ನವದೆಹಲಿ: ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ರಾತ್ರಿ ಅಪಘಾತ ಸಂಭವಿಸಿದ್ದು, ನೌಕರರು ತುಂಬಿದ್ದ ಬಸ್ವೊಂದು 50 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 14 ಮಂದಿ ಸಾವನ್ನಪ್ಪಿದ್ದರೆ. 15ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಂದಕಕ್ಕೆ ಉರುಳಿದ ಬಸ್
ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಮ್ಹಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಪ್ರಿ ಗ್ರಾಮದ ಬಳಿ ಬಸ್ 50 ಅಡಿ ಆಳದ ಮುರ್ರಮ್ (ಕೆಂಪು ಮಣ್ಣು) ಗಣಿಗೆ ಬಿದ್ದ ಪರಿಣಾಮ 14 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 38 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂದಕಕ್ಕೆ ಉರುಳಿದ ಬಸ್
ಕುಮ್ಹಾರಿ ಪ್ರದೇಶದಲ್ಲಿರುವ ಕೇಡಿಯಾ ಡಿಸ್ಟಿಲರೀಸ್ ಬಸ್ನಲ್ಲಿ ಸುಮಾರು 45 ಉದ್ಯೋಗಿಗಳು ಇದ್ದರು ಎಂದು ಅವರು ಹೇಳಿದರು. ಮಂಗಳವಾರ ರಾತ್ರಿ 8.30 ರ ಸುಮಾರಿಗೆ ಬಸ್ ಖಾಪ್ರಿ ಗ್ರಾಮದ ಬಳಿ ತಲುಪಿದಾಗ ನಿಯಂತ್ರಣ ಕಳೆದುಕೊಂಡು ಮುರ್ರಾಮ್ ಗಣಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡವನ್ನು ಸ್ಥಳಕ್ಕೆ ರವಾನಿಸಲಾಯಿತು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳನ್ನು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಬಸ್ ಅನ್ನು ಗಣಿಯಿಂದ ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.ಕಂದಕಕ್ಕೆ ಉರುಳಿದ ಬಸ್
ಇದನ್ನು ಓದಿ : ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಮಾಜಿ ಅಲ್-ಖೈದಾ ಇದ್ದಂತೆ
ಬಂದಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೂ ಕಂದಕದಿಂದ ಬಸ್ ಹೊರ ತೆಗೆದಿಲ್ಲ ಎಂದು ತಿಳಿದು ಬಂದಿದೆ. ಎಸ್ಡಿಆರ್ಎಫ್ನ 55 ರಕ್ಷಣಾ ತಂಡದ ಸಿಬ್ಬಂದಿ ಇಂದು ಬಸ್ ಅನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಬಸ್ ತೆಗೆಯಲು ಹೈ ಪವರ್ ಹೈಡ್ರಾ ಕ್ರೇನ್ ಕರೆಸಲಾಗಿದೆ.ಕಂದಕಕ್ಕೆ ಉರುಳಿದ ಬಸ್
ಗಾಯಗೊಂಡ 10 ಮಂದಿಗೆ ರಾಯ್ಪುರ ಏಮ್ಸ್ನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ 10 ಮಂದಿಯಲ್ಲಿ ಆರು ಮಂದಿ ಮಹಿಳೆಯರು ಹಾಗೂ ನಾಲ್ವರು ಪುರುಷ ರೋಗಿಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ಬಗ್ಗೆ ಛತ್ತೀಸ್ ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ದುಃಖ ವ್ಯಕ್ತಪಡಿಸಿದ್ದಾರೆ. “ದುರ್ಗ್ನ ಕುಮ್ಹಾರಿ ಬಳಿ ಖಾಸಗಿ ಕಂಪನಿಯ ಉದ್ಯೋಗಿಗಳನ್ನು ತುಂಬಿದ ಬಸ್ ಅಪಘಾತದ ಬಗ್ಗೆ ದುರಂತ ಮಾಹಿತಿ ಬಂದಿದೆ. ಅಗಲಿದ ಆತ್ಮಗಳಿಗೆ ಶಾಂತಿ ಮತ್ತು ದುಃಖಿತ ಕುಟುಂಬಗಳಿಗೆ ಶಕ್ತಿ ನೀಡುವಂತೆ ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಗಾಯಗೊಂಡ ಉದ್ಯೋಗಿಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಇವರೆಲ್ಲರೂ ಕೆಡಿಯಾ ಡಿಸ್ಟಿಲರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಅಪಘಾತದ ನಂತರ ಕಂಪನಿಯು ಮೃತರ ಕುಟುಂಬಗಳಿಗೆ 10ಲಕ್ಷ ರೂ. ಒಬ್ಬ ಸದಸ್ಯನಿಗೆ ಉದ್ಯೋಗ ಮತ್ತು ಗಾಯಾಳುಗಳ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದೆ.
ಇದನ್ನು ನೋಡಿ : ಹತ್ತು ವರ್ಷ ಸುಳ್ಳಿಗೆ ಮರುಳಾಗಿದ್ದು ಸಾಕು! ಇನ್ನಾದರೂ ಯೋಚಿಸಿ, ಮತ ಚಲಾಯಿಸಿ – ಜಾಣಗೆರೆ ವೆಂಕಟರಾಮಯ್ಯ