳನ್ನು ಇತ್ಯಾದಿ ವಸ್ತುಗಳನ್ನು ಕನಿಷ್ಠ ಬೆಲೆಯನ್ನು ನೀಡಿ ಖರೀದಿಸಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಅಪಾಯಕಾರಿಯಾದ ಇ-ತ್ಯಾಜ್ಯದ ಹೆಚ್ಚಳ ದಿನದಿಂದ ದಿನಕ್ಕೆ ಮನೆಗಳಲ್ಲೂ ಆಗುತ್ತಿರುವುದು ಮತ್ತು ಗುಜರಿ ಅಂಗಡಿಗಳಲ್ಲಿ ವಿದ್ಯುನ್ಮಾನ ಉಪಕರಣಗಳಿಂದ ಆಯ್ದ ವಸ್ತು ಮಾತ್ರ ತೆಗೆದುಕೊಂಡು ಉಳಿದ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಜಿಎಸ್‌ಟಿ ಕೌನ್ಸಿಲ್‌ನ ಮಹತ್ವದ ಸಭೆ; ಔಷಧಿಗಳ ಮೇಲಿನ ಜಿಎಸ್‌ಟಿ ಇಳಕೆ

ಸಾರ್ವಜನಿಕರ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಇ-ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಟಿವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಯಾವುದೇ ವಿಧ್ಯುನ್ಮಾನ ಉಪಕರಣ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಇಚ್ಛಿಸಿದಲ್ಲಿ, ಅವರ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಮತ್ತು ಚಾರ್ಜರ್ ಇತ್ಯಾದಿಯನ್ನು ಕಡ್ಡಾಯವಾಗಿ ಮಾರಾಟಗಾರರು ಕನಿಷ್ಠ ಬೆಲೆ ನೀಡಿ ಮರು ಖರೀದಿ ಮಾಡಬೇಕು ಎಂಬ ನಿಯಮ ಜಾರಿಗೆ ತಂದರೆ, ಇ-ತ್ಯಾಜ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಕಂಪ್ಯೂಟರ್ ಮೊಬೈಲ್ ದತ್ತಾಂಶ ದುರ್ಬಳಕೆ ಆಗದ ರೀತಿಯಲ್ಲಿ ಹಳೆಯ ವಿದ್ಯುನ್ಮಾನ ಸಲಕರಣೆಗಳ ಮರು ಖರೀದಿಯ ಸಾಧಕ-ಬಾಧಕ ಮತ್ತು ಅನುಷ್ಠಾನದ ಕುರಿತಂತೆ ಪ್ರಸ್ತಾವನೆಯನ್ನು ಕಡತದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಿದೆ.

ಇದನ್ನೂ ನೋಡಿ: ಶಾಪಿಂಗ್‌ ಮಾಲ್‌ ಆಗಿ ಬಿಡಿಎ ಕಾಂಪ್ಲೆಕ್ಸ್ : ಸೆಪ್ಟೆಂಬರ್ 12 ರಂದು ಬೃಹತ್ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *