ಯದುವೀರ್‌ ಒಡೆಯರ್‌ಗೆ ಇತಿಹಾಸದ ಪಾಠ ಕಲಿಸಬೇಕಿದೆ

ಬೆಂಗಳೂರು : ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್  ಸಂದರ್ಶನವೊಂದರಲ್ಲಿ ತಮ್ಮ ತಾತ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ನಲ್ಲಿದ್ದರು ಎಂದು ಉಲ್ಲೇಖಿಸಿ, ತಮ್ಮ ರಾಜಕೀಯ ಪಕ್ಷದ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯದುವೀರ್‌ ಸಮರ್ಥನೆಗೆ ಹಿರಿಯ ಚಿಂತಕ ರಹಮತ್ ತರೀಕೆರೆ ಅವರು ದಾಖಲೆ ಸಮೇತ ಪ್ರತಿಕ್ರಿಯೆ ನೀಡುವ ಮೂಲಕ ವಾಸ್ತವ ಇತಿಹಾಸವನ್ನು ಅರಿಯಬೇಕು ಎಂದಿದ್ದಾರೆ. ಯದುವೀರ್‌

ಈ ಕುರಿತು ಸಾಮಾಜಿಕ ಜಾಲತಾಣವಾದ ಫೆಸ್ಬುಕ್‌ನಲ್ಲಿ ಈ ಕೆಳಗಿನಂತೆ ಯದುವೀರ್‌ಗೆ ಇತಿಹಾಸದ ಪಾಠ ಮಾಡಿದ್ದಾರೆ “ಮೈಸೂರು ಕ್ಷೇತ್ರದ ಸಂಸತ್ ಅಭ್ಯರ್ಥಿ ಯದುವೀರರು ಸಂದರ್ಶನವೊಂದರಲ್ಲಿ ತಮ್ಮ ತಾತನವರು ವಿಎಚ್‌ಪಿಯಲ್ಲಿದ್ದರು ಎಂದು ಉಲ್ಲೇಖಿಸಿ, ತಮ್ಮ ರಾಜಕೀಯ ಆಯ್ಕೆಗೆ ಸಮರ್ಥನೆ ಒದಗಿಸಿಕೊಂಡಿದ್ದಾರೆ.

ಮೈಸೂರನ್ನು ರಾಜಕೀಯವಾಗಿ ಪ್ರತಿನಿಧಿಸುವ ಯಾರೇ ಆಗಲಿ, ತಮ್ಮ ಪೂರ್ವಪರಂಪರೆಯನ್ನಾಗಿ ನಿಜವಾಗಿ ಸ್ಮರಿಸಬೇಕಾದುದು ಮತ್ತು ಅನುಸರಿಸಬೇಕಾದುದು, ಜಾತ್ಯತೀತತೆಯ, ಸರ್ವಧರ್ಮ ಸಮಭಾವದ ಮತ್ತು ಸಾಮಾಜಿಕ ನ್ಯಾಯ ಪ್ರಜ್ಞೆಯ ಧೀಮಂತ ನಾಲ್ವಡಿಯವರನ್ನು; ಮೈಸೂರನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಆತ್ಮಶ್ರೀಗಾಗಿ ನಿರಂಕುಶಮತಿ ವಿಶ್ವಮಾನವ ಪ್ರಜ್ಞೆಯ ಸಂದೇಶ ನೀಡಿದ ಕುವೆಂಪು ಅವರನ್ನು; ಮೈಸೂರ ಮಣ್ಣಿನಮಗನಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸರನ್ನು.

ಇದನ್ನೂ ಓದಿ: ʻನಡು ಬಗ್ಗಿಸದ ಎದೆಯ ದನಿʼ ಮಾರ್ಚ್‌ 09ಕ್ಕೆ ಪುಸ್ತಕ ಬಿಡುಗಡೆ

ಇವತ್ತಿಗೂ ದಲಿತ ಸಂಘಟನೆಗಳು ನಾಲ್ವಡಿಯವರ ಪಟವನ್ನು ಅಂಬೇಡ್ಕರ್, ಶಾಹುಮಹಾರಾಜ, ಟಿಪ್ಪುಸುಲ್ತಾನ್, ಫುಲೆ ಅವರ ಪಟಗಳೊಟ್ಟಿಗೆ ತಮ್ಮ ಭಿತ್ತಿಪತ್ರ ಕರಪತ್ರಗಳಲ್ಲಿ ಯಾಕೆ ಹಾಕಿಕೊಳ್ಳುತ್ತವೆ? ನಾಲ್ವಡಿಯವರು ಮಿಲ್ಲರ್ ವರದಿಯನ್ನು ದಿವಾನ ವಿಶ್ವೇಶ್ವರಯ್ಯನವರ ಪ್ರತಿಭಟನೆಯನ್ನು ಲೆಕ್ಕಿಸದೆ ಜಾರಿಗೊಳಿಸಿದವರು. ಅನೇಕರ ವಿರೋಧ ಲೆಕ್ಕಿಸದೆ ಸಹಪಾಠಿ ಮಿರ್ಜಾ ಇಸ್ಮಾಯಿಲರನ್ನು ದಿವಾನರನ್ನಾಗಿ ಮಾಡಿಕೊಂಡಿದ್ದವರು. ಅವರೊಬ್ಬ ಕರ್ನಾಟಕ ಕಟ್ಟುವ ದಾರ್ಶನಿಕ ಆಡಳಿತಗಾರರಾಗಿದ್ದರು. ಅವರು ತಮ್ಮ ಅಂಗರಕ್ಷಕ ಪಡೆಯವರಿಗಾಗಿ ಅರಮನೆಯ ಸಮೀಪದಲ್ಲಿಯೇ ಮಸೀದಿ ಕಟ್ಟಿಸಿ ಮಾಡಿದ ಭಾಷಣ ಗಮನಿಸಬೇಕು. ಮಹಾರಾಜರು ತಮ್ಮ ಸಿಂಹಾಸನಾರೋಹಣದ ಬೆಳ್ಳಿಹಬ್ಬದಲ್ಲಿ ಆಹ್ವಾನಪತ್ರಿಕೆಯನ್ನು ಕನ್ನಡ ಇಂಗ್ಲೀಶು ಉರ್ದು- ಮೂರೂ ಭಾಷೆಗಳಲ್ಲಿ ಸ್ವಹಸ್ತಾಕ್ಷರದಲ್ಲಿ ಬರೆದು ಹಂಚಿದ್ದರು. ಸರ್ವರನ್ನು ಒಳಗೊಳ್ಳುವ ಮುಂಗಾಣ್ಕೆಯ ರಾಜಕಾರಣದ ಪ್ರತೀಕವಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಸೂರು ಸಂಸ್ಥಾನ ಪ್ರತಿಕೂಲವಾಗಿದ್ದರೂ ಗಾಂಧಿಯವರು ಅವರನ್ನು ಶ್ರೇಷ್ಠರಾಜ ಎಂದು ಕರೆದರು.

ನಾಲ್ವಡಿ, ಕುವೆಂಪು, ದೇವರಾಜ ಅರಸರ ಮೌಲ್ಯಗಳನ್ನು ಪ್ರತಿನಿಧಿಸುವ ಹಾದಿ ಬೇರೆಯೇ ಇದೆ ಎಂದು ಎಂದು ಹೇಳುವ ಮೂಲಕ ದಾಖಲೆ ಸಮೇತ ಇತಿಹಾಸದ ನೆನಪಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *