ಮೆಕ್ಸಿಕೊ : ಎಡಪಂಥೀಯ ಮಹಿಳಾ ಅಧ್ಯಕ್ಷರ ಆಯ್ಕೆ

ಒಂದು ಐತಿಹಾಸಿಕ ಚುನಾವಣೆಯಲ್ಲಿ, ಮೆಕ್ಸಿಕನ್ ಮತದಾರರು ಕಾರ್ಮಿಕರ ಪರ ಪ್ರಗತಿಪರ ಅಭ್ಯರ್ಥಿ ಕ್ಲೌಡಿಯಾ ಶೀನ್ಬಾಮ್ ಅವರನ್ನು ಆಯ್ಕೆ ಮಾಡಿದ್ದಾರೆ. ಆರು ವರ್ಷಗಳ ಅವಧಿಗೆ ಆಯ್ಕೆಯಾದ ಅವರು ಇಡೀ ಉತ್ತರ ಅಮೆರಿಕಾದಲ್ಲಿಯೇ ಅಧ್ಯಕ್ಷರಾಗಿ ಚುನಾಯಿತರಾದ ಮೊದಲ ಮಹಿಳೆ ಮತ್ತು ಮೊದಲ ಯಹೂದಿ ವ್ಯಕ್ತಿ. ಮೆಕ್ಸಿಕೊ 

ನಾವು ಮಹಿಳೆಯರು ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದೇವೆ, ಆದರೆ ನಾವು ಎಲ್ಲರಿಗಾಗಿ ಆಡಳಿತ ನಡೆಸಲಿದ್ದೇವೆ” ಎಂದು ಶೀನ್ಬಾಮ್ ತಮ್ಮ ವಿಜಯ ಭಾಷಣದಲ್ಲಿ ಘೋಷಿಸಿದರು.

“ಗಣರಾಜ್ಯದ 200 ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ಮೆಕ್ಸಿಕೋದ ಮಹಿಳಾ ಅಧ್ಯಕ್ಷಳಾಗುತ್ತೇನೆ. ನಾನು ಇತರ ಸಂದರ್ಭಗಳಲ್ಲಿ ಹೇಳಿದಂತೆ, ನಾನು ಒಬ್ಬಂಟಿಯಾಗಿ ಬಂದಿಲ್ಲ. ನಮ್ಮ ತಾಯ್ನಾಡನ್ನು ನಮಗೆ ನೀಡಿದ ನಮ್ಮ ನಾಯಕಿಯರೊಂದಿಗೆ, ನಮ್ಮ ಪೂರ್ವಜರು, ನಮ್ಮ ತಾಯಂದಿರು, ನಮ್ಮ ಹೆಣ್ಣುಮಕ್ಕಳು ಮತ್ತು ನಮ್ಮ ಮೊಮ್ಮಕ್ಕಳು- ನಾವೆಲ್ಲರೂ ಜೊತೆಯಾಗಿಯೇ ಬಂದಿದ್ದೇವೆ” ಎಂದು ಅವರು ಹೇಳಿದರು. ಮೆಕ್ಸಿಕೊ 

ಶೀನ್ಬಾಮ್ ಮೆಕ್ಸಿಕೊದ ಪ್ರಸ್ತುತ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ AMLO ಎಂದು ಕರೆಯಲಾಗುವ ಕೂಟದ ಸಹಚರರು ಮತ್ತು ಅವರ ಮೊರೆನಾ (Morena) ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು. ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆ ಮತ್ತು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವ ರಾಷ್ಟ್ರದಲ್ಲಿ ಮೊದಲ ಯಹೂದಿ ಅಧ್ಯಕ್ಷರಾಗಿದ್ದಾರೆ. ಅವರು ಅಕ್ಟೋಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೆಕ್ಸಿಕನ್ ಅಧ್ಯಕ್ಷರು ಕೇವಲ ಒಂದು ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದು.

ಯುರೋ ಕೂಟದ ಚುನಾವಣೆಗಳಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ ಗಳು ಸೇಋಇದಂತೆ ಹಲವು ದೇಶಗಳಲ್ಲಿ ಉಗ್ರ ಬಲಪಂಥಧ ನವ-ನಾಜಿ ಪಕ್ಷಗಳಿಗೆ ದೊಡ್ಡ ಮುನ್ನಡೆ ಸಿಕ್ಕಿರುವುದು ಸೇರಿದಂತೆ ಚುನಾವಣೆ ನಡೆಯಲಿರುವ ಯು..ಎಸ್ ಸೇರಿದಂತೆ ಹಲವು ದೇಶಗಳಲ್ಲಿ ಉಗ್ರ ಬಲಪಂಥೀಯರು ಪ್ರಾಬಲ್ಯ ಸ್ಥಾಪಿಸುವ ಹೊತ್ತಿನಲ್ಲಿ ಮೆಕ್ಸಿಕೊದ ಈ ಚುನಾವಣಾ ಫಲಿತಾಂಶ ಚೇತೋಹಾರಿಯಾಗಿದೆ.

ಮೊದಲ ನೊಬೆಲ್ ಪ್ರಶಸ್ತಿ ವಿಜೇತ ಅಧ್ಯಕ್ಷರು ಸಹ

ಅವರು ಮೆಕ್ಸಿಕೋದ ಮೊದಲ ನೊಬೆಲ್ ಪ್ರಶಸ್ತಿ ವಿಜೇತ ಅಧ್ಯಕ್ಷರೂ ಆಗಿರುತ್ತಾರೆ. ಜಾಗತಿಕ ತಾಪಮಾನ ಏರಿಕೆಯ ತನಿಖೆ ಮಾಡಿದ ಮತ್ತು ಅದರ ವೇಗವರ್ಧಿತ ಬೆದರಿಕೆಯನ್ನು ಪ್ರಕಟಿಸಿದ ವಿಶ್ವಸಂಸ್ಥೆಯ ಹವಾಮಾನ ವಿಜ್ಞಾನ ಸಮಿತಿಯಲ್ಲಿ ಸಹೋದ್ಯೋಗಿಗಳೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಶೀನ್ಬಾಮ್ ಮೆಕ್ಸಿಕೋದ ಪ್ರಮುಖ ವಿಶ್ವವಿದ್ಯಾಲಯದಿಂದ ಎನರ್ಜಿ ಎಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

ಶೀನ್ಬಾಮ್ ಅವರು ಅಧಿಕಾರ ವಹಿಸಿದ ಮೇಲೆ ಕೈಗೊಳ್ಳಬೇಕಾದ ಪ್ರಮುಖ ಕಾರ್ಯಭಾರಗಳು – ಕ್ರಿಮಿನಲ್ ಕಾರ್ಟೆಲ್ ಗಳು ಮತ್ತು ದೊಡ್ಡ ಲಿಂಗ ಅಂತರವನ್ನು ಸಹ ಒಳಗೊಂಡಂತೆ ಇರುವ ಅಗಾಧ ಆದಾಯದ ಅಸಮಾನತೆಯ ವಿರುದ್ಧ ಹೋರಾಡುವುದು. ಮಾಜಿ ಮೆಕ್ಸಿಕೋ ಸಿಟಿ ಮೇಯರ್ ಮತ್ತು AMLO ಕ್ಯಾಬಿನೆಟ್ನ ಸದಸ್ಯರೂ ಆಗಿದ್ದ ಅವರಿಗೆ, ಯು.ಎಸ್ ಅಧ್ಯಕ್ಷರಾದರೆ ಡೊನಾಲ್ಡ್ ಟ್ರಂಪ್ ಅವರನ್ನು ಹೇಗೆ ನಿರ್ವಹಿಸುವ ಗಂಭೀರ ಸವಾಲೂ ಎದುರಾಗಬಹುದು. ಮೆಕ್ಸಿಕೊ 

