ಪ್ರತಿಸ್ಪರ್ಧಿಗಳ ನಾಮಪತ್ರ ವಾಪಸಾತಿಯಿಂದ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಿಜೆಪಿಯ ದಲಾಲ್‌

ನವದೆಹಲಿ: ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಏಪ್ರಿಲ್‌ 22 ರ ಸೋಮವಾರದಂದು ಸೂರತ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿ ತನ್ನ ಉಮ್ಮೇದುವಾರಿಕೆಯನ್ನು ಹಿಂಪಡೆದ ಒಂದು ದಿನದ ಬಳಿಕ ಕಣದಲ್ಲಿ ಉಳಿದ ಎಂಟು ಅಭ್ಯರ್ಥಿಗಳೂ ಒಬ್ಬೊಬ್ಬರಾಗಿ ತಮ್ಮ ನಾಮಪತ್ರವನ್ನು ಹಿಂದೆ ಪಡೆದಿದ್ದರಿಂದ ಕೊನೆಯದಾಗಿ ಉಳಿದ ಬಿಜೆಪಿಯ ಮುಖೇಶ್‌ ದಲಾಲ್‌ ಅವರನ್ನು ಲೋಕಸಭಾ ಸ್ಥಾನಕ್ಕೆ ಅವಿರೋಧವಾಗಿ ಸಂಸದರನ್ನಾಗಿ ಆಯ್ಕೆ ಮಾಡಿ ಘೋಷಿಸಲಾಗಿದೆ. ದಲಾಲ್‌

ಎಂಟು ಜನ ನಾಮಪತ್ರ ಹಿಂಪಡೆದ ಅಭ್ಯರ್ಥಿಗಳಲ್ಲಿ ನಾಲ್ವರು ಪಕ್ಷೇತರರಾಗಿದ್ದರೆ, ಇನ್ನುಳಿದವರಲ್ಲಿ ಮೂವರು ಹೆಸರುವಾಸಿಯಾಗದ ಪಕ್ಷಗಳಿಗೆ ಸೇರಿದ್ದು, ಒಬ್ಬರು ಬಿಎಸ್‌ಪಿ ಅಭ್ಯರ್ಥಿಯಾಗಿದ್ದರು. ದಲಾಲ್‌

ಸೂರತ್ ನಗರ ಬಿಎಸ್‌ಪಿ ಅಧ್ಯಕ್ಷ ಸತೀಶ್ ಸೋನಾವಾನೆ, ತಮ್ಮ ಅಭ್ಯರ್ಥಿ ಪ್ಯಾರೇಲಾಲ್ ಭಾರ್ತಿ ನಾಮಪತ್ರ ಹಿಂಪಡೆಯುವಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದರು.

ಹೀಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಜಯಗಳಿಸುವುದು ಅಪರೂಪ, ಚುನಾವಣಾ ಆಯೋಗದ ವೆಬ್‌ಸೈಟ್‌ನ ಪ್ರಕಾರ ಸ್ವಾತಂತ್ರ್ಯದ ನಂತರ (ಉಪಚುನಾವಣೆಗಳನ್ನು ಬಿಟ್ಟು) ಇದಕ್ಕೂ ಮೊದಲು ಕೇವಲ 23 ಇಂತಹ ನಿದರ್ಶನಗಳಿವೆ. ಈ ಪೈಕಿ 1951-1952 ಮತ್ತು 1957ರಲ್ಲಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದ್ದಾಗ ಮೊದಲೆರಡು ಚುನಾವಣೆಗಳಲ್ಲಿ 10 ಮಂದಿ ಗೆದ್ದಿದ್ದರು. ದಲಾಲ್ ಅವಿರೋಧವಾಗಿ ಗೆದ್ದ ಮೊದಲ ಬಿಜೆಪಿ ನಾಯಕ.

ಈ ಕುರಿತು ತಮ್ಮ ಟ್ವಿಟ್ಟರ್‌ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ನಾಯಕ ರಾಹುಲ್‌ ಗಾಂಧಿ, “ಸರ್ವಾಧಿಕಾರಿಯ ನಿಜವಾದ ಮುಖ ‘ಸೂರತ್ (ಮುಖ)’ ಈ ಸೂರತ್‌ ಅಂದರೆ ಮುಖ, ದೇಶದ ಮುಂದೆ ಬಂದಿದೆ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಜನರು ತಮ್ಮ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು ಮತ್ತೊಂದು ಹೆಜ್ಜೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಲಾಲ್‌

ಸೂರತ್‌ ಕ್ಷೇತ್ರಕ್ಕೆ ಒಟ್ಟು 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಹಿಂದೆ ನಾಲ್ವರ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷದ ಬದಲಿ ಅರ್ಜಿಗಳನ್ನು ಸಹ ತಿರಸ್ಕರಿಸಿದ ನಂತರ, ಅವರ ಪ್ರತಿಪಾದಕರ “ಸಹಿ ಪರಿಶೀಲನೆಯಲ್ಲಿ ವ್ಯತ್ಯಾಸ” ಕ್ಕಾಗಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ವಿಶೇಷ ವಿಚಾರಣೆಯಲ್ಲಿ, ಒಂಬತ್ತು ಮಂದಿ ಕಣದಲ್ಲಿ ಉಳಿದಿದ್ದರು. .

ಬಿಜೆಪಿಯ ದಲಾಲ್ ಹೊರತುಪಡಿಸಿ ಎಂಟು ಅಭ್ಯರ್ಥಿಗಳು ತಾವು ಸ್ಪರ್ಧಿಸಲು ಬಯಸುವುದಿಲ್ಲ ಎಂದು ಚುನಾವಣಾಧಿಕಾರಿಗೆ ಲಿಖಿತವಾಗಿ ನೀಡಿದ್ದರು. ಸೂರತ್ ಜಿಲ್ಲಾ ಚುನಾವಣಾ ಅಧಿಕಾರಿ (DEO) ಮತ್ತು ಜಿಲ್ಲಾಧಿಕಾರಿ ಸೌರಭ್ ಪರ್ಘಿ ನಂತರ ದಲಾಲ್ ಅವರನ್ನು ವಿಜೇತ ಎಂದು ಘೋಷಿಸಿದರು. ಇದಾದ ಬೆನ್ನಲ್ಲೇ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್, “ಸೂರತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಕಮಲವನ್ನು ಅರ್ಪಿಸಿದೆ” ಎಂದು ಪೋಸ್ಟ್ ಮಾಡಿದ್ದಾರೆ.

ಪ್ಯಾರೇಲಾಲ್ ಭಾರ್ತಿ ತಮ್ಮ ವಾಪಸಾತಿ ಪತ್ರವನ್ನು ಡಿಇಒಗೆ ಸಲ್ಲಿಸಿದ ನಂತರವೇ ನಮ್ಮ ಪಕ್ಷಕ್ಕೆ ತಿಳಿಯಿತು ಎಂದು ಸೂರತ್ ನಗರ ಬಿಎಸ್‌ಪಿ ಅಧ್ಯಕ್ಷ ಸತೀಶ್ ಸೋನಾವಾನೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. “ಅಭ್ಯರ್ಥಿಗಳು ತಮ್ಮ ಫಾರ್ಮ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲು ಬಿಜೆಪಿ ಎಲ್ಲಾ ವಿಧಾನಗಳನ್ನು ಬಳಸಿತು ಮತ್ತು ಯಶಸ್ವಿಯಾಗಿದೆ.” ಎಂದು ಸಹ ಸೋನವಾನೆ ಹೇಳಿದ್ದಾರೆ. ದಲಾಲ್‌

ಇದನ್ನು ಓದಿ : ದೇಶದ ಹೃದಯ ʼಸಂವಿಧಾನʼ ಕ್ಕೆ ಕೈ ಹಾಕಿರುವ ಬಿಜೆಪಿಯನ್ನು ಸೋಲಿಸಿ – ಬೃಂದಾ ಕಾರಟ್

ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾದ ನಂತರ ಬಿಎಸ್‌ಪಿಯ ತಮ್ಮ ಅಭ್ಯರ್ಥಿಯಾಗಿದ್ದ ಪ್ಯಾರೇಲಾಲ್ ಭಾರ್ತಿ ವಡೋದರಾಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಭಾರ್ತಿಯು ಸಾಮಾನ್ಯವಾಗಿ ಬಳಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಹೊಸ ಮೊಬೈಲ್ ಸಂಖ್ಯೆಯನ್ನು ಅವರ ಮನೆಯವರಿಗೆ ಬಿಜೆಪಿಯಿಂದ ನೀಡಲಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ ನಾಯಕನ ಉಮೇದುವಾರಿಕೆ ತಿರಸ್ಕೃತಗೊಂಡ ನಂತರ ಬಿಎಸ್‌ಪಿ ಆಮ್ ಆದ್ಮಿ ಪಕ್ಷದ ಬೆಂಬಲವನ್ನು ಪಡೆದುಕೊಂಡು, ಎಎಪಿ ಗುಜರಾತ್‌ನಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಎರಡು ಸ್ಥಾನಗಳಲ್ಲಿ ಹೋರಾಡುತ್ತಿದೆ ಎಂದು ಸೋನಾವಾನೆ ಹೇಳಿದ್ದಾರೆ. ಸೋಮವಾರ ಬೆಳಿಗಿನ ಜಾವ 4.30 ಕ್ಕೆ ಪ್ಯಾರೇಲಾಲ್ ಭಾರ್ತಿ ಜೊತೆ ಕೊನೆಯದಾಗಿ ಮಾತನಾಡಿದ್ದು, ವಡೋದರಾದಲ್ಲಿ ಅವರನ್ನು ಇರಿಸಲಾಗಿದ್ದ ಸ್ಥಳದಲ್ಲಿ ಬಹಳಷ್ಟು ಜನರನ್ನು ಕಾವಲಿಡಲಾಗಿದೆ. ಬಳಿಕ ಅವರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಅನುಮಾನಗಳು ಹೆಚ್ಚಾದವು ಎಂದು ಸೋನಾವನೆ ಹೇಳಿದ್ದಾರೆ . “ನಾವು ಎಲ್ಲಾ ಕಡೆಯಲ್ಲಿಯೂ ಅವರನ್ನು ಹುಡುಕಿದ್ದೇವೆ. , ಪ್ಯಾರೇಲಾಲ್ ರನ್ನು ಸೂರತ್ ಚುನಾವಣಾಧಿಕಾರಿಯ ಮುಂದೆ ಹಾಜರುಪಡಿಸಿ, ಅವರು ಸ್ಪರ್ಧಿಸಲು ಬಯಸುತ್ತಿಲ್ಲ. ಅಲ್ಲದೇ ಯಾವುದೇ ಒತ್ತಡಕ್ಕೆ ಅವರು ಒಳಗಾಗಿಲ್ಲ ಎಂದು ಅರ್ಜಿಯನ್ನು ನೀಡಿದ್ದಾರೆ ಎಂದು ನಮಗೆ ತಿಳಿದುಬಂದಿದೆ.
ಬಿಜೆಪಿಯು ಮೂರು ಬಾರಿ ಸಂಸದರಾಗಿದ್ದ ದರ್ಶನಾ ಜರ್ದೋಶ್ ಅವರ ಸ್ಥಾನಕ್ಕೆ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರಾಗಿದ್ದ 62 ವರ್ಷದ ದಲಾಲ್ ಅವರನ್ನು ಸೂರತ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು.

ಒಬಿಸಿ ಮೋಧ್ವನಿಕ್ ಸಮುದಾಯಕ್ಕೆ ಸೇರಿದ ದಲಾಲ್, ಸೂರತ್ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅಕಳೆದ 20 ವರ್ಷಗಳಿಂದ ಸೂರತ್ ಪೀಪಲ್ಸ್ ಕೋ ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರೂ ಆಗಿ ಸೇವೆ ಸಲ್ಲಿಸುತಿದ್ದಾರೆ.
ದಲಾಲ್‌ರ ಚುನಾವಣಾ ಏಜೆಂಟ್ ದಿನೇಶ್ ಜೋಧಾನಿ ಅವರು ಕುಂಭಾಣಿ, ನಾಮಪತ್ರಕ್ಕೆ ಆಕ್ಷೇಪಣೆಯನ್ನು ಎತ್ತಿದ್ದರು, ಅವರ ಪ್ರತಿಪಾದಕರ ಸಹಿಗಳು ನಕಲಿ ಎಂದು ಆರೋಪಿಸಿ, ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ, ಏಪ್ರಿಲ್ 19 ರಂದು, , ಇದರ ವಿರುದ್ಧ ಡಿಇಒಗೆ ಕಾಂಗ್ರೆಸ್ ಕಾನೂನು ತಂಡವು ಭಾನುವಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಯಿತು.
ಬಿಎಸ್‌ಪಿಯ ಭಾರ್ತಿ ಹೊರತಾಗಿ, ಚುನಾವಣಾ ರೇಸ್‌ನಿಂದ ಹಿಂದೆ ಸರಿದವರು ಶೋಬ್ ಶೇಖ್ (ಲಾಗ್ ಪಾರ್ಟಿ), ಅಬ್ದುಲ್ ಹಮೀದ್ ಖಾನ್ (ಸರ್ದಾರ್ ವಲ್ಲಭಭಾಯಿ ಪಟೇಲ್ ಪಾರ್ಟಿ), ಜಯೇಶ್ ಮೇವಾಡ (ಗ್ಲೋಬಲ್ ರಿಪಬ್ಲಿಕನ್ ಪಾರ್ಟಿ), ಮತ್ತು ಸ್ವತಂತ್ರರಾದ ಭಾರತ್ ಪ್ರಜಾಪತಿ, ಅಜಿತ್ ಉಮತ್, ಕಿಶೋರ್ ದಯಾನಿ ಮತ್ತು ಬಾರಯ್ಯ ರಮೇಶ್‌ ಹಿಂದೆ ಸರಿದಿದ್ದಾರೆ.
ಎಂಟು ಮಂದಿ ಕಚೇರಿಗೆ ಬಂದು ಹಿಂತೆಗೆದುಕೊಳ್ಳುವ ಉದ್ದೇಶವನ್ನು ಹೇಳಿರುವ ಡಿಇಒ ಪಾರ್ಘಿ, “ನಾವು ಅವರ ವಿಡೀಯೊ ಹೇಳಿಕೆಗಳು ಮತ್ತು ಅವರ ಅರ್ಜಿಗಳನ್ನು ಲಿಖಿತವಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿ ಸೂರತ್ ಅಭ್ಯರ್ಥಿ ಮುಖೇಶ್ ದಲಾಲ್ ಮಾತ್ರ ಕಣದಲ್ಲಿ ಉಳಿದಿದ್ದಾರೆ, ಆದ್ದರಿಂದ ನಿಯಮಗಳ ಪ್ರಕಾರ, ನಾವು ಅವರನ್ನು ಅವಿರೋಧ ವಿಜೇತ ಎಂದು ಘೋಷಿಸಿದ್ದೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.

” 1984 ರಿಂದ ಸತತವಾಗಿ ಗೆದ್ದಿದ್ದರೂ ಸೂರತ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು “ಮ್ಯಾಚ್ ಫಿಕ್ಸ್” ಮಾಡಿದೆ ಎಂದು ದೂರಿರುವ ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವಿಟ್ಟರ್‌ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿ ಸೂರತ್ ಜಿಲ್ಲಾ ಚುನಾವಣಾಧಿಕಾರಿ ಸೂರತ್ ಲೋಕಸಭೆಗೆ @INCindia ದ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾರೆ, ‘ಮೂರು ಪ್ರತಿಪಾದಕರ ಸಹಿಗಳ ಪರಿಶೀಲನೆಯಲ್ಲಿನ ವ್ಯತ್ಯಾಸಗಳಿಗಾಗಿ’ ನೀಲೇಶ್ ಕುಂಭಾನಿ ಅವರ ನಾಮನಿರ್ದೇಶನವನ್ನು ತಿರಸ್ಕರಿಸಿದ್ದಾರೆ . ಇದೇ ಆಧಾರದ ಮೇಲೆ, ಸೂರತ್‌ನಿಂದ INC ಯ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮನಿರ್ದೇಶನವನ್ನು ಸಹ ಅಧಿಕಾರಿಗಳು ತಿರಸ್ಕರಿಸಿದ್ದರು. ಬಳಿಕ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಆ ಕ್ಷಣಕ್ಕೆ ಅಭ್ಯರ್ಥಿಗಾಗಿ ಪರದಾಡುವಂತಾಯಿತು. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಮೇ 7, 2024 ರಂದು ಮತದಾನಕ್ಕೆ ಸುಮಾರು ಎರಡು ವಾರಗಳ ಮೊದಲು ಬಿಜೆಪಿ ಅಭ್ಯರ್ಥಿ ‘ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ವಿವರಿಸಿದ್ದಾರೆ.ದಲಾಲ್‌

