ದಾವಣಗೆರೆ: ಮಹಿಳೆಯೋರ್ವಳಿಗೆ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಆಕೆಯನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮಾರಾಟವಾಗಿದ್ದ ಮಹಿಳೆಗೆ ಐದು ವರ್ಷದ ಹಿಂದೆ ವಿವಾಹವಾಗಿತ್ತು. ಓರ್ವ ಮಗ ಕೂಡ ಇದ್ದು, ಪತಿಯ ಸಾವಿನ ಬಳಿಕ ಜೀವನ ನಡೆಸಲು ಕಷ್ಟಸಾಧ್ಯವಾದ್ದರಿಂದ ಕೆಲಸಕ್ಕಾಗಿ ಆಕೆ ಹುಡುಕಾಟ ನಡೆಸಿದ್ದಳು ಎನ್ನಲಾಗಿದೆ. ಜೀವನ ನಡೆಸಲು ಕಲ್ಯಾಣ ಮಂಟಪಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮೇ 12ರಂದು ಶಿವಮೊಗ್ಗಕ್ಕೆ ಹೋಗುತ್ತೇನೆ ಎಂದು ಹೋಗಿದ್ದ ಮಹಿಳೆ ವಾಪಾಸ್ ಆಗಿರಲಿಲ್ಲ.
ಮಹಿಳೆ ಬೇರೊಬ್ಬರ ಫೋನ್ ನಿಂದ ಸಹೋದರನಿಗೆ ಕರೆ ಮಾಡಿ ತನ್ನನು 1 ಲಕ್ಷ ರೂಪಾಯಿಗೆ ಸೊಲ್ಲಾಪುರದ ವ್ಯಕ್ತಿಯೊಬ್ಬರಿಗೆ ಮಾರಿದ್ದಾರೆ ಎಂದು ಅಳಲುತೋಡಿಕೊಂಡಿದ್ದರು.
ಇದನ್ನೂ ಓದಿ: ವಿಧಾನಸಭೆಯಿಂದ ಮೇಲ್ಮನೆಗೆ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ ಘೋಷಣೆ:ಯತೀಂದ್ರ ಸಿದ್ದರಾಮಯ್ಯಗೆ ಮೇಲ್ಮನೆಯ ಸ್ಥಾನ ಬಹುತೇಕ ಕಚಿತ
ಹೊನ್ನಾಳಿ ಮೂಲದ 30 ವರ್ಷದ ಮಹಿಳೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 1 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ಮಹಿಳೆ ಬೇರೆಯವರ ಮೊಬೈಲ್ ನಿಂದ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಸಹೋದರ ಪೊಲೀಸರಿಗೆ ದೂರು ನೀಡಿದ್ದಾನೆ.
ದಾವಣಗೆರೆ ಜಿಲ್ಲೆಯ ಹೊನಾಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನ ಮೇರೆಗೆ 3 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ತಕ್ಷಣ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭದ್ರಾವತಿ ಮೂಲದ ರೋಜಿ ಲೀನಾ (43), ಮಲ್ಲಿಕಾರ್ಜುನ (47) ಹಾಗೂ ಲೋಕೇಶ್ (35) ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಇದನ್ನೂ ನೋಡಿ: ಮೃಣಾಲ್ ಸೆನ್ 100 ವೆಬಿನಾರ್ ಸರಣಿ -08 | ಮೃಣಾಲ್ ಸೆನ್ ಅವರ ಸಿನೆಮಾಗಳಲ್ಲಿ ಕೋರ್ಟು ದೃಶ್ಯಗಳು