ಸತ್ತ ಹೆಣವೇ ಕಳ್ಳತನ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಕಳ್ಳಾಟ ಬಯಲು | ದೇಹದಾನ ಕೊರತೆಯೇ ಕಾರಣ?

ಹುಬ್ಬಳ್ಳಿ :  ಕಿಮ್ಸ್​ನಲ್ಲಿ ಸಾವನಪ್ಪಿದ ಮೃತದೇಹವೇ ನಾಪತ್ತೆಯಾದ ವಿಚಿತ್ರ ಘಟನೆ ನಡೆದಿದೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ.

ಸತ್ತ ಹೆಣದ ಕಳ್ಳತನದಲ್ಲಿ ಸಿಬ್ಬಂದಿಯ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಮೃತನ ಸಂಬಂಧಿಕರು ಬಂದು ಕೇಳಿದರೂ ಸಿಬ್ಬಂದಿ ಶವ ನೀಡಿಲ್ಲ. ಈ ಹಿನ್ನಲೆ ಅನುಮತಿ ಇಲ್ಲದೆ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಶವ ಬಳಸಿಕೊಂಡಿರುವ ಅನುಮಾನ ವ್ಯಕ್ತವಾಗಿದ್ದು, ಈ ಮೂಲಕ ಕಿಮ್ಸ್ ಆಸ್ಪತ್ರೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.

ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಮೃತದೇಹ ದಾನ ಮಾಡಿ ಎಂದು ಕಿಮ್ಸ್ ಅಧಿಕಾರಿಗಳು ಮೃತನ ಕುಟುಂಬಸ್ಥರಿಗೆ ಒತ್ತಡ ಹಾಕುತ್ತಿದ್ದಾರೆ. ಇನ್ನು ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹತಾವುಲ್ಲಾ, ಕಳೆದ 15 ದಿನದಿಂದ ಮನೆಗೆ ಬಂದಿರಲಿಲ್ಲ. ಇತ್ತ ಆತನ ಕುಟುಂಬ ನಾಪತ್ತೆಯಾಗಿದ್ದವನಿಗಾಗಿ ಹುಡುಕಾಟ ನಡೆಸಿದ್ದರು. ಅದರಂತೆ ಜುಲೈ 27 ರಂದು ವಿದ್ಯಾನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಉಣಕಲ್​ನ ಸುಭಾನಿ ನಗರದ ಮೃತ ವ್ಯಕ್ತಿ ಹತಾವುಲ್ಲಾ ಖಾನ್ (40) ಪತ್ತೆಯಾಗಿದ್ದ.

ಇದನ್ನೂ ಓದಿಸೇವೆಯಿಂದ ನಿವೃತ್ತಿ: ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಮೂಲಕ ಕಾರ್ಯನಿರ್ವಹಿಸಿದ ಕೋದಂಡರಾಮಪ್ಪ

ಬಳಿಕ ಆತನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ‌ ಸೇರಿಸಿದ್ದರು. ಆದರೆ, ಅಂದು ಸ‌ಂಜೆಯೇ ಹತಾವುಲ್ಲಾ ಮೃತಪಟ್ಟಿದ್ದ. ಈ ವಿಷಯ‌ವನ್ನು ಕಿಮ್ಸ್ ಮತ್ತು ಪೊಲೀಸ್ ಸಿಬ್ಬಂದಿ ಮನೆಯವರಿಗೆ ತಿಳಿಸಿಲ್ಲ. ಶನಿವಾರ ಕಿಮ್ಸ್ ಆಸ್ಪತ್ರೆಯಲ್ಲಿ ಪತಿ ಇರುವ ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆ ಬಂದಾಗ ಸಾವಿನ ಮಾಹಿತಿ ಲಭ್ಯವಾಗಿದೆ. ಆದರೆ, ಸಿಬ್ಬಂದಿ ಶವ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಈ ಕುರಿತು ಮಾದ್ಯಮದವರು ಕಿಮ್ಸ್ ಗೆ ಹೋದ ಬಳಿಕ ಸಿಬ್ಬಂದಿಗಳು ಮೃತದೇಹ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.  ಕಿಮ್ಸ್ ಆಸ್ಪತ್ರೆಯ‌ ಮೆಡಿಕಲ್ ಕಾಲೇಜಿನಲ್ಲಿದ್ದ ಹತಾವುಲ್ಲಾ ಖಾನ್‌ ಮೃತದೇಹ ನೀಡಲಾಗಿದೆ. ಕೆಲ‌ಕಾಲ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ದೇಹದಾನದ ಅಗತ್ಯತೆ : ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಮೃತದೇಹಗಳ ಅಧ್ಯಯನ ಮಹತ್ವದ್ದಾಗಿದೆ. ಕೇವಲ ಪುಸ್ತಕಗಳನ್ನು ಓದಿ ಅನುಭವ ಪಡೆಯಲು ಸಾಧ್ಯವಿಲ್ಲ ಹಾಗಾಗಿ,ಮಾನವ ದೇಹದ ರಚನೆಯ ಬಗ್ಗೆ ತಿಳಿಯಲು ವೈದ್ಯಕೀಯ ವಿದ್ಯಾರ್ಥಿಗಳು ಇದನ್ನು ಬಳಸುತ್ತಾರೆ. ಇದರಿಂದ ವಿದ್ಯಾರ್ಥಿಗಳು ಮಾನವ ದೇಹದ “ಅನುಭವ” ವನ್ನು ಪಡೆಯುತ್ತಾರೆ. ಹಾಗಾಗಿ ಜನ ಮೃತರಾದಾಗ ದೇಹದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕಿದೆ. “ದೇಹ ದಾನ” ಎಂಬುದು ವೈದ್ಯಕೀಯ ವಿಜ್ಞಾನಕ್ಕೆ ಮರಣದ ನಂತರ ಮಾನವ ದೇಹವನ್ನು ದಾನ ಮಾಡುವ ಪ್ರಕ್ರಿಯೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *