ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಕರ್ನಾಟಕ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಆಗ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಲಕಾವೇರಿಯ ಭಾಗಮಂಡಲ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಬೀಳುತ್ತಿರುವುದರಿಂದ ಕೆಆರ್‌ಎಸ್ ಡ್ಯಾಂಗೂ ನೀರು ಹರಿದು ಬರುವ ನಿರೀಕ್ಷೆ ಇದೆ. ಮಳೆಯಲ್ಲಿ ಪ್ರವಾಸಿಗರು ಮಳೆಯಲ್ಲಿ ಕುಣೀಯುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು. ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.15 ಮಿ.ಮೀ. ಮಳೆ ಜಿಲ್ಲೆಯಲ್ಲಿ ಆಗಿದೆ.

ಶಿವಮೊಗ್ಗದಲ್ಲೂ ಮಲೆನಾಡ ಜನಜೀವನ ಧಾರಾಕಾರ ಮಳೆಯಿಂದ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಶಿವಮೊಗ್ಗ ಜಿಲ್ಲೆಯ ಹೊಸನಗರ, ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಭಾರಿ ಮಳೆ ಅಬ್ಬರಿಸಿದೆ. ಸುರಿದ ಮಳೆಯಿಂದಾಗಿ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಗುಡುಗು, ಸಿಡಿಲ ಆರ್ಭಟದೊಂದಿಗೆ ಭಾರಿ ವರ್ಷಧಾರೆ ಆಗಿದೆ. ವಾಹನ ಸವಾರರು ಭಾರಿ ಮಳೆಗೆ ಸಿಲುಕಿ ಪರದಾಡಿದ್ದಾರೆ. ವಿದ್ಯುತ್ ಸಂಪರ್ಕ ಕೂಡ ನಿರಂತರ ಮಳೆಯಿಂದ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಮಂತ್ರಿಮಾಲ್‌ಗೆ ಜಡಿದಿರುವ ಬೀಗ ತೆಗೆಯುವಂತೆ ಸೂಚಿಸಿದ ಹೈಕೋರ್ಟ್

ಮಳೆರಾಯ ಬಿಸಿಲಿನ ಬೇಗೆಗೆ ಮೈಸೂರಿನಲ್ಲಿ ತಂಪೆರೆದಿದ್ದಾನೆ. ಮುಸ್ಸಂಜೆ ವೇಳೆಗೆ ಶುರುವಾದ ಜಿಟಿ ಜಿಟಿ ಮಳೆಯು ಕೆಲವು ಗಂಟೆಗಳ ಕಾಲ ಸುರಿದು ಜನರಿಗೆ ಖುಷಿ ತಂದಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಮಳೆಯಾಗ್ತಿದ್ದು, ಗುಂಡ್ಲುಪೇಟೆ ಭಾಗದ ಹಲವೆಡೆ ಭಾರೀ ಮಳೆಯಾಗಿದೆ. ಜಮೀನುಗಳಿಗೆ ನುಗ್ಗಿದ ಮಳೆ ನೀರಿನ ಪರಿಣಾಮ ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ಈರುಳ್ಳಿ, ಅರಿಶಿನ ಬೆಳೆ ನಾಶವಾಗಿದೆ. ಮಳೆ ಬಂದಿದ್ರಿಂದ ಒಂದೆಡೆ ರೈತರಿಗೆ ಖುಷಿ ಆಗಿದ್ರೆ, ಮತ್ತೊಂದೆಡೆ ರೈತರಲ್ಲಿ ಕಣ್ಣೀರು ತರಿಸಿದ್ದಾನೆ ಮಳೆರಾಯ.

ರುರಿನಲ್ಲಿ ಧಾರಾಕಾರ ಮಳೆ ಆಗಿದೆ. ತುಮಕೂರು ನಗರ,  ಗುಬ್ಬಿ, ತುಮಕೂರು ಗ್ರಾಮಾಂತರ, ನಿಟ್ಟೂರು, ಸೇರಿದಂತೆ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ರೈತರಲ್ಲಿ ಭಾರೀ ಮಳೆಯಿಂದ ಮೊಗದಲ್ಲಿ ಮಂದಹಾಸ ಮೂಡಿದೆ. ಅತ್ತ ಕೋಟೆನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ ಜೋರಾಗಿದೆ. ಬಿಸಿಲ ತಾಪದಲ್ಲಿ ಬೆಂದಿದ್ದ ಭೂಮಿಗೆ ತಂಪೆರೆದಿದ್ದಾನೆ ಮಳೆರಾಯ. ಭಾರಿ ಮಳೆಯಿಂದ ರಸ್ತೆ, ಚರಂಡಿಗಳು ತುಂಬಿ ಹರಿದಿವೆ.

ಇದನ್ನೂ ನೋಡಿ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು! ಆದ್ರೆ ಸಿಎಂ ಕಚೇರಿಗೆ ಹೋಗುವಂತಿಲ್ಲ!!

Donate Janashakthi Media

Leave a Reply

Your email address will not be published. Required fields are marked *