ಉತ್ತರ ಪ್ರದೇಶ; ಒಂದೇ ಬೂತ್‌ನಲ್ಲಿ 8 ಬಾರಿ ಮತ ಚಲಾಯಿಸಿ ಸಿಕ್ಕಿಬಿದ್ದಿದ ಯುವಕ

ಉತ್ತರ ಪ್ರದೇಶ : ಮೂರನೇ ಹಂತದ ಮತದಾನದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಒಂದೇ ಬೂತ್​ನಲ್ಲಿ 8 ಬಾರಿ ಮತ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ. ಅಷ್ಟೇ ಅಲ್ಲ ಪ್ರತಿ ಬಾರಿಯೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಉತ್ತರಪ್ರದೇಶದ ಇಟಾಹ್‌ನಲ್ಲಿ ಮೂರನೇ ಹಂತದ ಮತದಾನದಲ್ಲಿ ಒಂದೇ ಬೂತ್‌ನಲ್ಲಿ ಯುವಕನೊಬ್ಬ  8 ಬಾರಿ ಮತ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ. ಅಷ್ಟೇ ಅಲ್ಲ ಪ್ರತಿ ಬಾರಿಯೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನು ಓದಿ : ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು

ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಯುವಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಚುನಾವಣಾ ತಂಡದ ಎಲ್ಲ ಸದಸ್ಯರನ್ನು ಅಮಾನತುಗೊಳಿಸಲಾಗಿದ್ದು, ಮರು ಮತದಾನಕ್ಕೆ ಶಿಫಾರಸು ಮಾಡಲಾಗಿದೆ.

ಮೇ 7 ರಂದು ಮೂರನೇ ಹಂತದ ಅಡಿಯಲ್ಲಿ ಇಟಾಹ್‌ನಲ್ಲಿ ಮತದಾನ ನಡೆಯಿತು. 2 ನಿಮಿಷ 20 ಸೆಕೆಂಡ್‌ನ ಈ ವಿಡಿಯೋದಲ್ಲಿ ಈ ಯುವಕ ಪ್ರತಿ ಬಾರಿಯೂ ಮತದಾನ ಮಾಡಿದ್ದಾನೆ. ಅವರು ಕಮಲದ ಚಿಹ್ನೆಯ ಮುಂಭಾಗದಲ್ಲಿರುವ ಗುಂಡಿಯನ್ನು ಒತ್ತುವುದನ್ನು ಕಾಣಬಹುದು.

ಚುನಾವಣಾ ಆಯೋಗ ಬಿಜೆಪಿಯ ಹಿತಾಸಕ್ತಿಯಂತೆ ಕೆಲಸ ಮಾಡುತ್ತಿದೆ, ಇದೆಲ್ಲದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಖಿಲೇಶ್​ ಪೋಸ್ಟ್ ಮಾಡಿದ್ದಾರೆ.

ಇದನ್ನು ನೋಡಿ : ಶ್ಯಾಮ್ ರಂಗೀಲಾ ಸ್ಪರ್ಧೆಗೆ ಹೆದರಿದ ಪ್ರಧಾನಿ ಮೋದಿ : ನಾಮಪತ್ರ ತಿರಸ್ಕೃತದ ಹಿಂದೆ ಮೋದಿ ಕೈವಾಡ Janashakthi Media

 

Donate Janashakthi Media

Leave a Reply

Your email address will not be published. Required fields are marked *