ಟಿ.ಸುರೇಂದ್ರರಾವ್
ಸಂವಿಧಾನದ ಭಾಷಾವಾರು ಒಕ್ಕೂಟವಾದಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳನ್ನು ಬಿತ್ತರಿಸುವ ‘ಸಂಸತ್ ಟಿ ವಿʼ ಯಿಂದ ಭಾರಿ ವಿಪತ್ತು ಬಂದೊದಗಿದೆ. ಇಂಗ್ಲೀಷ್ ನಲ್ಲಿ ಮಾತನಾಡುವ ಸಂಸದರ ಭಾಷಣಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿ ಬಿತ್ತರಿಸಲು ಶುರು ಮಾಡಿದೆ.ಇದು ಸಂಸದರ ಹಕ್ಕನ್ನು ಮಾತ್ರ ಕಿತ್ತುಕೊಳ್ಳುತ್ತಿಲ್ಲ, ಕೋಟ್ಯಾಂತರ ಹಿಂದಿಯೇತರ ರಾಜ್ಯಗಳ ಭಾರತೀಯರಿಗೆ ಅನ್ಯಾಯ ಎಸಗಿದೆ. ತಮ್ಮ ಕ್ಷೇತ್ರದಿಂದ ಆಯ್ಕೆಯಾಗಿ ಹೋದ ಸಂಸದರ ಭಾಷಣವನ್ನುಅದೇ ಭಾಷೆಯಲ್ಲಿ ಕೇಳುವ ಮತದಾರರ ಹಕ್ಕನ್ನು ‘ಸಂಸದ್ ಟಿ ವಿ’ ನಿರಾಕರಿಸಿದೆ. ಸಂಸತ್
ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಸಂಸದ ಕಾಂಗ್ರೆಸ್ ಪಕ್ಷದ ಶಶಿಕಾಂತ್ ಸೆಂತಿಲ್ ಅವರು “ವಿಪಕ್ಷಗಳನ್ನು ಕಾಣದಂತೆ ಮಾಡುವ ತಂತ್ರವದು” ಎಂದು ಟೀಕಿಸಿದ್ದಾರೆ. ವಿಪಕ್ಷಗಳ ಸಂಸದರನ್ನು ಸರಿಯಾಗಿತೋರಿಸುತ್ತಿಲ್ಲ, ತೋರಿಸಿದರೂ ಕೆಲವೇ ಕೆಲವರನ್ನು ಮಾತ್ರ ತೋರಿಸುತ್ತಿದೆ ಎಂಬ ಗಂಭೀರ ಆಪಾದನೆ ಮಾಡಿದರು. ಸಂಸತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಮತ್ತು ಸಂಸದರ ಭಾವನೆಗಳನ್ನು ಯಥಾ ಸ್ಥಿತಿಯಲ್ಲಿ ಪ್ರದರ್ಶಿಸ ಬೇಕು.ಇಂಗ್ಲಿಷ್ ಭಾಷೆಯ ಭಾಷಾಂತರವನ್ನೂ ಕೂಡ ಸರಿಯಾಗಿ ಮಾಡುತ್ತಿಲ್ಲ. ಆದ್ದರಿಂದ ಸಂಸದ್ ಟಿ.ವಿ.ಯ ಮೇಲೆ ಸೂಕ್ತವಾದ ಕಣ್ಣಿಡ ಬೇಕಾದ ಅಗತ್ಯವಿದೆ. ದಕ್ಷಿಣ ಭಾರತದಲ್ಲಿ ಜನರಿಗೆ ಹಿಂದಿ ಭಾಷೆ ಅರ್ಥವಾಗುವುದಿಲ್ಲ ಎಂದು ಗೊತ್ತಿದ್ದರೂ ಸಂಸದರ ಇಂಗ್ಲಿಷ್ ಭಾಷಣವನ್ನು ಏಕೆ ಹಿಂದಿಗೆ ಅನುವಾದ ಮಾಡಿ ಪ್ರಸಾರ ಮಾಡಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರು. ಒಕ್ಕೂಟ
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ ಶರದ್ ಪವಾರ್)ದ ಸಂಸದೆ ಸುಪ್ರಿಯಾ ಸುಲೆಯವರು “ಇಂತಹ ಅನೈತಿಕ ತಂತ್ರಗಳನ್ನು ಕೇಂದ್ರ ಸರ್ಕಾರವು ಈ ಕೂಡಲೇ ತಡೆ ಹಿಡಿಯಬೇಕು” ಎಂದು ಒತ್ತಾಯಿಸಿದ್ದಾರೆ. ಎಕ್ಸ್ ನಲ್ಲಿ ತಮ್ಮಅಭಿಪ್ರಾಯವನ್ನು ಹಂಚಿಕೊಂಡ ಅವರು “ಆ ವರ್ತನೆಯು ಸಮಸ್ಯಾತ್ಮಕವಾಗಿದ್ದು, ಸಂಸದರ ದನಿಯನ್ನು ಹತ್ತಿಕ್ಕುತ್ತಿದೆ ಹಾಗೂ ನಿರಂಕುಶಾಧಿಕಾರಿಯಾಗಿದೆ” ಎಂದು ಹೇಳಿದರು. ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಹಾಳುಗೆಡವುತ್ತಿದೆ ಹಾಗೂ ಭಾರತೀಯರ ದನಿಯನ್ನು ಗೇಲಿಮಾಡುತ್ತಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಆಗಸ್ಟ್ 11 ಕ್ಕೆ ನೀಟ್-ಪಿಜಿ 2024 ಪರೀಕ್ಷೆ
ಅದಕ್ಕೆ ಪೂರಕವಾಗಿ ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಿದ ವೈರ್ ವಿದ್ಯುನ್ಮಾನ ಪತ್ರಿಕೆಯ ಸ್ಥಾಪಕ ಸಂಪಾದಕ ಸಿದ್ಧಾರ್ಥ “ಸಂಸದ್ ಟಿ.ವಿ. ಯ ನಡೆಯು ಹಿಂದಿಯನ್ನು ಹೇರುವ ಮೂಲಕ ಕೇವಲ ಭಾರತೀಯಒಕ್ಕೂಟವಾದಕ್ಕೆ ಮಾತ್ರಧಕ್ಕೆತರದೆಒಂದುರೀತಿಯಲ್ಲಿ ಸಂಸದರ ಮಾತುಗಳನ್ನು ಸೆನ್ಸಾರ್ ಮಾಡುತ್ತಿದೆ”ಎಂದು ಕಟುವಾಗಿ ಹೇಳಿದರು.
ಮತ್ತೊಬ್ಬ ಪತ್ರಕರ್ತೆ ಸಬಾ ನಕ್ವಿಯವರು ಹಿಂದಿಯೇತರ ರಾಜ್ಯಗಳ ಸಂಸದರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದರು.ಅವರೂ ಕೂಡ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯವನ್ನು “ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಸಂಸದರಿಗೆ ಹೀಗೆ ಮಾಡುತ್ತಿರುವ ಸಂಸದ್ ಟಿ ವಿ ಯು ಹಿಂದಿ ಮಾತನಾಡುವ ಸಂಸದರಿಗೆ ಅದೇರೀತಿ ಮಾಡುತ್ತಿದೆಯೇ?”ಎಂದು ಪ್ರಶ್ನೆ ಮಾಡಿದ್ದಾರೆ.ಈ ತಾರತಮ್ಯದ ವಿರುದ್ಧಎಲ್ಲಾ ಸಂಸದರೂ ದೂರು ಸಲ್ಲಿಸಬೇಕು ಹಾಗೂ ಪ್ರತಿಭಟಿಸ ಬೇಕು ಎಂದು ಮನವಿ ಮಾಡಿದರು.
ಕೇರಳದ ಕೊಲ್ಲಂ ಕ್ಷೇತ್ರದ ರೆವಲ್ಯೂಷನರಿ ಸೋಶಿಯಲಿಸ್ಟ್ ಪಕ್ಷದ ಸಂಸದ ಎನ್.ಕೆ.ಪ್ರೇಮಚಂದ್ರನ್ ಅವರು ಆ ನಡೆಯನ್ನುಕೇಂದ್ರ ಸರ್ಕಾರದ ‘ಹಿಂದಿ ಬಾಷೆಯನ್ನು ಹೇರುವ’ ತಂತ್ರದ ಭಾಗವಾಗಿದೆ ಎಂದು ಹೇಳಿದ್ದಾರೆ. ಸಂಸದ್ ಟಿ.ವಿ.ಯಲ್ಲಿ ಎಲ್ಲಾ ಕಾರ್ಯಕ್ರಮಗಳೂ ಬಹುಪಾಲು ಹಿಂದಿ ಭಾಷೆಯಲ್ಲೇ ನಡೆಯುತ್ತಿದೆ, ಇಂಗ್ಲಿಷ್ ಭಾಷೆಯ ಕಾರ್ಯ ಕ್ರಮಗಳು ಬಹಳ ಕಡಿಮೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಸಂಸತ್ತು ಕೇವಲ ಉತ್ತರ ಭಾರತಕ್ಕೆ ಮಾತ್ರ ಸೇರಿದ್ದಲ್ಲ, ಆದ್ದರಿಂದ ಇಡೀ ಭಾರತಕ್ಕೆ ಅನುಗುಣವಾಗಿ ಅದರಲ್ಲಿ ಕಾರ್ಯಕ್ರಮಗಳು ನಡೆಯುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ವಿಷಯವನ್ನು ಸಭಾಧ್ಯಕ್ಷರ ಗಮನಕ್ಕೆ ತರುತ್ತೇವೆ, ಸಂಸದ್ ಟಿ.ವಿ. ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಮಧ್ಯೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಈಗಿನ ಬೆಳಗಾವಿ ಕ್ಷೇತ್ರದ ಸಂಸದರೂ ಆಗಿರುವ ಜಗದೀಶ್ ಶೆಟ್ಟರ್ ಅವರು “ಸಂಸದ್ ಟಿ.ವಿ. ಯಲ್ಲಿ ಏನು ಪ್ರಸಾರವಾಗುತ್ತದೆ ಎನ್ನುವುದು ತಮಗೆ ಗೊತ್ತಿಲ್ಲ, ಹಾಗೇನಾದರೂ ತಪ್ಪಾಗಿದ್ದರೆ, ಅದನ್ನು ಸರಿಪಡಿಸಬೇಕು” ಎಂದು ಹೇಳಿದರು.
(ಇದು ‘ಸೌಥ್ ಫಸ್ಟ್’ ವಿದ್ಯುನ್ಮಾನ ಪತ್ರಿಕೆಯ ನೀನಾ ಅವರು ಸಂಪಾದನೆ ಮಾಡಿದ್ದು)
ಇದನ್ನೂ ನೋಡಿ: ಕತ್ತಿಯ ಎರಡೂ ಬದಿಯ ಅಲಗುಗಳಾದ ಮೋ-ಶಾ ಕ್ರಿಮಿನಲ್ ಕಾಯ್ದೆಗಳ ಆಳ ಅಗಲ Janashakthi Media