ಸತತ 9ನೇ ಬಾರಿ ರೆಪೋ ದರದಲ್ಲಿ ಬದಲಾವಣೆ ಮಾಡದ ಆರ್‌ಬಿಐ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ನಿರ್ಧರಿಸಿದೆ. ಈ ಮೂಲಕ ಬ್ಯಾಂಕಿಂಗ್ ಕ್ಷೇತ್ರಗಳ ಬಡ್ಡಿದರಗಳಲ್ಲಿ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

6 ಸದಸ್ಯರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯೋಜನಾ ನಿಗಾ ಸಂಸ್ಥೆ ಸತತ 9ನೇ ಬಾರಿ ರೆಪೋ ದರ ಯಥಾಸ್ಥಿತಿ ಉಳಿಸಿಕೊಂಡಿದೆ. ಈ ಮೂಲಕ ಬ್ಯಾಂಕಿಂಗ್ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಮಾಡುವ ಆಸಕ್ತಿ ತೋರಿಲ್ಲ.

6 ಸದಸ್ಯರ ಸಮಿತಿಯಲ್ಲಿ 4 ಮಂದಿ ರೆಪೋ ದರ ಯಥಾಸ್ಥಿತಿ ಉಳಿಸಿಕೊಳ್ಳಲು ಮತ ಚಲಾಯಿಸಿದರೆ, ಇಬ್ಬರು ಬದಲಾವಣೆ ಪರ ಮತ ಹಾಕಿದ್ದಾರೆ. ಬಹುಮತದ ಹಿನ್ನೆಲೆಯಲ್ಲಿ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *