ಲಿಖಿಂಪುರ್ ಖೇರಿ : ಸಹೋದರಿಯನ್ನು ಆಸ್ಪತ್ರೆಗೆ ತೋರಿಸಲು ಸಹೋದರ ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗಲೇ ಸಾವನ್ನಪ್ಪಿದ ಘಟನೆ ಲಿಖಿಂಪುರ್ ಖೇರಿಯಲ್ಲಿ ನಡೆದಿದೆ. ತಂಗಿ
ಸಹೋದರಿಗೆ ಟೈಫಾಯ್ಡ್ ಆಗಿದ್ದು, ಆಸ್ಪತ್ರೆಗೆ ತೋರಿಸಲು ಸಹೋದರ ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗಲೇ ಆಕೆ ಸಾವನ್ನಪ್ಪಿದ್ದಾಳೆ. ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಸ್ಥಳೀಯವಾಗಿ ಆಸ್ಪತ್ರೆ ಇಲ್ಲದ ಕಾರಣದಿಂದಾಗಿ ನಗರ ಪ್ರದೇಶಕ್ಕೆ ಹೋಗಬೇಕಾಯಿತು. ದಾರಿ ಮಧ್ಯೆ ಶಿವಾನಿ ತೀರಿಕೊಳ್ಳುತ್ತಾಳೆ. ವಾಹನಗಳು ಲಭ್ಯವಿಲ್ಲದ ಕಾರಣ ಸಹೋದರ ಸುಮಾರು ಐದು ಕಿಲೋಮೀಟರ್ವರೆಗೂ ತಂಗಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡೇ ಸಾಗಿದ್ದಾನೆ.
ಇದನ್ನು ಓದಿ : ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಆತ್ಮಹತ್ಯೆ : ಸಾವಿನ ಸಮಗ್ರ ತನಿಖೆಗೆ ಎಸ್ಎಫ್ಐ ಆಗ್ರಹ
ಶಿವಾನಿಯ ಶವವನ್ನು ಆಕೆಯ ಸಹೋದರ ತನ್ನ ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವು ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆ ಹಾಗೂ ಜನರನ್ನು ಸರ್ಕಾರ ಹೇಗೆ ನೋಡಿಕೊಳ್ಳುತ್ತಿದೆ ಎಂಬುದನ್ನು ಬಹಿರಂಗ ಪಡಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಾತೆತ್ತಿದರೆ ಬುಲ್ಡೋಜರ್ ತೋರಿಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ನಾದರೂ ಆರೋಗ್ಯ ವ್ಯವಸ್ಥೆಯನ್ನು, ಗುಣಮಟ್ಟದ ರಸ್ತೆಯನ್ನು, ಹಾಗೂ ಆಂಬುಲನ್ಸ್ ವ್ಯವಸ್ಥೆಯನ್ನು ಬಲಪಡಿಸುವಂತಾಗಲಿ ಎಂದು ಯುಪಿ ಸರ್ಕಾರದ ಕಿವಿ ಹಿಂಡಿದ್ದಾರೆ.
ಇದನ್ನು ನೋಡಿ : ಡೆಂಗ್ಯು ಪ್ರಕರಣ ಹೆಚ್ಚಳ : ಸರ್ಕಾರದ ಹೊಣೆಗಾರಿಕೆ ಏನು? ಜನರ ಜವಾಬ್ದಾರಿ ಏನು? ಡಾ. ಅನೀಲ್ ಕುಮಾರ್ ಜೊತೆ ಮಾತುಕತೆ