ಇದನ್ನು ಓದಿ : ಆಪಲ್‌ ಕಂಪೆನಿ ವಿರುದ್ಧ ಮೊಕದ್ದಮೆ ಹೂಡಿದ ಮಹಿಳಾ ಉದ್ಯೋಗಿಗಳು

ರಿಪಬ್ಲಿಕನ್ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ಮೆಕ್ಸಿಕನ್ ವಿರೋಧಿ, ವಲಸೆ ವಿರೋಧಿ ಮತ್ತು ಬಣ್ಣದ ಜನರ ವಿರೋಧಿ ಮಾತ್ರವಲ್ಲ, ಆದರೆ ಅವರು ಈಗ ಶಿಕ್ಷೆಗೊಳಗಾದ ಅಪರಾಧಿಯೂ ಆಗಿದ್ದಾರೆ. ಯಾವುದೇ ದೇಶದ ಅಪರಾಧಿಗಳನ್ನು (ಅವರ ಮೇಲ್ಮನವಿಗಳು ನ್ಯಾಯಾಲಯಗಳಲ್ಲಿ ಇದ್ದರೂ ಸಹ) ಮೆಕ್ಸಿಕನ್ ಕಾನೂನು ಅಧ್ಯಕ್ಷೀಯ ಮನ್ನಾ ಇಲ್ಲದೆ ಪ್ರವೇಶಿಸುವುದನ್ನು ನಿರ್ಬಂಧಿಸುತ್ತದೆ. ಇದು ಟ್ರಂಪ್ ನವೆಂಬರಿನ ಚುನಾವಣೆಯಲ್ಲಿ ಗೆದ್ದರೂ ಸಹ ಅನ್ವಯಿಸುತ್ತದೆ. ಇಂತಹ ನಿಷೇಧಗಳನ್ನು ಹೊಂದಿರುವ ಇತರ ರಾಷ್ಟ್ರಗಳಲ್ಲಿ ಕೆನಡಾ ಮತ್ತು ಯು.ಕೆ ಸಹ ಸೇರಿವೆ.

ಶೀನ್ಬಾಮ್ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಮಹಿಳಾ ಸೆನೆಟರ್ ಕ್ಸೊಚಿಟ್ಲ್ ಗಾಲ್ವೆಜ್ ಅವರನ್ನು ಎರಡರಷ್ಟು ಮತ ಪಡೆದಿದ್ದರು. ಇಬ್ಬರು ಮಹಿಳೆ-ಇಬ್ಬರು ಪುರುಷರ ಓಟದಲ್ಲಿ ಅವರು ಗೆದ್ದಿದ್ದಾರೆ. ಆದರೆ ಮೆಕ್ಸಿ ಕೊದ ಕೆಳಸದನದಲ್ಲಿ ಮೊರೆನಾ ಬಹುಮತವನ್ನು ತಂದರು ಮತ್ತು ಮೇಲ್ಸದನ ಸೆನೆಟ್ ನಲ್ಲಿ ಬಹುಮತದ ಸಮೀಪಕ್ಕೆ ಬಂದರು.

ತನ್ನ ವಿಜಯದ ಭಾಷಣದಲ್ಲಿ, ಶೀನ್ಬಾಮ್ AMLO ಅನ್ನು ಶ್ಲಾಘಿಸಿದರು ಮತ್ತು ಮೆಕ್ಸಿಕೋದ ಅಗಾಧ ಆದಾಯದ ಅಸಮಾನತೆಯನ್ನು ಕಡಿಮೆ ಮಾಡುವಲ್ಲಿ ೊತ್ತು ಕೊಡುತ್ತಾ ಅವರ ಅನೇಕ ನೀತಿಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು. ಮೆಕ್ಸಿಕೋದ ಕಾರ್ಪೊರೇಟ್ ಗಳು (ಅವುಗಳಲ್ಲಿ ಹಲವು ಕಾರ್ಟೆಲ್ ಗಳಿಗೆ ಸಂಬಂಧಿಸಿವೆ) ಶೀನ್ಬಾಮ್ ಮತ್ತು ಮೊರೆನಾ ಅವರ ಭಾರೀ ಬಹುಮತದಿಂದ ಸ್ಟಾಕ್ ಮಾರುಕಟ್ಟೆಯು ಸ್ವಲ್ಪ ಕುಸಿತದೊಂದಿಗೆ ಪ್ರತಿಕ್ರಿಯಿಸಿತು.

