ಬೆಂಗಳೂರು: ಮನೆಕೆಲಸದವಳ ಅಪಹರಣದ ಆರೋಪದ ಮೇರೆಗೆ ಬಂಧನದಲ್ಲಿರುವ ಹೊಲೆನರಸೀಪುರದ ಜೆಡಿಎಸ್ ಶಾಸಕ, ಹೆಚ್.ಡಿ.ದೇವೇಗೌಡರ ಹಿರಿಯಪುತ್ರ ಹೆಚ್.ಡಿ. ರೇವಣ್ಣನನ್ನು ಜೆಡಿಎಸ್ನಿಂದ ಅಮಾನತುಗೊಳಿಸುವಂತೆ ಒತ್ತಡಗಳು ಕೇಳಿಬರುತ್ತಿವೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣನ ಜೊತೆ ಹೆಚ್.ಡಿ.ರೇವಣ್ಣನಿಂದ ಕೂಡ ತೆನೆಹೊತ್ತ ಮಹಿಳೆಗೆ ತೀರಾ ಮುಜುಗರವಾಗುತ್ತಿದ್ದು,ಬಹಿರಂಗ ಸಭೆ ಸಮಾರಂಭಗಳು ಸೇರಿದಂತೆ ರಾಜಕೀಯವಾಗಿಯೂ ವೈಯಕ್ತಿಕವಾಗಿಯೂ ಮುಜಗರಕ್ಕೀಡಾಬೇಕಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಬಳಿ ಸ್ವಪಕ್ಷದಕ ಕೆಲ ಮುಖಂಡರು ಹೇಳಿಕೊಂಡಿದ್ದು,ಈ ಬಗ್ಗೆ ಪಕ್ಷದ ಒಳಗೆ ಗಂಭೀರ ಅಪಸ್ವರಗಳೇಳುತ್ತಿವೆ. ಹೆಚ್.ಡಿಮರೇವಣ್ಣನನ್ನು ಜೆಡಿಎಸ್ನಿಂದ ಅಮಾನತು ಅಥವಾ ಉಚ್ಛಾಟಿಸುವಂತೆ ಆಗ್ರಹಗಳು ಕೇಳಿಬಂದಿವೆ.
ಇದನ್ನೂ ಓದಿ: ಪೆನ್ಡ್ರೈವ್ ಪ್ರಕರಣ: ಎಸ್ಐಟಿ ಹೊರಡಿಸಿದ ವಿಶೇಷ ಪ್ರಕಟಣೆ
ಹೀಗಾಗಿ ಆದಷ್ಟು ಬೇಗ ಈ ಬಗ್ಗೆ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಚರ್ಚಿಸಿ ಬಳಿಕ ಕ್ರಮಕೈಗೊಳ್ಳುವ ಬಗ್ಗೆ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
ಇದನ್ನೂ ನೋಡಿ: ಪೆನ್ಡ್ರೈವ್ ಪ್ರಕರಣ : ರೇವಣ್ಣ, ಪ್ರಜ್ವಲ್ ರೇವಣ್ಣ ಶೀಘ್ರ ಬಂಧನಕ್ಕೆ ಆಗ್ರಹ Janashakthi Media