ರಾಯಚೂರು: ಶಾಲಾ ಕಾಲೇಜು ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಎಸ್ಎಫೈ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್ ಡಿಪೋಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆ, ತಾಲೂಕಿನ, ಕಟಕನೂರು, ಗಟ್ಟು ಬಿಚ್ಚಾಲೆ, ಬಿ.ಹನುಮಾಪುರು, ಎಲೆಬಿಚ್ಚಾಲಿ, ಎನ್. ಹನುಮಾಪುರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 800-1000 ವಿದ್ಯಾರ್ಥಿಗಳು ಗಿಲ್ಲೆಸೂಗೂರು ಹೋಬಳಿಗೆ ಉನ್ನತ ಮಟ್ಟದ ವ್ಯಾಸಂಗಕ್ಕೆ ಎಂದು ಶಾಲಾ, ಕಾಲೇಜುಗಳಿಗೆ ವಿದ್ಯಾಭ್ಯಾಸ ಮಾಡಲು ಹೋಗುತಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಬಸ್ಗಳು ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಆದರೆ ಪ್ರಸ್ತುತ ಮಾನವಿ ಯಿಂದ ಗಿಲ್ಲೆಗೂಸೂರಿಗೆ ಹೋಗುವ ಬಸ್ಸು ಕಟಕನೂರು ಗ್ರಾಮಕ್ಕೆ ಬೆಳಿಗ್ಗೆ 9:45 ಕ್ಕೆ ಬರುವುದರಿಂದ ವಿದ್ಯಾರ್ಥಿಗಳು ಗಿಲ್ಲೆಸೂಗೂರಿನಲ್ಲಿರುವ ಶಾಲಾ-ಕಾಲೇಜುಗಳಿಗೆ ನಿಗದಿತ ಸಮಯಕ್ಕೆ ಹೋಗಲು ಆಗದೆ ಪ್ರಾರ್ಥನೆ ಮತ್ತು ಒಂದು ಅಥವಾ ಎರಡು ಸಮಯದ ಪಾಠದ ಅವಧಿ ಮುಗಿದ ನಂತರ ತರಗತಿಗೆ ಹಾಜರಾಗುತ್ತಿದ್ದಾರೆ ಇದರಿಂದ ಮಕ್ಕಳ ಕಲಿಕಾ ಗುಣಮಟ್ಟ ಕಡಿಮೆ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ಅನ್ನುತ್ತಿರ್ಣರಾಗಲು ಕಾರಣವಾಗುತ್ತಿದೆ ಎಂದು ದುರಿದರು.
ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಎಲ್ಲರಿಂದ ನಿಂದನೆಗೆ ಒಳಪಟ್ಟು ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಮುಂದುವರೆಸದೆ ಅರ್ಧಕ್ಕೆ ಬಿಡುತಿದ್ದಾರೆ. ಆದ್ದರಿಂದ ಕಟಕನೂರು ನಿಂದ ಗಿಲ್ಲೆಸೂಗೂರಿಗೆ ಬೆಳಿಗ್ಗೆ 8:30 ಕ್ಕೆ ಮತ್ತು ಗಿಲ್ಲೆಸೂಗೂರು ದಿಂದ ಕಟಕನೂರಿಗೆ ಸಾಯಂಕಾಲ 5:00 ಕ್ಕೆ ಸಮಯಕ್ಕೆ ಸರಿಯಾಗಿ ಒಂದು ವಾರದ ಒಳಗಡೆ ಬಸ್ಸು ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೋಡಬೇಕೆಂದು ಎಸ್ಎಫ್ಐ ಮುಖಂಡ ಆಗ್ರಹಿಸಿದರು.
ಇದನ್ನೂ ಓದಿ: ಹೊಸ ಪಡಿತರ ಚೀಟಿ ಅರ್ಜಿ ಹಾಕಿರುವ ಬಡ ಪಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿ; ಡಿವೈಎಫ್ಐ ಒತ್ತಾಯ
ಒಂದುವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರೊಂದಿಗೆ ರಾಯಚೂರು ಬಸ್ಸು ಡಿಪೋ ಮುಂದೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಸಂಘಟನೆಯ ರಾಯಚೂರು ಜಿಲ್ಲಾಧ್ಯಕ್ಷರಾದ ರಮೇಶ ವೀರಾಪೂರು, ಜಿಲ್ಲಾ ಸಹಕಾರ್ಯದರ್ಶಿ ಚಿದಾನಂದ ಕರಿಗೂಳಿ, ಚಾಗಭಾವಿ, ಹನುಮಂತ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹೀರಾಪೂರ, ಭೀಮಯ್ಯ ಗ್ರಾಮ ಪಂಚಾಯತಿ ಸದಸ್ಯರು ಕಟಕನೂರು, ಸುಂದರ ವಿದ್ಯಾರ್ಥಿ ಮುಖಂಡರು ಹಾಗೂ ಊರಿನ ಮುಖಂಡರಾದ, ಶೇಖರಪ್ಪ, ಜಯಪ್ಪ, ಸಂಜೀವ ಮಯ ವಿದ್ಯಾರ್ಥಿಗಳು ಇದ್ದರು.
ಇದನ್ನೂ ನೋಡಿ: ಡೆಂಗ್ಯೂ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ – ದೂರು ದಾಖಲುJanashakthi Media