ಶೀನ್ಬಾಮ್ ಅವುಗಳ ಮೂಲಕಾರಣಗಳನ್ನು ಪರಿಹರಿಸುವ ತಂತ್ರ ಮತ್ತು ಕಾರ್ಟೆಲ್ ಅಪರಾಧಿಗಳ ಬಗ್ಗೆ “ಶೂನ್ಯ ರೀಯಾಯಿತಿ” ಯ ಮೂಲಕ ಕಾರ್ಟೆಲ್ ಗಳನ್ನು ಎದುರಿಸುವುದನ್ನು ಮುಂದುವರೆಸುವ ಭರವಸೆ ನೀಡಿದರು.

ಮೆಕ್ಸಿಕನ್ ಆದಾಯದ ಅಸಮಾನತೆಯು ಲಿಂಗ ಮತ್ತು ವರ್ಗ ಅಸಮಾನತೆಯನ್ನು ಪ್ರತಿಬಿಂಬಿಸುತ್ತದೆ. ಮನೆ ಕಾರ್ಮಿಕರು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾರೆ ಮತ್ತು ಕೆಲಸದ ಸ್ಥಳದಲ್ಲಿ ಹೆಚ್ಚುತ್ತಿರುವ ಹಿಂಸೆಯನ್ನು ಎದುರಿಸುತ್ತಾರೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೊಲೆ ಪ್ರಮಾಣ ಹೆಚ್ಚಾಗಿದೆ. ಮೆಕ್ಸಿಕನ್ ರಾಜ್ಯಗಳಲ್ಲಿನ ಸ್ತ್ರೀವಾದಿ ಗುಂಪುಗಳು ಗರ್ಭಪಾತ ಕ್ಕೆ ಅವಕಾಶ ಮತ್ತು ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರಬೇಕು. ಮೆಕ್ಸಿಕೊ 

ಅಧಿಕಾರ ವಹಿಸಿಕೊಂಡ ಮೇಲೆ AMLO ನ ಮೊದಲ ಕ್ರಮವೆಂದರೆ ಮೆಕ್ಸಿಕೋದ ಕನಿಷ್ಠ ವೇತನವನ್ನು ದ್ವಿಗುಣಗೊಳಿಸುವುದು ಆಗಿತ್ತು. ಉತ್ತಮ ವೃದ್ಧಾಪ್ಯ ಪಿಂಚಣಿಗಳನ್ನು ಸ್ಥಾಪಿಸುವುದು ಮತ್ತು ಯುವಜನರನ್ನು ಕ್ರಿಮಿನಲ್ ಕಾರ್ಟೆಲ್ ಗಳಿಂದ ಹೊರಗಿಡಲು ಕಾಲೇಜು ವಿದ್ಯಾರ್ಥಿವೇತನಗಳು ಮತ್ತು ಇತರ ಪ್ರೋತ್ಸಾಹಗಳನ್ನು ಒದಗಿಸುವುದನ್ನು ಇತರ ಕ್ರಮಗಳು ಒಳಗೊಂಡಿತ್ತು. ಕುಖ್ಯಾತ ಭ್ರಷ್ಟ ರಾಷ್ಟ್ರೀಯ ಪೋಲಿಸ್ ಅನ್ನು ವಿಸರ್ಜಿಸಿದರು, ಕಾನೂನು ಜಾರಿಯನ್ನು ಸಶಸ್ತ್ರ ಪಡೆಗಳಿಗೆ ಹಸ್ತಾಂತರಿಸಿದರು.

ಯು.ಎಸ್ ಜತೆ ಗಡಿಯಲ್ಲಿ ವಲಸೆಯಲ್ಲಿ ಯು.ಎಸ್ ಸರಕಾರದ ದಮನದ ಪರಿಣಾಮ ಮತ್ತು ನಂತರದ ಪರಿಣಾಮಗಳನ್ನು ಸಹ ಅವರು ಎದುರಿಸಬೇಕಾಗುತ್ತದೆ. ಬಿಡೆನ್ ಅವರು ಅಧ್ಯಕ್ಷರಾಗಿದ್ದಾಗ ಟ್ರಂಪ್ ಮಂಡಿಸಿದ ಅನೇಕ ವಲಸೆ ವಿರೋಧಿ ನೀತಿಗಳನ್ನು ಈಗಾಗಲೇ ಜಾರಿಗೆ ತಂದಿದ್ದಾರೆ. ಬಿಡೆನ್ ಜೂನ್ 4 ರಂದು ಹೊಸ ಗಡಿ ಸಂರಕ್ಷಣಾ ಯೋಜನೆಯನ್ನು ತಯಾರಿಸಿದರು. ಇದು ಎಲ್ಲಾ ಆಶ್ರಯ ಪಡೆಯುವವರ ಬಹುತೇಕ ಸ್ವಯಂಚಾಲಿತ ನಿರಾಕರಣೆಯನ್ನು ಒಳಗೊಂಡಿದೆ ಮತ್ತು ಇತರ ವಲಸಿಗರನ್ನು ಉತ್ತರ ಮೆಕ್ಸಿಕೋದ ಗಡಿಯ ದಕ್ಷಿಣಕ್ಕೆ ಶಿಬಿರಗಳಲ್ಲಿ ಉಳಿಯಲು ಒತ್ತಾಯಿಸುತ್ತದೆ.

ಯು.ಎಸ್ ನಲ್ಲಿರುವ ಎಲ್ಲಾ 10 ರಿಂದ 11 ದಶಲಕ್ಷ ದಾಖಲೆ-ರಹಿತ ಜನರನ್ನು (ಅವರಲ್ಲಿ ಮೆಕ್ಸಿಕನ್ನರು ಬಹುಸಂಖ್ಯಾತರು) ಮೊದಲು ಸುತ್ತುವರೆದು ಜೈಲು ಶಿಬಿರಗಳಿಗೆ ಎಸೆದ ನಂತರ ಅವರನ್ನು ಗಡೀಪಾರು ಮಾಡುವುದಾಗಿ ಟ್ರಂಪ್ ಹೇಳುತ್ತಾರೆ. ಅವರು ವಿದೇಶಿ ವಲಸಿಗರನ್ನು ಅಪರಾಧಿಗಳು ಮತ್ತು ಅತ್ಯಾಚಾರಿಗಳು ಎಂದು ಕರೆಯುತ್ತಾರೆ . “ದರಿದ್ರ ದೇಶಗಳಿಂದ ಮುಸ್ಲಿಮರು ಮತ್ತು ತರ ಜನ ವಲಸೆ ಬರುವುದನ್ನು ತಡೆಯಲು ಗಡಿಯನ್ನು ಮುಚ್ಚುವುದಾಗಿ ಭರವಸೆ ನೀಡುತ್ತಾರೆ.

ಇದನ್ನು ನೋಡಿ : ಚೆ ಅಂದ್ರೆ ಪ್ರೀತಿ, ಚೆ ಅಂದ್ರೆ ಕ್ರಾಂತಿJanashakthi Media

Donate Janashakthi Media

Leave a Reply

Your email address will not be published. Required fields are marked *