ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಬಜೆಟ್‌ನ ಪ್ರಮುಖಾಂಶಗಳು ಇಂತಿವೆ:
- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಂದಿನ 5 ವರ್ಷಕ್ಕೆ ವಿಸ್ತರಣೆ
- ಉದ್ಯೋಗ, ಎಂಎಸ್‌ಎಂಇ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿ ಹಲವು ಯೋಜನೆ
- ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ
- ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ
- ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ48 ಲಕ್ಷ ಕೋಟಿ ಮೀಸಲು
- ಕೇಂದ್ರ ಬಜೆಟ್‌ನಲ್ಲಿ ಒಟ್ಟು 9 ಅಂಶಗಳಿಗೆ ಆದ್ಯತೆ
- ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ನಗರ ಅಭಿವೃದ್ಧಿ, ಇಂಧನ ಹಾಗೂ ಸಂಶೋಧನೆಗೆ ಆದ್ಯತೆ
ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷಣ ಸಚಿವರೇ ನೇರ ಹೊಣೆ; ರಾಹುಲ್ ಗಾಂಧಿ ಆರೋಪ
ಕೃಷಿ ವಲಯಕ್ಕೆ
- ದೇಶದ 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ನಡೆಸಲು ಯೋಜನೆ
- ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನ 5 ರಾಜ್ಯಗಳಲ್ಲಿ ನೀಡಲು ಕೇಂದ್ರ ಸಿದ್ದತೆ
- 52 ಲಕ್ಷ ಕೋಟಿ ರೂ. ಹಣ ಕೃಷಿ ವಲಯಕ್ಕೆ ಮೀಸಲು
- ಸಹಜ ಕೃಷಿಗೆ ಆದ್ಯತೆ ನೀಡಲು ಸರ್ಕಾರದ ಸರ್ವ ಕ್ರಮ
- ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ
- ತರಕಾರಿ ಬೆಳೆಗಳ ಉತ್ಪಾದನೆ, ಸಂಗ್ರಹ ಉತ್ತೇಜನಕ್ಕಾಗಿ ರೈತರಿಗೆ ನೆರವು
- ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ
- ಎಣ್ಣೆ ಕಾಳುಗಳ ಉತ್ಪಾದನೆ, ಶೇಖರಣೆ ಹಾಗೂ ಮಾರಾಟಕ್ಕೆ ಆದ್ಯತೆ
ಉದ್ಯೋಗ ಸೃಷ್ಟಿಗೆ
- ಉದ್ಯೋಗ ಸೃಷ್ಟಿಗೆ ಮೂರು ಕೌಶಲ್ಯ ಯೋಜನೆಗಳ ಜಾರಿ
- ಮುದ್ರಾ ಯೋಜನೆ ಸಾಲ 10 ಲಕ್ಷ ರೂ. ನಿಂದ 20 ಲಕ್ಷ ರೂ.ಗೆ ಏರಿಕೆ
- ಸ್ಟ್ರೀಟ್ ಫುಡ್ ಹಬ್‌ಗಳ ಅಭಿವೃದ್ಧಿಗೆ ನಿರ್ಧಾರ
- ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ನೆರವು
ಶಿಕ್ಷಣ ಕ್ಷೇತ್ರಕ್ಕೆ
- ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ
ಬಿಹಾರ, ಆಂಧ್ರಕ್ಕೆ ಬಂಪರ್ ಗಿಫ್ಟ್
- ಎನ್‌ಡಿಎ ಮಿತ್ರ ಪಕ್ಷಗಳ ರಾಜ್ಯಗಳಿಗೆ ಮೋದಿ ಸರ್ಕಾರದ ಗಿಫ್ಟ್
- ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ವಿಶೇಷ ಅನುದಾನದ ಭರವಸೆ
- ಆಂಧ್ರ ಪ್ರದೇಶಕ್ಕೆ ಪುನರ್ ನಿರ್ಮಾಣ ಮನವಿಗೆ ಕೇಂದ್ರದ ಅಸ್ತು
- ಬಿಹಾರ ರಾಜ್ಯದ ಅಭಿವೃದ್ಧಿಗೂ ಹೊಸ ಯೋಜನೆ
- ಪ್ರವಾಹ ಪೀಡಿತ ಬಿಹಾರಕ್ಕೆ 11,500 ಕೋಟಿ ರೂ. ಅನುದಾನ
- ಬಿಹಾರವನ್ನು ಜಾಗತಿಕ ಪ್ರವಾಸೋದ್ಯಮ ಹಬ್ ಮಾಡುವ ತೀರ್ಮಾನ
- ನಳಂದಾವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಮಾಡಲು ಕ್ರಮ
- ಬೋಧಗಯಾದಲ್ಲಿ ಮಹಾ ಬೋಧಿ ದೇವಸ್ಥಾನ ಕಾರಿಡಾರ್
- ಬಿಹಾರ ರಾಜ್ಯದಲ್ಲಿ ದೊಡ್ಡ ರಸ್ತೆಗಳು & ಎಕ್ಸ್‌ಪ್ರೆಸ್ ವೇಗೆ 26 ಸಾವಿರ ಕೋಟಿ ರೂ. ಅನುದಾನ
- ಬಿಹಾರದ ವಿದ್ಯುತ್ ಯೋಜನೆಗಳಿಗೆ 21,400 ಕೋಟಿ ರೂ.
ಮೂಲಸೌಕರ್ಯ ಅಭಿವೃದ್ಧಿ
- ಪ್ರಧಾನ ಮಂತ್ರಿ ಆವಾಸ್ ಯೋಜಹನೆ ಅಡಿ ದೇಶಾದ್ಯಂತ ಮೂರು ಕೋಟಿ ಹೊಸ ಮನೆಗಳ ನಿರ್ಮಾಣ
- ನಗರಾಭಿವೃದ್ಧಿಗೆ ಬಜೆಟ್‌ನಲ್ಲಿ ಪ್ರಧಾನ ಆದ್ಯತೆ
- ಟೌನ್ ಪ್ಲಾನಿಂಗ್ ಸ್ಕೀಂ ಅಡಿ ಅಭಿವೃದ್ಧಿ
- ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷ ಆದ್ಯತೆ
- ಮೂಲ ಸೌಕರ್ಯ ಅಭಿವೃದ್ಧಿಗೆ ದೇಶಾದ್ಯಂತ 11 ಲಕ್ಷ ಕೋಟಿ ರೂ. ವಿನಿಯೋಗ
- ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ದಿ
ಸಾರಿಗೆ ಸಂಪರ್ಕ
- ಬೆಂಗಳೂರು – ಹೈದರಾಬಾದ್ ಹೆದ್ದಾರಿ ಅಭಿವೃದ್ದಿ ಯೋಜನೆ
- 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂ ತ ರೈಲ್ವೆ ಯೋಜನೆಗಳು
- ಬಿಹಾರದಲ್ಲಿ ರಸ್ತೆ ಅಭಿವೃದ್ದಿಗೆ 26 ಸಾವಿರ ಕೋಟಿ
- ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಸರ್ವ ಋತು ರಸ್ತೆ ಅಭಿವೃದ್ದಿ
ಇಂಧನ
- ‘ಪಿಎಂ ಸೂರ್ಯ ಘರ್’ ಯೋಜನೆ ಅಡಿ ರೂಫ್ ಟಾಪ್ ಸೋಲಾರ್ ಶಕ್ತಿ ಯೋಜನೆ
- 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ
ಇದನ್ನೂ ನೋಡಿ: Union Budget 2024 | ಕೇಂದ್ರ ಬಜೆಟ್ 2024 : ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್