ಚುನಾವಣಾ ಆಯೋಗ ಭೇಟಿಗೆ ಕಾಂಗ್ರೆಸ್‌ ಪಕ್ಷದ ನಿಯೋಗದ ನೇತೃತ್ವ ವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಸುದ್ದಿಗಾರರೊಂದಿಗೆ ಮಾತನಾಡಿ, “ಜೇಮ್ಸ್ ಬಾಂಡ್ ಭಾಷೆಯಲ್ಲಿ, ಹೇಳಬೇಕಾದರೆ ಮೊದಲ ಬಾರಿಗೆ ಆಕಸ್ಮಿಕ, ಎರಡನೇ ಬಾರಿ ಕಾಕತಾಳೀಯ ಮತ್ತು ಮೂರನೇ ಬಾರಿ ಶತ್ರು ಕ್ರಿಯೆ. ಸೂರತ್‌ನಲ್ಲಿ, ನಾಲ್ವರು ಪ್ರತಿಪಾದಕರಿಂದ ನಾಮನಿರ್ದೇಶನಗೊಂಡ ಕಾಂಗ್ರೆಸ್ ಅಭ್ಯರ್ಥಿಗೆ ಇದ್ದಕ್ಕಿದ್ದಂತೆ ನಾಲ್ವರೂ ಎದ್ದುನಿಂತು ಅವರ ಸಹಿಯನ್ನು ನಿರಾಕರಿಸುವುದು ಎಂದರೆ ಇದು ಕಾಕತಾಳೀಯವಲ್ಲ. ಹಲವು ಗಂಟೆಗಳ ಕಾಲ ನಮ್ಮ ಅಭ್ಯರ್ಥಿ ನಾಪತ್ತೆಯಾಗಿದ್ದರು. ಬಳಿಕ ಅವರು ಕಾಣಿಸಿಕೊಳ್ಳುವ ಹೊತ್ತಿಗೆ, ಇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದರು.

“ನೀವು ಈ ದೇಶದಲ್ಲಿ ಚುನಾವಣೆಗಳನ್ನು ನಡೆಸಲು ಬಯಸಿದ್ದೇ ಆದಲ್ಲಿ ಇದೆಲ್ಲವನ್ನು ಬಿಜೆಪಿ ಹಾಗೂ ಚುನಾವಣಾ ಆಯೋಗ ಏಕೆ ನಡೆಸಬೇಕಿತು? ಸೂರತ್‌ ಅನ್ನು ಬಿಜೆಪಿ ಈ ರೀತಿ ವಾಮಮಾರ್ಗದಲ್ಲಿ ವಶಪಡಿಸಲೋಕೊಳ್ಳಬೇಕು ಎಂದಿದ್ದರೆ ಚುನಾವಣೆ ಯಾಕಾಗಬೇಕಿತ್ತು? ಎಂದು ಪ್ರಶ್ನಿಸಿದ ಸಿಂಘ್ವಿ, ಇದು ಚುನಾವಣೆಯ ನಿಯಮದ ಉಲ್ಲಂಘನೆ ಪ್ರಕರಣವಾಗಿದೆ.” ಎಂದು ಬೇಸರ ವ್ಯಕ್ತಪಡಿಸಿದರು.ದಲಾಲ್‌

ಇದನ್ನು ನೋಡಿ : ನರೇಂದ್ರ ಮೋದಿ ಹೆಸರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಪ್ರಚಾರ ಮಾಡಲು ಸಾಧ್ಯವಿಲ್ಲವೆ? Janashakthi Media

Donate Janashakthi Media

Leave a Reply

Your email address will not be published. Required fields are marked *