ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಮತ್ತು ಕೇಂದೀಕರಣವನ್ನು ಹಿಂತೆಗೆದು ಕೊಳ್ಳಬೇಕು-ಸಿಪಿಐ(ಎಂ) ಆಗ್ರಹ

ನವದೆಹಲಿ : ಕೇಂದ್ರೀಕೃತ ಅಖಿಲ ಭಾರತ ಪರೀಕ್ಷಾ ಪ್ರಕ್ರಿಯೆಗಳನ್ನು ಆವರಿಸಿರುವ ದುಷ್ಟ ಬೆಳವಣಿಗೆಗಳ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯೂರೋ ತೀವ್ರ ಆತಂಕವನ್ನು ವ್ಯಕ್ತಪಡಿಸಿದೆ. ಅದು NEET-UG ಆಗಿರಲಿ, UGC-NET ಆಗಿರಲಿ ಮತ್ತು ಈಗ NEET-PG ಈ ಎಲ್ಲ  ಪರೀಕ್ಷೆಗಳಲ್ಲಿ  ಏನಾಗಬಹುದು ಎಂಬುದನ್ನು ಮುಂಗಂಡು ಅವುಗಳನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಈ ಅಕ್ರಮಗಳ  ಒಟ್ಟಾರೆ ಪರಿಣಾಮವೆಂದರೆ ಈ ಪ್ರಕ್ರಿಯೆಗಳ ಸಂಪೂರ್ಣ ಕುಸಿತ. ಇದು ದೇಶದ ಉನ್ನತ ಶಿಕ್ಷಣದ ಪ್ರಮುಖ ಕ್ಷೇತ್ರಗಳನ್ನು ತಟ್ಟುತ್ತದೆ.

ಇದರಲ್ಲಿ  ಭ್ರಷ್ಠಾಚಾರವಂತೂ ಮೇಲ್ನೋಟಲ್ಲೇ ಖಚಿತವಾಗಿದೆ. ಆದರೆ ಆದಷ್ಟೇ ಅಲ್ಲ. ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಅತ್ಯಗತ್ಯ ಅಂಶಗಳಾದ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದೀಕರಣದಿಂದ  ಹೊರಹೊಮ್ಮಿದೆ. ಹೊಸ ಸರ್ಕಾರ ಈ ಹಗರಣಗಳ ತನಿಖೆಗೆ ಸಿಬಿಐ ಸೇವೆಗಳನ್ನು ಕರೆಸಿರುವುದು,  ಅದು ವ್ಯಾಪಮ್ ಹಗರಣದಂತೆಯೇ ಇದನ್ನೂ ಮರೆಗೆ ತಳ್ಳುವ ದೋರಣೆಯನ್ನು ಅನುಸರಿಸಲಿದೆ ಎಂಬುದನ್ನು ಖಚಿತಪಡಿಸುತ್ತದೆ. ಇವುಗಳು ಉನ್ನತ ಶಿಕ್ಷಣದಲ್ಲಿ ಸರ್ಕಾರದ ನೀತಿ ಧೋರಣೆಗಳು ಸಂಪೂರ್ಣ ಕುಸಿದಿವೆ ಎಂಬುದನ್ನು ಬಿಂಬಿಸುತ್ತವೆ, ಇದಕ್ಕಾಗಿ ಇಡೀ ಸರ್ಕಾರವೇ ಹೊಣೆ, ನಿರ್ಧಿಷ್ಟವಾಗಿ ಶಿಕ್ಷಣ ಸಚಿವರು. ಅವರು ರಾಜೀನಾಮೆ ನೀಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಭಾರತದಂತಹ ದೊಡ್ಡ ಮತ್ತು ವೈವಿಧ್ಯಮಯ ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ  ಆಡಳಿತದ ಕೇಂದ್ರೀಕರಣವನ್ನು ಹಿಂತೆಗೆದುಕೊಳ್ಳಬೇಕು , ಇದರಲ್ಲಿ  ಕೇಂದ್ರೀಕೃತ NEET ಪರೀಕ್ಷೆಗಳನ್ನು ರದ್ದುಗೊಳಿಸುವುದು ಮೊದಲ ಹೆಜ್ಜೆಯಾಗಬೇಕು ಎಂದು ಪೊಲಿಟ್ ಬ್ಯೂರೋ ಹೇಳಿದೆ, ಪ್ರತಿ ರಾಜ್ಯವು ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವನ್ನು ನಿಯಂತ್ರಿಸುವ  ಪ್ರವೇಶ ಪರೀಕ್ಷೆಗಳನ್ನು ನಡೆಸಲು ತಮ್ಮದೇ ಆದ ಪ್ರತ್ಯೇಕ ಕಾರ್ಯವಿಧಾನಗಳನ್ನು ಅನುಸರಿಸಲು ಬಿಡಬೇಕು ಎಂದು ಅದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *