ಬೆಂಗಳೂರು :ಇಂದು ಮತದಾನಕ್ಕೆಂದು ಬಂದಿದ್ದ ಮತದಾರರೊಬ್ಬರಿಗೆ ಹೃದಯಾಘಾತವಾಗಿದ್ದು,ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ವೈದ್ಯರು ಮಹಿಳೆಯ ಪ್ರಾಣ ಉಳಿಸಿದ ಘಟನೆ ನಡೆದಿದೆ. ಹೃದಯಾಘಾತ
ಜೆಪಿ ನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿ ಈ ಘಟನೆ ನಡೆದಿದ್ದು, ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ಸ್ಥಳದಲ್ಲಿ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಹೃದಯಾಘಾತ
ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಮತ ಹಾಕಲು ಜೆಪಿ ನಗರದ ಮತಗಟ್ಟೆಗೆ ತೆರಳಿದ್ದರು. ಸರತಿ ಸಾಲಿನಲ್ಲಿ ನಿಂತಾಗ ಸುಮಾರು 50 ವರ್ಷದ ಮಹಿಳೆ ನೀರು ಕುಡಿಯಲು ತೆರಳಿದಾಗ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಡಾಕ್ಟರ್ ಗಣೇಶ್ ಕೂಡಲೇ ಹೋಗಿ ಚಿಕಿತ್ಸೆ ನೀಡಿದ್ದಾರೆ.
ಪತ್ರಿಕೆಯೊಂದರ ಜೊತೆ ಮಾತನಾಡಿದ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್, ನಾನು ಮಹಿಳೆಯ ಪಲ್ಸ್ ಚೆಕ್ ಮಾಡಿದಾಗ ತುಂಬಾ ಇಳಿಕೆಯಾಗಿತ್ತು. ಮಹಿಳೆ ಕಣ್ಣುಗಳನ್ನು ಮುಚ್ಚುತ್ತಿದ್ದರು.
ಮಹಿಳೆಯ ದೇಹ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆಕೆಯ ಉಸಿರಾಟದಲ್ಲಿ ಏರಳಿತ ಕಾಣಿಸುತ್ತಿತ್ತು. ನಾನು ಕೂಡಲೇ ಸಿಪಿಆರ್ (Cardiopulmonary Resuscitation-CPR) ಚಿಕಿತ್ಸೆ ನೀಡಿದಾಗ ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಹೃದಯಾಘಾತ
ಈ ವೇಳೆ ಅಲ್ಲಿದ್ದ ಚುನಾವಣಾಧಿಕಾರಿಗಳು ಮಹಿಳೆಗೆ ಜ್ಯೂಸ್ ವಿತರಿಸಿದರು. ಐದು ನಿಮಿಷದಲ್ಲಿಯೇ ಸ್ಥಳಕ್ಕೆ ಬಂದ ಅಂಬುಲೆನ್ಸ್ನಲ್ಲಿ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಯ್ತು.
ಒಂದು ವೇಳೆ ಸ್ಪಲ್ಪ ತಡವಾಗಿದ್ರೂ ಮಹಿಳೆಯ ಜೀವಕ್ಕೆ ಅಪಾಯ ಇತ್ತು. ಆದ್ರೆ ಮತಗಟ್ಟೆಗೂ ಬಂದರೂ ಮಹಿಳೆಗೆ ಮತ ಹಾಕಲು ಸಾಧ್ಯವಾಗಿಲಿಲ್ಲ.
ಇದನ್ನು ಓದಿ : ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸ ನನಗಿದೆ: ಡಿ.ಕೆ.ಸುರೇಶ್
ಮತದಾರರ ಹೆಸರು ನಾಪತ್ತೆ
ಗಾಂಧಿನಗರ ವಿಧಾನಸಭಾಕ್ಷೇತ್ರದಲ್ಲಿ ಬೂತ್ ನಂ -111 ರಲ್ಲಿ ಮತದಾರರ ಹೆಸರು ಡಿಲೀಟ್ ಆಗಿದೆ ಅನ್ನೋ ಆರೋಪ ಕೇಳಿ ಬಂದಿದಎ. ಬರೊಬ್ಬರಿ 50 ಜನರ ಹೆಸರು ಡೀಲಿಟ್ ಮಾಡಲಾಗಿದೆ ಎನ್ನಲಾಗ್ತಿದೆ. ಅನ್ಯಾಯ ಅಕ್ರಮ ಮಾಡಲಾಗ್ತಿದೆ ಅಂತಾ ಮತದಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಬದುಕಿರೋವಾಗ ನಮ್ಮ ಹೆಸರನ್ನ ಡೀಲಿಟ್ ಮಾಡಲಾಗಿದೆ ಅಂತಿದ್ದಾರೆ ಮತದಾರರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಕಾಂಗ್ರೆಸ್ ವೋಟ್ ಇವೆ. ಬಿಜೆಪಿಗೆ ವೋಟ್ ಹಾಕೋ ಹೆಸರುಗಳನ್ನು ಡೀಲಿಟ್ ಮಾಡಲಾಗಿದೆ ಅಂತಾ ಆರೋಪ ಮಾಡಲಾಗಿದೆ.
ಮತಗಟ್ಟೆ ಎದುರೇ ಮತದಾರರಿಗೆ ಹಣ ಹಂಚಿಕೆ!
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣ ಮತಗಟ್ಟೆ ಎದುರೇ ಮತದಾರರಿಗೆ ಹಣ ಹಂಚಿಕೆ ಮಾಡಲಾಗ್ತಿದೆ ಎಂಬ ಕೆಲ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುತ್ತಿದೆ.
ರಾಜ್ಯದ 14 ಕ್ಷೇತ್ರಗಳಿಗೆ ಮತದಾನ
ಇಂದು ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
1ಗಂಟೆ ಮತದಾನ ವಿಳಂಬ : ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಪೂರ್ಣಪ್ರಜ್ಞ ಲೇಔಟ್‌ನ ಮತಗಟ್ಟೆ ಸಮಖ್ಯೆ 62ರಲ್ಲಿ ಮತದಾನ ಯಂತ್ರದಲ್ಲಿ ತಾಂತ್ರಿಕದೋಷ ಕಂಡುಬಂದಿದೆ. 1 ಗಂಟೆಗಳ ಕಾಲ ಜನ ಕಾಯಬೇಕಾದ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಚುನಾವಣಾ ಸಿಬ್ಬಂದಿ ಮತಯಂತ್ರವನ್ನು ಸರಿ ಮಾಡಿದ ನಂತರ ಮತದಾನ ಕ್ರಿಯೆ ಆರಂಭವಾಯಿತು ಎಂದು ವರದಿಯಾಗಿದೆ.
ಇದನ್ನು ನೋಡಿ : ಕೇಳಿರಣ್ಣ, ಕೇಳಿರಕ್ಕ ಕಥೆಯ ಹೇಳುವೆ, ಸುಳ್ಳಿನ ಸರಮಾಲೆಯ ವ್ಯಥೆಯ ಹೇಳುವೆ – ಹಾಡಿದವರು : ಲವಿತ್ರ ಮತ್ತು ಮೇಘ