ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ ಸರ್ಕಾರಿ ಕಡತಗಳಿಗೆ ಸಹಿ; ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಗಂಭೀರ ಆರೋಪ

ತುಮಕೂರು : ಮೃತ ಎಂಜಿನಿಯರ್‌ನ ನಕಲಿ ಸಹಿ, ಸರ್ಕಾರದ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ತುಮಕೂರಿನಲ್ಲಿ ಕೇಳಿಬಂದಿದೆ. ಎಂಜಿಯರೊಬ್ಬರು ಮೃತಪಟ್ಟು ಒಂದು ವರ್ಷವಾದರೂ ಅವರ ಹೆಸರಿನಲ್ಲಿ ಸರ್ಕಾರಿ ಕಡತಗಳಿಗೆ ಸಹಿ ಹಾಕಲಾಗುತ್ತಿದೆ. ಈ ಬಗ್ಗೆ ತುಮಕೂರು ಜಿಲ್ಲೆ ಸಿರಾದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಜತೆಗೆ, ಭ್ರಷ್ಟಾಚಾರ ಕಡಿವಾಣಕ್ಕೆ ಸಿರಾ ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಎಂಜಿನಿಯರ್ ಸೇತುರಾಂ ಸಿಂಗ್ ಮೃತಪಟ್ಟು ಒಂದು ವರ್ಷ ಕಳೆದಿದೆ. ಆದರೆ, ಸೇತುರಾಂ ಸಿಂಗ್ ಹೆಸರಲ್ಲಿ ಹಳೆಯ ಕಡತಗಳಿಗೆ ನಕಲಿ ಸಹಿ ಹಾಕಿ ಅನುದಾನ ದುರ್ಬಳಕೆಯಾಗಿದೆ. ಸಹಿ ದುರ್ಬಳಕೆ ತಡೆಗೆ ಆಗ್ರಹಿಸಿ ಮೃತ ಎಂಜಿನಿಯರ್ ಪತ್ನಿ ನಗರಸಭೆಗೆ ದೂರು ನೀಡಿದ್ದಾರೆ.

ಇದನ್ನು ಓದಿ : ಸಾಲ ಹಿಂತಿರುಗಿಸಲು ಹಿಂದೇಟು : ಸ್ನೇಹಿತನಿಂದಲೇ ಕ್ಯಾಬ್ ಚಾಲಕನ ಹತ್ಯೆ

ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ನಗರಸಭೆ ಸದಸ್ಯರಾದ ಅಜಯ್ ಕುಮಾರ್, ಲಕ್ಷ್ಮಿಕಾಂತ್, ಕೃಷ್ಣಪ್ಪ ಸೇರಿ ಹಲವು ಸದಸ್ಯರು ಒತ್ತಾಯಿಸಿದ್ದಾರೆ.

ದೆಹಲಿ ವಿಶೇಷ ಪ್ರತಿ‌ನಿಧಿ ಶಾಸಕ ಟಿಬಿ ಜಯಚಂದ್ರ, ಎಂಎಲ್‌ಸಿ ಚಿದಾನಂದ್ ಸಮ್ಮುಖದಲ್ಲೇ ನಗರಸಭೆ ಸದಸ್ಯರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಸಿರಾ ನಗರಸಭೆ ಅಧ್ಯಕ್ಷೆ ಪೂಜಾ ನೇತೃತ್ವದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆದಿದೆ.

ಇದನ್ನು ನೋಡಿ : ಹಟ್ಟಿ ಚಿನ್ನದ ಗಣಿಯಲ್ಲಿ ಭೂಕುಸಿತ – ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರಗಾಯ Janashakthi Media

 

 

Donate Janashakthi Media

Leave a Reply

Your email address will not be published. Required fields are marked *