ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹ; ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ

ಬೆಂಗಳೂರು: ಕಾಮಗಾರಿಗಳ ಸ್ಥಗಿತಗೊಳಿಸಿ  ಬಿಬಿಎಂಪಿ ಗುತ್ತಿಗೆದಾರರು ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು.

ಕಳೆದ 2021ರ ಏಪ್ರಿಲ್ ನಂತರದ ಕಾಮಗಾರಿಗಳ ಬಿಲ್ ಮೊತ್ತದಲ್ಲಿ ಈವರೆಗೆ ಶೇ.75ರಷ್ಟನ್ನು ಮಾತ್ರ ಪಾವತಿ ಮಾಡಲಾಗಿದೆ.

ಉಳಿದ ಶೇ.25ನ್ನು ಪಾವತಿಸದೇ ಬಿಬಿಎಂಪಿ ನಿರ್ಲಕ್ಷ್ಯವಹಿಸುತ್ತಿದೆ. ಬಿಲ್ ಪಾವತಿಗೆ ಆಗ್ರಹಿಸಿ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಲ್ ಪಾವತಿಸುವವರೆಗೆ ವಾರ್ಡ್ ಮಟ್ಟದ ಕಾಮಗಾರಿಗಳು, ರಸ್ತೆ ನಿರ್ವಹಣೆ ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುತ್ತಿದೆ ಎಂದು ಗುತ್ತಿಗೆದಾರರು ಹೇಳಿದರು.

ಇದನ್ನು ಓದಿ : ಕೋವಿಡ್ ಸಂದರ್ಭದಲ್ಲಿ ಮಾನವೀಯತೆಯಿಂದ ಕೆಲಸ ಮಾಡ ಬೇಕಿದ್ದ ಸರ್ಕಾರ ಲೂಟಿ ಮಾಡಿದೆ; ಸಚಿವ ಎಂ.ಬಿ ಪಾಟೀಲ್

ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಮಾತನಾಡಿ, ಉಪಮುಖ್ಯಮಂತ್ರಿ ಅವರಿಗೆ ಈ ವಿಚಾರ ತಿಳಿದಿದೆ. ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು ಆದಾಗ್ಯೂ, ಸಮಸ್ಯೆ ಬಗೆಹರಿದಿಲ್ಲ ಎಂದು ಕಿಡಿಕಾರಿದರು.

ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ನಿರ್ಲಕ್ಷ್ಯದಿಂದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.ಕಾಮಗಾರಿಗಳಿಗಾಗಿ ಸಾಕಷ್ಟು ಮಂದಿ ಗುತ್ತಿಗೆದಾರರು ಅಪಾರ ಪ್ರಮಾಣದ ಸಾಲ ಪಡೆದು ಹಣ ಹೂಡಿದ್ದಾರೆ, ಈಗ ಬಾಕಿ ಅದರ ಇಎಂಐ ಕಟ್ಟಬೇಕಿದೆ. ಬಿಬಿಎಂಪಿ ಬಿಲ್‌ಗಳನ್ನು ತೆರವುಗೊಳಿಸದ ಕಾರಣ, ಎಲ್ಲಾ ಕೆಲಸಗಳನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಪಾಲಿಕೆ ವಿರುದ್ಧ ಗುತ್ತಿಗೆದಾರರು ಘೋಷಣೆ ಕೂಗುತ್ತಿದ್ದಂತೆಯೇ ಹಲಸೂರು ಗೇಟ್ ಪೊಲೀಸರು ಅವರನ್ನು ತಡೆದು, ವಶಕ್ಕೆ ಪಡೆದರು. ಬಳಿಕ ಸಂಜೆ ವೇಳೆಗೆ ಬಿಡುಗಡೆ ಮಾಡಿದರು.

ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಗುತ್ತಿಗೆದಾರರು ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡಬಾರದು. ಕಾಮಗಾರಿ ಕೆಲಸಕ್ಕೆ ಒಬ್ಬ ಗುತ್ತಿಗೆದಾರರ ವಿರೋಧ ವ್ಯಕ್ತಪಡಿಸಿದರೆ ಮತ್ತೊಬ್ಬರು ಗುತ್ತಿಗೆದಾರ ಕೆಲಸ ಕೈಗೆತ್ತಿಕೊಳ್ಳುತ್ತಾನೆಂದು ಹೇಳಿದ್ದಾರೆ.

ಇದನ್ನು ನೋಡಿ : ಕೋವಿಡ್ (Covid) ಸಮಯದಲ್ಲಿ ಬಿಜೆಪಿಯವರು ಮಾನವೀಯತೆಯಿಂದ ಕೆಲಸ ಮಾಡುವ ಬದಲು, ಲೂಟಿ ಮಾಡಿದ್ದಾರೆ

Donate Janashakthi Media

Leave a Reply

Your email address will not be published. Required fields are marked *