ಶಾಲಾ ಮಕ್ಕಳಿಗೆ ಸಿಗದ ಜಾತಿ ಪ್ರಮಾಣ ಪತ್ರ – ಶಾಲೆ ಬಿಟ್ಟು ಡಿಸಿ ಕಚೇರಿಗೆ ಬಂದು ಪ್ರತಿಭಟಿಸಿದ ಮಕ್ಕಳು

ಧಾರವಾಡ: ಜಾತಿ ಪ್ರಮಾಣಪತ್ರ ನೀಡದ ಕಾರಣ ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ ಎಸ್‌ಸಿ ಸಿಳ್ಳಿಕ್ಯಾತರ ಜನಾಂಗದ ಶಾಲಾ ಮಕ್ಕಳನ್ನು ಶಾಲೆಯಿಂದ ಹೊರ ಹಾಕಲಾಗಿದೆ ಎಂದು ಆರೋಪಿಸಿ ಪಾಲಕರು ಮಕ್ಕಳ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು.

ಸಿಳ್ಳಿಕ್ಯಾತರ ಹಾಗೂ ಕಿಳ್ಳಿಕ್ಯಾತರ ಎಂಬ ಜಾತಿ ಮಧ್ಯೆ ಕೆಲ ವ್ಯತ್ಯಾಸ ಹಾಗೂ ಗೊಂದಲವಿದ್ದು, ಈ ಹಿನ್ನೆಲೆಯಲ್ಲಿ ಸಿಳ್ಳಿಕ್ಯಾತ ಮಕ್ಕಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೊಟ್ಟಿಲ್ಲ. ಜಾತಿ ಪ್ರಮಾಣಪತ್ರ ನೀಡದ ಹಿನ್ನೆಲೆಯಲ್ಲಿ ಗಿರಿಯಾಲ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳುತ್ತಿಲ್ಲ. ಮಕ್ಕಳಿಗೆ ಯಾವ ಸೌಲಭ್ಯಗಳನ್ನೂ ನೀಡುತ್ತಿಲ್ಲ ಎಂದು ಪಾಲಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ವಯನಾಡ್ ಭೂಕುಸಿತದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವು, ಹಲವರು ನಾಪತ್ತೆ

ಸಚಿವ ಸಂತೋಷ ಲಾಡ್ ಬರುವವರೆಗೂ ಡಿಸಿ ಕಚೇರಿಯಲ್ಲೇ ಮಕ್ಕಳ ಸಮೇತ ಕುಳಿತ ಪಾಲಕರು ಸಚಿವರ ಎದುರು ತಮ್ಮ ಸಮಸ್ಯೆ ಹೇಳಿಕೊಂಡರು. ಮೂರ್ನಾಲ್ಕು ಕುಟುಂಬಸ್ಥರು ತಪ್ಪು ಮಾಡಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡ ಕಾರಣ ಇಡೀ ಸಿಳ್ಳಿಕ್ಯಾತ ಜನಾಂಗದ ಯಾವೊಬ್ಬರಿಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಹುಬ್ಬಳ್ಳಿ ತಹಶೀಲ್ದಾರರು ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ಲಾಡ್ ಅವರು ತಹಶೀಲ್ದಾರರಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಅಲ್ಲದೇ ಗ್ರೇಡ್ ಆಫೀಸರನ್ನು ಸ್ಥಳಕ್ಕೆ ಕರೆಯಿಸಿ ಎಂದು ಸಚಿವರು ಸೂಚನೆ ನೀಡಿದರು. ಈ ವೇಳೆ ಪ್ರತಿಭಟನಾಕಾರರೊಬ್ಬರು ನಮಗೆ ಯಾವುದಾದರೊಂದು ಜಾತಿ ಪ್ರಮಾಣಪತ್ರ ಕೊಡಿ ಇದೆಲ್ಲ ತಹಶೀಲ್ದಾರರು ಮಾಡಿದ ಸಮಸ್ಯೆ ಎಂದು ತಹಶೀಲ್ದಾರರ ಮೇಲೆ ಆಕ್ರೋಶಗೊಂಡು ಎಲ್ಲ ಕಾಗದಪತ್ರಗಳನ್ನು ಬಿಸಾಕಿದ ಪ್ರಸಂಗ ನಡೆಯಿತು.

ಇದನ್ನೂ ನೋಡಿ: ವಿವಿಧತೆಯಲ್ಲಿ ಏಕತೆ ಕಾಣುವುದೇ ಭಾರತೀಯತೆ – ಶೈಲಜ ಟೀಚರ್ Janashakthi Media

Donate Janashakthi Media

Leave a Reply

Your email address will not be published. Required fields are marked *