ಜಮ್ಶೇಡ್ಪುರ : ಗುರುವಾರ, 29 ಆಗಸ್ಟ್, ಜಾರ್ಖಂಡ್ನ ಜಮ್ಶೇಡ್ಪುರದಲ್ಲಿ 60 ವರ್ಷದ ವ್ಯಕ್ತಿಯೊಬ್ಬರ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ.
ಸಂತ್ರಸ್ತ ಹೇಮಂತ್ ಸಿಂಗ್ ಮಾವು ಪ್ರದೇಶದ ಡಿಮ್ನಾ ರಸ್ತೆಯಲ್ಲಿ ಕತ್ತಿನಲ್ಲಿದ್ದ ಹಾವನ್ನು ಜನರಿಗೆ ತೋರಿಸಿ ಹಣ ಸಂಪಾದಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಕುತ್ತಿಗೆಗೆ ಹಾವು ಸುತ್ತಿಕೊಂಡು ಹಣ ಸಂಪಾದಿಸಲು ಯತ್ನಿಸುತ್ತಿದ್ದ ವೇಳೆ ಏಕಾಏಕಿ ಹಾವು ಗಂಟಲಿಗೆ ಬಿಗಿದಿದೆ. ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಹಿರಿಯ ರಾಜಕಾರಣಿ ಕೆ. ಎಚ್ ಶ್ರೀನಿವಾಸ್ ನಿಧನ
ವ್ಯಕ್ತಿ ಮೃತಪಡುತ್ತಿದ್ದಂತೆ ಹಾವು ಬಿಗಿ ಸಡಿಲಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಹೇಮಂತ್ ಸಿಂಗ್ ಸಾವನ್ನಪ್ಪಿದ ಬಳಿಕ ಹಾವು ಹಿಡಿತ ಸಡಿಲಗೊಳಿಸಿದೆ. ಹಾವು ಹಿಡಿಯುವವನು ಅದನ್ನು ಸೆರೆಹಿಡಿಯುವ ಮೊದಲು ಆ ಪ್ರದೇಶದಲ್ಲಿ ಸಂಚರಿಸಿದೆ. ನಂತರ ಅದನ್ನು ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ‘ಪ್ರಜಾ ಕವಿ, ಪ್ರಜಾ ಗಾಯಕ ಗದ್ದರ್– ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮ ಆಗಸ್ಟ್ 26 ರಂದು ಟೌನ್ಹಾಲ್ನಲ್ಲಿ ನಡೆಯಿತು.