ಬ್ಯಾಡಗಿ: ಸಣ್ಣ ಪಟ್ಟಣ ಬ್ಯಾಡಗಿಯನ್ನು ವಿಶ್ವ ವಿಖ್ಯಾತ ಮಾಡಿರುವುದು ಇಲ್ಲಿನ ವರ್ತಕರಿಗೆ ಸಲ್ಲಿಸುತ್ತದೆ. ಬ್ಯಾಡಗಿ ವ್ಯಾಪಾರಸ್ಥರ ಸಂಘದಲ್ಲಿ ಮಾತನಾಡುವುದು ಗೌರವದ ಅವಕಾಶ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ವರ್ತಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ಯಾಡಗಿಯಲ್ಲಿ ನಿಮ್ಮ ಹಿರಿಯರು ವ್ಯಾಪಾರ ಆರಂಭ ಮಾಡಿ ರೈತರು ಮತ್ತು ಕೊಳ್ಳುವವರ ನಡುವೆ ಉತ್ತಮ ಸಂಬಂಧ ಬೆಳೆಸುವಂತೆ ಮಾಡಿದ್ದಾರೆ. ಇಷ್ಟು ಸಣ್ಣ ಪಟ್ಟಣವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಇಲ್ಲಿನ ವರ್ತಕರು ಎಂದು ಹೇಳಿದರು.
ಮಧ್ಯ ಪ್ರಾಚ್ಯ ದೇಶಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ಎಂದರೆ ಪ್ರಸಿದ್ದವಾಗಿದೆ. ಸಾಕಷ್ಟು ಉತ್ಪನ್ನ ಇಲ್ಲಿ ಅವಕ ಮತ್ತು ಮಾರಾಟವಾಗುತ್ತದೆ. ಇಲ್ಲಿನ ವ್ಯಾಪಾರಸ್ತರ ದುಡಿಮೆ ಹೆಚ್ಚಾಗಿದೆ. ಮಾರುಕಟ್ಟೆ ಪ್ರಾಂಗಣ ಸಣ್ಣದಾಗಿದೆ. ಈಗಾಗಲೇ ಇಲ್ಲಿ ಅತಿ ಹೆಚ್ಚು ಕೋಲ್ಡ್ ಸ್ಟೋರೆಜ್ ಗಳು ಬಂದಿವೆ. ಕೋಲ್ಡ್ ಸ್ಟೋರೆಜ್ ವಿಸ್ತರಣೆಯಾಗಬೇಕು. ಮೆಣಸಿನಕಾಯಿಯ ಇತರ ಉಪಯೋಗಗಳ ಬಗ್ಗೆ ಅಧ್ಯಯನ ನಡೆಸಲು ಒಂದು ಸಂಶೋಧನಾ ಕೇಂದ್ರದ ಅಗತ್ಯವಿದ್ದು, ಸಂಶೋಧನಾ ಕೇಂದ್ರ ಆರಂಭಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ನಗರಸಭೆ ಉಪಾಧ್ಯಕ್ಷನ ಪುತ್ರ ಮತ್ತು ಸಂಬಂಧಿಕರ ಹತ್ಯೆ
ಬ್ಯಾಡಗಿ ಪುರಸಭೆಗೆ ಉತ್ತಮ ಪುರಸಭೆ ಎಂಬ ಪ್ರಶಸ್ತಿ ಬಂದಿದೆ. ಹಾವೇರಿ ಜಿಲ್ಲೆಯಲ್ಲಿ ನೀರಾವರಿ ಮತ್ತು ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಇದೆ. ಬ್ಯಾಡಗಿಯಲ್ಲಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಮಾಡಲಾಗಿದೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ನೀರಾವರಿ ಯೋಜನೆ ಕೈಗೊಳ್ಳುವ ಗುರಿ ಇಟ್ಟುಕೊಂಡಿದ್ದೇನೆ ಎಂದರು.
ನಾನು ಅನೇಕ ವಿದೇಶಗಳಿಗೆ ಸುತ್ತಾಟ ಮಾಡಿದ್ದೇನೆ. ಬ್ಯಾಡಗಿ ಮಾರುಕಟ್ಟೆಯ ವರ್ತಕರು ಮಾತ್ರ ಯಾವತ್ತೂ ನಿಮ್ಮ ಸಂಬಂಧಗಳನ್ನು ಕೆಡಿಸಿಕೊಂಡಿಲ್ಲ. ವಾರ್ಷಿಕ ಮೂರು ಸಾವಿರ ಕೋಟಿ ವಹಿವಾಟು ನಡೆಸಿದ್ದು ಸರ್ಕಾರಕ್ಕೆ 17 ಕೋಟಿ ಸೆಸ್ ಕಟ್ಟುವ ಮೂಲಕ ಸರ್ಕಾರಕ್ಕೂ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯ ಎಂದರು.
ನಾನು ಜಿಎಸ್ ಟಿ ಕೌನ್ಸಿಲ್ ನ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಿಮ್ಮ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ. ಹೆಚ್ಚಿನ ಮತ ನೀಡಿ ಆರಿಸಿ ಕಳುಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುರೇಶ ಗೌಡ ಪಾಟೀಲ್, ವಿರೂಪಾಕ್ಷ ಬಳ್ಳಾರಿ, ಹಿರಿಯರಾದ ಮುರಿಗೆಪ್ಪ ಶೆಟ್ಡರ್, ಬಸವರಾಜ ಛತ್ರದ, ಬಾಳಣ್ಣ ಪಾಟೀಲ್ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ನೇಹಾ ಹಿರೇಮಠ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಇದನ್ನೂ ನೋಡಿ: ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ – ಅಜಂ ಶಾಹಿದ್