ಬೆಂಗಳೂರು: ಹಾಸನ ಪೆನ್ಡ್ರೈವ್ ಹಗರಣ ಕುರಿತು ಮಹತ್ವದ ಬೆಳವಣಿಗೆ ಎನ್ನುವಂತೆ ಪೆನ್ಡ್ರೈವ್ಇಂದ ಲೀಕ್ ಆದ ವಿಡೀಯೋಗಳ ಮೂಲ ಎನ್ನಲಾದ ಡ್ರೈವರ್ ಕಾರ್ತಿಕ್ ವಿಡೀಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಅಜ್ಞಾತ ಸ್ಥಳವೊಂದರಲ್ಲಿ ವಿಡಿಯೋ ಮಾಡಿರುವ ಕಾರ್ತಿಕ್ ಪೆನ್ಡೈವ್ ಲೀಕ್ ಹೇಗಾಯಿತು? ಎನ್ನುವ ಬಗ್ಗೆ ವಿವರಿಸಿ ಮಾಹಿತಿ ಹಂಚಿಕೊಂಡಿದ್ದಾರೆ.
ತಮಗೆ ನ್ಯಾಯಸಿಗುತ್ತದೆ ಎನ್ನುವ ಕಾರಣಕ್ಕಾಗಿ ಪೆನ್ ಡ್ರೈವ್ ವಿಡಿಯೋ ,ಫೋಟೋಗಳ ಕಾಪಿಯೊಂದನ್ನು ಬಿಜೆಪಿಯ ದೇವರಾಜ ಗೌಡರರಿಗೆ ನೀಡಿದ್ದೇನೆ. ಅವರು ವಕಾಲತ್ತು ವಹಿಸಿಕೊಂಡ ಕಾರಣಕ್ಕೆ ಅವರಿಗೆ ಕೊಟ್ಟಿದ್ದೆ ಹೊರತು ಮತ್ಯಾರಿಗೂ ಕೊಟ್ಟಿಲ್ಲ .ಆದರೆ, ಆ ವಿಡೀಯೋಗಳನ್ನು ಅವರು ಹೇಗೆ ಬಳಸಿಕೊಂಡರು? ಅಥವಾ ಅದನ್ಯಾರಿಗಾದರೂ ಹಂಚಿದರೇ ಎಂಬ ವಿಚಾರಗಳು ಯಾವುದೂ ನನಗೆ ಗೊತ್ತಿಲ್ಲ. ಇದರಲ್ಲಿ ಕಾಂಗ್ರೆಸ್ ನಾಯಕರ ಪಾತ್ರಗಳಿಲ್ಲ. ಕಾಂಗ್ರೆಸ್ನವರು ನನಗೆ ಅನ್ಯಾಯವಾದಾಗಲೂ ನನ್ನ ನೆರವಿಗೆ ಬಂದಿಲ್ಲ.
ಅವರಿಗೆ ನಾನ್ಯಾಕೆ ವಿಡೀಯೋ ಕಾಪಿ ಕೊಡಲಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಎಲ್ಲಾ ವಿಚಾರಗಳನ್ನು ಎಸ್ಐಟಿ ಮುಂದೆ ಹಾಜರಾಗಿ ವಿವರ ನೀಡುವುದಾಗಿ ಕಾರ್ತಿಕ್ ತಿಳಿಸಿದ್ದು, ಆನಂತರ ಮಾಧ್ಯಮಗಳ ಎದುರು ಬಂದು ಮಾತನಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಹಾಸನ ಪೆನ್ ಡ್ರೈವ್ ಪ್ರಕರಣ: ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಿ: ಕುಶಾಲಾ ಸ್ವಾಮಿ
ಸದ್ಯ ಹೊರಬಿದ್ದಿರುವ ಹಾಸನ ಪೆನ್ ಡ್ರೈವ್ ವಿಡಿಯೋ ಲಿಂಕ್ ಕೇಸ್ನಲ್ಲಿ ಕಾರ್ತಿಕ್ರಿಂದ ಎಲ್ಲಾ ದೃಶ್ಯಗಳು ಹೊರಬಿದ್ದಿರುವ ಬಗ್ಗೆ ಮಾಹಿತಿ ಹೊರಬಂದಿತ್ತು. ಪ್ರಜ್ವಲ್ ರೇವಣ್ಣ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಕಳೆದ ವರ್ಷ ರೇವಣ್ಣರ ಕುಟುಂಬದ ಜೊತೆಗೆ ವೈಮನಸ್ಯ ಹೊಂದಿದ್ದರು. ರೇವಣ್ಣರ ಕುಟುಂಬ ತಮ್ಮ ಭೂಮಿಯನ್ನು ಕಿತ್ತುಕೊಂಡು ಟಾರ್ಚರ್ ಕೊಟ್ಟಿದೆ ಅಂತಾ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಆನಂತರ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದರು. ಇದೇ ಹೊತ್ತಿನಲ್ಲಿ ರೇವಣ್ಣರ ಕುಟುಂಬ ಕೋರ್ಟ್ನಿಂದ ವಿಡಿಯೋ ಹರಿದಾಡದಂತೆ ಸ್ಟೇ ತಂದಿತ್ತು. ಈ ಎಲ್ಲಾ ವಿಚಾರ ಹಂಚಿಕೊಂಡಿರುವ ಕಾರ್ತಿಕ್ ಇದೀಗ ಎಸ್ಐಟಿ ಮುಂದೆ ಹೋಗಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಇದನ್ನೂ ನೋಡಿ: ನೇಹಾ ಹತ್ಯೆ ಪ್ರಕರಣ : ಕಲಿಯಬೇಕಾದ ಪಾಠ- ನಿಲ್ಲಿಸಬೇಕು ಧರ್ಮದ ಹೆಸರಿನ ಆಟ Janashakthi Media