ಹೆಚ್.ಡಿ.ರೇವಣ್ಣನಿಗೂ ಜಾರಿಯಾದ ಲುಕ್‌ಔಟ್‌ ನೊಟೀಸ್‌

ಬೆಂಗಳೂರು :- ಮನೆಕೆಲಸದ ಹೆಂಗಸೊಬ್ಬರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಆರೋಪಿ ಹೆಚ್.ಡಿ.ರೇವಣ್ಣಗೆ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್‌ ನೊಟೀಸ್‌ ಜಾರಿ ಮಾಡಿದ್ದಾರೆ.

ಮಹಿಳೆಯೊಬ್ಬರು ಹೊಳೆನರಸೀಪುರದಿಂದ ಅಪಹರಣ ಮಾಡಿರುವ ಆರೋಪದಲ್ಲಿ ಎರಡನೇ ಆರೋಪಿಯಾಗಿರುವ ಹೆಚ್.ಡಿ.ರೇವಣ್ಣ ವಿದೇಶಕ್ಕೆ ಹಾರುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ‌. ಪ್ರಜ್ವಲ್ ರೇವಣ್ಣರ ಮಾದರಿಯಲ್ಲಿಯೇ ಹೆಚ್.ಡಿ. ರೇವಣ್ಣ ಕೂಡ ವಿದೇಶಕ್ಕೆ ಹೋಗಬಹುದು. ಅಲ್ಲಿ ತಲೆ ಮರೆಸಿಕೊಳ್ಳಬಹುದು ಎಂಬ ಮುನ್ಸೂಚನೆ ಮೇರೆಗೆ, ಹೆಚ್.ಡಿ. ರೇವಣ್ಣರ ವಿರುದ್ಧ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ : ವಿದೇಶಕ್ಕೆ ಹಾರಿದ್ರಾ ಎಚ್‌ಡಿ ರೇವಣ್ಣ?!

ಇನ್ನು ಹೊಳೆನರಸೀಪುರದ ಹೆಚ್.ಡಿ.ರೇವಣ್ಣ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯನ್ನು ಹೆಚ್.ಡಿ.ರೇವಣ್ಣ, ಮತ್ತು ಸತೀಶ್‌ ಬಾಬಣ್ಣ, ಅಪಹರಿಸಿದ್ದಾರೆ ಎಂದು ವಿರುದ್ಧ  ರಾಜು ಹೆಚ್.ಡಿ. ಮೈಸೂರಿನ ಕೆ.ಆರ್.ನಗರದಲ್ಲಿ  ದೂರು ದಾಖಲಿಸಿದ್ದರು, ಆ ದೂರಿನನ್ವಯ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಲುಕ್‌ಔಟ್ ನೋಟಿಸ್‌ನ್ನು ಎಸ್‌ಐಟಿ ಅಧಿಕಾರಿಗಳು ಜಾರಿಗೊಳಿಸಿದ್ದಾರೆ‌

ಇದನ್ನ ನೋಡಿ: ಮೇ ದಿನದ ಹಿನ್ನೆಲೆ : 8 ಗಂಟೆ ಕೆಲಸಕ್ಕಾಗಿ ನಡೆದ ಹೋರಾಟದ ಮಹತ್ವ – ಬಿ.ಆರ್.ಮಂಜುನಾಥ್ ವಿಶ್ಲೇಷಣೆಯಲ್ಲಿ

Donate Janashakthi Media

Leave a Reply

Your email address will not be published. Required fields are marked *