ಬೆಂಗಳೂರು: ಕಕ್ಷಿದಾರ ಮಹಿಳೆಯ ಮೇಲೆ ಪಬ್ಲಿಕ್ ಪ್ರಾಸಿಕ್ಯೂಟರ್ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀರಾಂ ಬಂಧಿಸಲಾಗಿದೆ. ಕಕ್ಷಿದಾರ
ಮಹಿಳೆ ನೀಡಿದ್ದ ಹಳೆಯ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಹೀಗಾಗಿ ಆ ಮಹಿಳೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಆದೇಶ ಪ್ರತಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಕೇಳಿದ್ದಳು. ಮೆಜೆಸ್ಟಿಕ್ ಬಳಿ ಇರುವ ಹೋಟೆಲ್ ಸಮೀಪ ಪ್ರಾಸಿಕ್ಯೂಟರ್ ಶ್ರೀರಾಂ ಆದೇಶ ಪ್ರತಿ ಕೊಡುವುದಾಗಿ ಮಾತನಾಡಿದ್ದಾನೆ.
ಇಲ್ಲೇ ಕಾಟನ್‌ಪೇಟೆಯ ಲಾಡ್ಜ್‌ವೊಂದಕ್ಕೆ ಬನ್ನಿ ಕೇಸ್ ಬಗ್ಗೆ ಮಾತಾಡೋಣ ಎಂದಿದ್ದಾನೆ. ಮಹಿಳೆಯನ್ನು ನಾನಾ ರೀತಿಯಲ್ಲಿ ಒತ್ತಾಯ ಮಾಡಿ ಲಾಡ್ಜ್ ಹೋಗೊಣಾ ಎಂದಿದ್ದಾನೆ. ಲೈಂಗಿಕವಾಗಿ ಸಹಕರಿಸಲು ಕೋರಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : ಪ್ರಜ್ವಲ್ ರೇವಣ್ಣ ವಿಡಿಯೊಗಳ ಮಾರ್ಫಿಂಗ್ ಆರೋಪ; ಇಬ್ಬರಿಗೆ ನೋಟಿಸ್ ಜಾರಿ
ಈ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ವರ್ತನೆಗೆ ಪ್ರತಿರೋಧ ತೋರಿದ ಮಹಿಳೆ, ಆತನಿಗೆ ಗೊತ್ತಿಲ್ಲದಂತೆ ಕೂಡಲೆ ಪತಿಗೆ ಕರೆ ಮಾಡಿ ಅಸಭ್ಯ ವರ್ತನೆ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾಳೆ. ತಕ್ಷಣ ಮಾಹಿತಿ ಪಡೆದು ಬಂದ ಮಹಿಳೆಯ ಪತಿ ಹಾಗೂ ಅವರ ಸ್ನೇಹಿತರು ಪಬ್ಲಿಕ್ ಪ್ರಾಸಿಕ್ಯೂಟರ್ ಲಾಡ್ಜ್‌ಗೆ ಕರೆಯುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ರಸ್ತೆಯಲ್ಲೇ ನಿಂತು ಮಹಿಳೆಯನ್ನು ಲಾಡ್ಜ್‌ಗೆ ಕರೆದಿದ್ದಾನೆ. ಈ ವೇಳೆ ಮಹಿಳೆಯ ಪತಿ ಹಾಗೂ ಸ್ನೇಹಿತರು ಸಹಾಯಕ್ಕೆ ದೌಡಾಯಿಸಿದ್ದಾರೆ. ಯಾವ ಲಾಡ್ಜ್‌ಗೆ ಬರಬೇಕೆಂದು ಪ್ರಶ್ನೆ ಮಾಡಿದಾಗ ಇವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಎಲ್ಲರೂ ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಟನ್ ಪೇಟೆ ಪೊಲೀಸರು ಆರೋಪಿ ಶ್ರೀರಾಂನನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ಶ್ರೀಂರಾಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಇದನ್ನು ನೋಡಿ : 90 ದಿನ ವಿದೇಶದಲ್ಲಿ ಇರ್ತಾರಾ ಪ್ರಜ್ವಲ್ ರೇವಣ‍್ಣ!ಇಂಟರ್ ಪೋಲ್ ಬಂಧಿಸಿ ಭಾರತಕ್ಕೆ ಕರೆ ತರುತ್ತಾ?