ನವದೆಹಲಿ: ಇತ್ತೀಚೆಗೆ ಸುದ್ದಿಗೆ ಗ್ರಾಸವಾಗಿದ್ದ ವೈದ್ಯರೊಬ್ಬರು ಖರೀದಿಸಿದ್ದ ಐಸ್ಕ್ರೀಂನಲ್ಲಿ ಮಾನವನ ಬೆರಳಿನ ಪ್ರಕರಣಕ್ಕೆ ಟ್ವಿಸ್ಟ್ವೊಂದು ಸಿಕ್ಕಿದ್ದು ಆ ಐಸ್ಕ್ರೀಂ ಬೆರಳಿನ ಮಾಲೀಕ ಯಾರೆಂಬುದು ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5 ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರು. ಒಂದು ತಂಡ ಐಸ್ಕ್ರೀಂ ತಯಾರಿಸುತ್ತಿದ್ದ ಇಂದಾಪುರ ಕಾರ್ಖಾನೆಗೆ ತೆರಳಿತ್ತು. ತನಿಖೆ ವೇಳೆ ಇಂದಾಪುರದ ನ್ಯಾಚುರಲ್ ಡೈರಿ ಕಂಪನಿಯಲ್ಲಿ ಡ್ರೈ ಫ್ರೂಟ್ ಫೀಡರ್ ಯಂತ್ರದಲ್ಲಿ 24 ವರ್ಷದ ಕಾರ್ಮಿಕನ ಬೆರಳು ತುಂಡಾಗಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಐಸ್ಕ್ರೀಂನಲ್ಲಿ ಸಿಕ್ಕ ಬೆರಳು ಇದೇ ಕಾರ್ಮಿಕನದ್ದು ಎಂದು ಪೊಲೀಸರು ಶಂಕಿಸಿದ್ದಾರೆ. ಅದರಂತೆ ಡಿಎನ್ಎ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಜೂನ್ 27 ರಂದು ಆ ಬೆರಳು ಇದೇ ಕಾರ್ಮಿಕನದ್ದು ಎಂದು ದೃಢಪಡಿಸುವ ವರದಿ ಪೊಲೀಸರಿಗೆ ಸಿಕ್ಕಿದೆ.
ಇದನ್ನೂ ನೋಡಿ: ಅಕಾಡೆಮಿಗಳ ಮೇಲೆ ರಾಜಕಾರಣದ ಕರಿ ನೆರಳು! Janashakthi Media
ಪೊಲೀಸರು ಕಳೆದ ಶನಿವಾರ ಎಲ್ಲಾ ಹಣ್ಣು ಮಾರಾಟ ಮಾಡುವವರು ಮತ್ತು ಆಪರೇಟರ್ಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು. ಕೆಲಸಗಾರರಿಗೆ ಯಾವುದಾದರೂ ಪ್ರಮುಖ ಕಾಯಿಲೆಗಳಿವೆಯೇ ಎಂದು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಸೋಮವಾರ, ಪೊಲೀಸರಿಗೆ ರಕ್ತ ಪರೀಕ್ಷೆಯ ಫಲಿತಾಂಶ ಸಿಕ್ಕಿದ್ದು, ಕಾರ್ಮಿಕನಿಗೆ ಯಾವುದೇ ಕಾಯಿಲೆಯಿಲ್ಲ ಎಂಬುದನ್ನು ದೃಢಪಡಿಸಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈಗಾಗಲೇ ಪುಣೆ ಮೂಲದ ಐಸ್ಕ್ರೀಂ ತಯಾರಕರ ಪರವಾನಗಿಯನ್ನು ತನಿಖೆಗಾಗಿ ಅಮಾನತುಗೊಳಿಸಿದೆ. ಕಂಪನಿಯು ಈ ಹಿಂದೆ ತನಿಖೆ ಮಾಡಲು ಅಧಿಕಾರಿಗಳಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿತ್ತು.
ಬೆರಳಿನ ಮಾಲೀಕ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಪುಣೆಯ ಇಂದಾಪುರದಲ್ಲಿರುವ ಐಸ್ಕ್ರೀಂ ಕಂಪನಿಯ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಗೆ ಈ ಹೆಬ್ಬೆರಳು ಸೇರಿದ್ದು ಎಂದು ಡಿಎನ್ಎ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ 24 ವರ್ಷದ ಓಂಕಾರ್ ಪೋಟೆ ಅವರದ್ದೇ ಬೆರಳು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ನೋಡಿ: