ಕೊಡಗು: ಕೊಡಗು ಜಿಲ್ಲೆಯಲ್ಲಿ, ಕಳೆದೆರಡು ದಿನಗಳಿಂದ ಉತ್ತಮ ಮುಂಗಾರು ಮಳೆಯಾಗಿದ್ದು, 2018 ರ ಕಹಿ ನೆನಪು ಮಾಸುವ ಮುನ್ನ ಜಿಲ್ಲೆಯಲ್ಲಿ ಜನರು ಆತಂಕದಿಂದ ದಿನಕಳೆಯುವಂತಾಗಿದೆ.
ಈ ಬಾರಿ 70 ರಿಂದ 80 ಭಾಗದಲ್ಲಿ ಭೂ ಕುಸಿತ ಮತ್ತು ಜಲಪ್ರಳಯದ ಸೂಚನೆಯನ್ನು ಜಿಲ್ಲಾಡಳಿತ ನೀಡಿದ್ದು, ಇದರ ಭಾಗವಾಗಿ ಜಿಲ್ಲೆಗೆ ಬಂದಿಳಿದಿರುವ ಎನ್ಡಿಆರ್ಎಫ್ ತಂಡ ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದೆ.
ಇದನ್ನೂ ಓದಿ: H5N2 ಹಕ್ಕಿ ಜ್ವರದಿಂದಾದ ಮೊದಲ ಮಾನವ ಸಾವಿನ ಬಗ್ಗೆ ತಜ್ಞರು ಏಕೆ ಚಿಂತಿಸುತ್ತಿದ್ದಾರೆ?
ಪ್ರವಾಹದ ಸಮಯದಲ್ಲಿ ಜನರ ರಕ್ಷಣೆ ಮಾಡಲು ಜಿಲ್ಲಾ ಪೊಲೀಸರು ಸಿದ್ಧತೆ ನಡೆಸಿದ್ದು, ಹಾರಂಗಿ ಹಿನ್ನೀರಿನಲ್ಲಿ ಜನರ ರಕ್ಷಣೆಯನ್ನು ಯಾವ ರೀತಿ ಮಾಡಬೇಕು ಎಂದು 26 ಪೋಲಿಸ್ ಸಿಬ್ಬಂದಿಯಿಂದ ಪ್ರತ್ಯೇಕೆ ಮತ್ತು ತರಬೇತಿ ಮಾಡಿ ತೋರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳು ಇಲ್ಲಿಯೇ ಇದ್ದು ಮಳೆಗಾಲ ಎದುರಿಸಲು ಜಿಲ್ಲಾಡಳಿತಕ್ಕೆ ಸಹಕರಿಸಲಿದೆ. ಈ ಮೂಲಕ ಜನರಲ್ಲಿದ್ದ ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತಿದೆ.
ಇದನ್ನೂ ನೋಡಿ: ಮಾರ್ಕ್ಸ್ವಾದ ಮತ್ತು ಅದರ ಆಧಾರಿತ ಚಳುವಳಿಗಳ ಕೊಲೆಗೆ ನಿರಂತರವಾಗಿ ಹಲವು ಪ್ರಯತ್ನಗಳು” ನಡೆದಿವೆ Janashakthi Media