ರಾಮನಗರ: ವಿವಾಹ ಸಮಾರಂಭದಲ್ಲಿ ಬಿರಿಯಾನಿ ಹಾಗೂ ಐಸ್ ಕ್ರೀಂ ತಿಂದು ಅಸ್ವಸ್ತರಾಗಿದ್ದ 50ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಕಳೆದ ಭಾನುವಾರ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 40 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರನ್ನು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಮಾಡಿರುವಂತಹ ಹೀನಕೃತ್ಯ ನಿಜಕ್ಕೂ ಖಂಡನೀಯ: ಕುಮಾರಬಂಗಾರಪ್ಪ
ಚನ್ನಪಟ್ಟಣ ನಗರದ ಸಾತನೂರು ಸರ್ಕಲ್ ಸಮೀಪ ಮದುವೆ ಸಮಾರಂಭ ಏರ್ಪಾಡಾಗಿತ್ತು. ಊಟದ ನಂತರ ಐಸ್ ಕ್ರೀಂ ಸೇವಿಸಿದವರಿಗೆ ಅರ್ಧ ಗಂಟೆಯ ಬಳಿಕ ವಾಂತಿ, ಭೇದಿ ಶುರುವಾಗಿದೆ. ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳಾದ ಸುಮಾರು ಐವತ್ತಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ನೋಡಿ: ಸಂಯುಕ್ತ ಕಿಸಾನ್ ಮೋರ್ಚಾ ಅಖಿಲ ಭಾರತ ಪತ್ರಿಕಾಗೋಷ್ಠಿ-ಹುಬ್ಬಳ್ಳಿ SKM All India Press Meet Karnataka.