ಬಿಜೆಪಿಗೆ ಬೇಕು ಕಿಂಗ್‌ ಮೇಕರ್ಸ್‌

ನವದೆಹಲಿ: ಸದ್ಯ ಟ್ರೆಂಡ್ ನೋಡಿದರೆ, ಎನ್ ಡಿಎ ಮೈತ್ರಿಕೂಟ ಬಹುಮತದತ್ತ ಇದ್ದರೂ ಬಿಜೆಪಿಯ ಸಂಖ್ಯಾ ಬಲ ಸರಳ ಬಹುಮತದ ಸನಿಹಕ್ಕೆ ಬರುವಂತೆ ಕಾಣುತ್ತಿಲ್ಲ. ಇದು ಬಿಜೆಪಿಯ ಹಾದಿಗೆ ಸಂಕಷ್ಟ ತಂದೊಡ್ಡಿದೆ. ಸದ್ಯದ ಸಂಖ್ಯಾಬಲ ಗಮನಿಸಿದರೆ, ಎನ್‌ಡಿಎ ಮೈತ್ರಿ ಕೂಟ ಅಂದಾಜು 290 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಲ್ಲಿದೆ. ಈ ಪೈಕಿ ಬಿಜೆಪಿ 238 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.  ಬಿಜೆಪಿಗೆ

ಲೋಕಸಭೆಯಲ್ಲಿ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಏರಲು ಕನಿಷ್ಟ 272 ಸದಸ್ಯ ಬಲ ಬೇಕು. ಈ ಪೈಕಿ ಎನ್‌ಡಿಎ ಮೈತ್ರಿ ಕೂಟ 290 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದ್ದು, 3ನೇ ಅವಧಿಗೆ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಬಿಜೆಪಿ ಸಂಖ್ಯಾ ಬಲ ಕುಸಿದಿರುವ ಕಾರಣ, ಎನ್‌ಡಿಎ ಮೈತ್ರಿ ಕೂಟದ ಮಿತ್ರ ಪಕ್ಷಗಳು ಮೂಗುದಾರ ಹಾಕುವ ಸಾಧ್ಯತೆ ಹೆಚ್ಚಾಗಿಯೇ ಇವೆ.

ಇದನ್ನೂ ಓದಿ: ಸಿಕ್ಕಿಂ ವಿಧಾನಸಭೆ ಚುನಾವಣೆ: 32 ಕ್ಷೇತ್ರಗಳ ಪೈಕಿ 31 ಸ್ಥಾನ ಗೆದ್ದ ಸಿಕೆಎಂ

2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ 353 ಸ್ಥಾನಗಳಲ್ಲಿ ಗೆದ್ದಿತ್ತು. ಈ ವೇಳೆ ಬಿಜೆಪಿ ಪಕ್ಷವೊಂದೇ 303 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಹೀಗಾಗಿ ಬಿಜೆಪಿಯೇ ನಿರ್ಣಾಯಕ ಎನ್ನುವಂತಾಗಿತ್ತು. ಈಗ ಈ ರೀತಿಯ ವಾತಾವರಣ ಬಿಜೆಪಿಗೆ ಇಲ್ಲದಂತಾಗಿದೆ. ಇನ್ನು ನಿತೀಶ್ ಕುಮಾರ್ ಸಾರಥ್ಯದ ಜೆಡಿಯು ಹಾಗೂ ಟಿಡಿಪಿ ತಲಾ 15 ಸ್ಥಾನಗಳಲ್ಲಿ ಗೆಲುವು ಕಾಣಬಹುದು ಎನ್ನಲಾಗುತ್ತಿದೆ. ಇವೆರಡೂ ಪಕ್ಷಗಳು ಎನ್‌ಡಿಎ ಮೈತ್ರಿ ಕೂಟದಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸಲಿವೆ.

ಇದನ್ನೂ ನೋಡಿ: ಕಾರ್ಲ್ ಮಾರ್ಕ್ಸ್ ಬಂಡವಾಳ ಸಂಪುಟ-2 ಬಿಡುಗಡೆ

Donate Janashakthi Media

Leave a Reply

Your email address will not be published. Required fields are marked *