ನವದೆಹಲಿ: ಬುಲ್ಡೋಜರ್ ಅನ್ನು ಚಲಾಯಿಸಿಕೊಂಡು ಟೋಲ್ ಬೂತ್ ಮಾರ್ಗದಲ್ಲಿ ಬಂದ ಚಾಲಕನಿಗೆ ಟೋಲ್ ಸಿಬ್ಬಂದಿ ಶುಲ್ಕ ಪಾವತಿಸುವಂತೆ ಕೇಳಿದ್ದಕ್ಕೆ ರೊಚ್ಚಿಗೆದ್ದು ಟೋಲ್ ಬೂತ್ ಅನ್ನೇ ಧ್ವಂಸಗೊಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ನವದೆಹಲಿ
ಟೋಲ್ ಬೂತ್ ನ ಕಬ್ಬಿಣದ ಗೇಟ್ ಅನ್ನು ಬುಲ್ಡೋಜರ್ ನಿಂದ ಕಿತ್ತೆಸೆಯುತ್ತಿರುವ ದೃಶ್ಯವನ್ನು ಟೋಲ್ ಸಿಬ್ಬಂದಿಗಳು ವಿಡಿಯೋ ಮೂಲಕ ಸೆರೆ ಹಿಡಿದಿದ್ದಾರೆ. ದೆಹಲಿ-ಲಕ್ನೋ ನ್ಯಾಷನಲ್ ಹೈವೇಯ ಹಾಪುರ್ ಟೋಲ್ ಬೂತ್ ನಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಇದನ್ನು ಓದಿ : ಎನ್ಡಿಎ ಸರ್ಕಾರದ ಸಂಪುಟದ ಸಚಿವರು ಇವರು..
ಟೋಲ್ ಶುಲ್ಕ ಪಾವತಿಸುವಂತೆ ಟೋಲ್ ಬೂತ್ ಸಿಬ್ಬಂದಿ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ನಂತರ ಚಾಲಕ ಬುಲ್ಡೋಜರ್ ನಿಂದ ಟೋಲ್ ಬೂತ್ ಅನ್ನು ಧ್ವಂಸಗೊಳಿಸಿದ್ದಾನೆ ಎಂದು ವರದಿ ವಿವರಿಸಿದೆ.
टोल मांगने पर बुलडोजर नाराज हो गया। टोल प्लाजा के 2 बूथ तोड़ डाले। कर्मचारियों ने भागकर जान बचाई। फिलहाल बुलडोजर जी फरार हैं।
📍छिजारसी टोल प्लाजा, जिला हापुड़ (UP) pic.twitter.com/oLivR2N4Co— Sachin Gupta (@SachinGuptaUP) June 11, 2024
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಬುಲ್ಡೋಜರ್ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಕಳೆದ ವಾರ ಹಾಪುರ್ ಟೋಲ್ ಬೂತ್ ನಲ್ಲಿ ಕಾರು ಚಾಲಕನೊಬ್ಬ ಶುಲ್ಕ ಪಾವತಿಯನ್ನು ತಪ್ಪಿಸಲು ಮಿತಿಮೀರಿದ ವೇಗದಿಂದ ಬಂದು ಟೋಲ್ ಸಿಬಂದಿಗೆ ಡಿಕ್ಕಿ ಹೊಡೆದು, ಟೋಲ್ ಗೇಟ್ ಅನ್ನು ಮುರಿದುಕೊಂಡು ತೆರಳಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನು ನೋಡಿ : ಲೋಕಸಭೆ ಚುನಾವಣೆ 2024: ಹಲವು ಕ್ಷೇತ್ರಗಳಲ್ಲಿ NOTA ಮತದಾನ ಪ್ರಮಾಣ ಹೆಚ್ಚು!Janashakthi Media