ಮಾಜಿ ವಿಶ್ವದ ನಂ.1 ಆಟಗಾರ್ತಿ ದೀಪಿಕಾ ಕುಮಾರಿ ಮಹತ್ವದ ಹಂತದಲ್ಲಿ ಕೈ ಚೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗಳಿಸುವ ಅವಕಾಶ ಕಳೆದುಕೊಂಡಿದ್ದಾರೆ.
ಶನಿವಾರ ನಡೆದ ವನಿತೆಯರ ಸಿಂಗಲ್ಸ್ ಆರ್ಚರಿ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾದ ನಮ್ ಶ್ಯೂಯೆನ್ ವಿರುದ್ಧ 4-2ರಿಂದ ಮುನ್ನಡೆ ಸಾಧಿಸಿದ್ದ ದೀಪಿಕಾ ಕುಮಾರಿ ನಿರ್ಣಾಯಕವಾಗಿದ್ದ ಅಂತಿಮ ಸೆಟ್ ನಲ್ಲಿ ಮುಗ್ಗರಿಸಿ ಪದಕದ ರೇಸ್ ನಿಂದ ಹೊರಬಿದ್ದರು.
ಈ ಮೂಲಕ ಭಾರತದ ಆರ್ಚರಿಗಳು ಪ್ರಧಾನ ಘಟ್ಟದಲ್ಲಿ ಎಡವುವ ಸಂಪ್ರದಾಯ ಮುಂದುವರಿಸಿದ್ದಾರೆ. ಈಗಾಗಲೇ ಭಾರತ ಮಹಿಳಾ ತಂಡ ಮತ್ತು ಪುರುಷರ ತಂಡ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರೀಕ್ವಾರ್ಟರ್ ಮತ್ತು ಕ್ವಾರ್ಟರ್ ಫೈನಲ್ ಹಂತದವರೆಗೂ ಉತ್ತರ ಪ್ರದರ್ಶನ ನೀಡಿ ನಂತರ ಮುಗ್ಗರಿಸುತ್ತಿದ್ದಾರೆ.