ನವದೆಹಲಿ: ವಂದೇಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಜೂನ್ 18 ರಂದು ಭೋಪಾಲ್ನಿಂದ ಆಗ್ರಾಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಊಟದಲ್ಲಿ ಜಿರಳೆ ಕಂಡುಬಂದಿದೆ . ವಂದೇಭಾರತ್
ಅವರ ಸೋದರಳಿಯ ವಿದಿತ್ ವರ್ಷ್ನಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೂರು ನೀಡಿ , ಮಾರಾಟಗಾರರ ವಿರುದ್ಧ ರೈಲ್ವೇ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಜೂನ್ 16 ರಂದು ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಭೋಪಾಲ್ನಿಂದ ಆಗ್ರಾಕ್ಕೆ ವಂದೇ ಭಾರತ್ನಲ್ಲಿ ಪ್ರಯಾಣಿಸುತ್ತಿದ್ದರು. IRCTC ಯಿಂದ ನೀಡಿದ ಆಹಾರದಲ್ಲಿ “ಜಿರಳೆ” ಕಂಡು ಬಂದಿದೆ.
ದಯವಿಟ್ಟು ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಮತ್ತು ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಿ” ಎಂದು ಎಕ್ಸ್ ಬಳಕೆದಾರ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಹರ್ಷಿ ಚಾಕೊಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ; ವಿಡಿಯೋ ವೈರಲ್
ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಐಆರ್ಸಿಟಿಸಿ, ದಂಡ ವಿಧಿಸಿ ಕಠಿಣ ಕ್ರಮ ಕೈಗೊಂಡಿದ್ದೇವೆ. “, ನಿಮ್ಮ ಪ್ರಯಾಣದ ಅನುಭವಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಸಂಬಂಧಪಟ್ಟ ಸೇವಾ ಪೂರೈಕೆದಾರರಿಗೆ ಸೂಕ್ತ ದಂಡವನ್ನು ವಿಧಿಸಲಾಗಿದೆ ಎಂದಿದೆ.ನಾವು ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದ್ದೇವೆ” ಎಂದು IRCTC ಉತ್ತರಿಸಿದೆ.
ಹಲವಾರು X ಬಳಕೆದಾರರು ದೂರುದಾರ ವಿದಿತ್ ವರ್ಷ್ನಿಗೆ ಪ್ರತಿಕ್ರಿಯಿಸಿದ್ದಾರೆ. “ಭಾರತದ ಅತ್ಯಂತ ಪ್ರೀಮಿಯಂ ರೈಲು ವಂದೇ ಭಾರತ್ ಈ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಇದು ಗಂಭೀರ ಸಮಸ್ಯೆಯಾಗಿದೆ. ಗಂಭೀರವಾಗಿ ಇದು ನಮ್ಮನ್ನು ಬಹಳ ನಿರಾಶೆಗೊಳಿಸಿದೆ” ಎಂದು ಒಬ್ಬ ಬಳಕೆದಾರರು ಉತ್ತರಿಸಿದ್ದಾರೆ. ಕೆಲವರು ಇದನ್ನು “ಪ್ರೋಟೀನ್” ನ ಮೂಲವೆಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.ಇನ್ನು ವಂದೇ ಭಾರತ್ ಊಟದಲ್ಲಿ ಜಿರಳೆ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ.
ಫೆಬ್ರವರಿಯಲ್ಲಿ, ಪ್ರಯಾಣಿಕರೊಬ್ಬರು, ಡಾ ಶುಭೇಂದು ಕೇಶರಿ ಅವರು ಕಮಲಪತಿಯಿಂದ ಜಬಲ್ಪುರ ಜಂಕ್ಷನ್ಗೆ ಪ್ರಯಾಣಿಸುವಾಗ IRCTC ನೀಡಿದ ಆಹಾರದಲ್ಲಿ ಸತ್ತ ಜಿರಳೆ ಕಂಡು ಆಘಾತಕ್ಕೊಳಗಾಗಿದ್ದರು . ಕಳೆದ ವರ್ಷ ಜುಲೈನಲ್ಲಿ ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕನೊಬ್ಬನಿಗೆ ಊಟದಲ್ಲಿ ಜಿರಳೆ ಕಂಡುಬಂದ ಹಿನ್ನೆಲೆಯಲ್ಲಿ ರೈಲ್ವೆ ಆಹಾರ ಮಾರಾಟಗಾರನಿಗೆ 25,000 ರೂ. ದಂಡ ವಿಧಿಸಿದೆ.
ಇದನ್ನು ನೋಡಿ : ಮೇಘನಾ ಕುಂದಾಪುರ ಗಾಯನದಲ್ಲಿ ರಂಗಗೀತೆಗಳು Janashakthi Media