ಅದಾನಿ ಗ್ರೂಪ್ ಹಣಕಾಸು ವ್ಯವಹಾರಗಳ ಹಗರಣದಲ್ಲಿ ಸೆಕ್ಯೂರೆಟಿ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮುಖ್ಯಸ್ಥೆ ಮದ್ಹಾಬಿ ಪುರಿ ಬುಕ್ ಪಾಲು ಹೊಂದಿದ್ದಾರೆ ಎಂದು ಹಿಂಡೆನ್ ಬರ್ಗ್ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಗಂಭೀರ ಆರೋಪ ಮಾಡಿದೆ.
ಭಾರತಕ್ಕೆ ಶೀಘ್ರದಲ್ಲೇ ದೊಡ್ಡ ಸುದ್ದಿ ಬರಲಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಿಂಡೆನ್ ಬರ್ಗ್ ಅದಾನಿ ಗ್ರೂಪ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಯಾವುದೇ ಕಂಪನಿ ಅಪಾಯಕಾರಿ ಹೂಡಿಕೆ ಅಥವಾ ಹಣಕಾಸು ವಹಿವಾಟು ಹಾಗೂ ನಿಯಮಬಾಹಿರ ಪೈಪೋಟಿ ನಿಯಂತ್ರಿಸುವ ಮಹತ್ವದ ಜವಾಬ್ದಾರಿ ಹೊಂದಿರುವ ಸೆಬಿ, ಅದಾನಿ ಗ್ರೂಪ್ ಕಂಪನಿಗಳು ಏಕಾಏಕಿ ಭಾರೀ ಹೂಡಿಕೆ ಅಥವಾ ನಿಯಮಗಳ ಉಲ್ಲಂಘಿಸಲು ನೆರವಾಗಿದೆ ಎಂದು ಆರೋಪಿಸಿದೆ.
ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಧವಲ್ ಬುಕ್ ಬರ್ಮುಡಾ ಮತ್ತು ಮಾರಿಷಸ್ ಹೊಂದಿರುವ ಆಸ್ತಿಯನ್ನು ಮರೆಮಾಚಿದ್ದಾರೆ. ಇದಕ್ಕಾಗಿ ಅವರು ಅದಾನಿ ಸಂಬಂಧಿ ವಿನೋದ್ ಅದಾನಿ ಅವರನ್ನು ಬಳಸಿಕೊಂಡಿದ್ದಾರೆ ಎಂದು ವಿವರಿಸಲಾಗಿದೆ. ಮಾಧವಿ ಬುಚ್ ಮತ್ತು ಪತಿ ಧವಲ್ ಬುಕ್ ಜೂನ್ 5, 2015ರಂದು ಸಿಂಗಾಪುರದಲ್ಲಿ ಐಪಿಇ ಪ್ಲಸ್ ಫಂಡ್-1ರಲ್ಲಿ ತಮ್ಮ ಖಾತೆ ತೆರೆದಿದ್ದು, ಹೂಡಿಕೆಯ ಭಾಗ ಮತ್ತು ವೇತನ ಸೇರಿ 10 ದಶಲಕ್ಷ ಡಾಲರ್ ಮೊತ್ತ ಗಳಿಸಿದ್ದಾರೆ ಎಂದು ಹಿಂಡೆನ್ ಬರ್ಗ್ ದಾಖಲೆಗಳನ್ನು ಬಿಡುಗಡೆ ಮಾಡಿದೆ.
ಆದರೆ ಹಿಂಡೆನ್ ಬರ್ಗ್ ಆರೋಪವನ್ನು ಸೆಬಿ ಮುಖ್ಯಸ್ಥೆ ಮದ್ಧಾಬಿ ಪುರಿ ಬುಕ್ ತಳ್ಳಿ ಹಾಕಿದ್ದು, ಇದು ಆಧಾರ ರಹಿತ ಹಾಗೂ ಚಾರಿತ್ರ್ಯ ವಧೆ ಮಾಡುವ ಆರೋಪವಾಗಿದೆ ಎಂದು ತಿರುಗೇಟು ನೀಡಿದ್ದಾರೆ.