ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನ ವಿಷ್ಣುವಿನ ಅವತಾರ ಎಂದೆಲ್ಲಾ ಪುಂಖಾನುಪುಂಖವಾಗಿ ಬಿಲ್ಡಪ್ ಕೊಡುವ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿಡಿಯೋವೊಂದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಂಗನಾ ರಣಾವತ್ ಇತ್ತೀಚಿಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಎಡವಟ್ಟಿನ ಹೇಳಿಕೆ ನೀಡಿರುವ ಬಗೆಗಿನ ವಿಡೀಯೋ ವೈರಲ್ ಆಗುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಎಂದು ಹೇಳಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿಡಿಯೋ ಈಗ ಟ್ರೋಲ್ ಆಗಿದೆ
ಟ್ರೋಲ್ ಆಗಿರುವ ವಿಡಿಯೋ ಪ್ರಕಾರ,ಕಂಗನಾ ರಾಣಾವತ್‌ಗೆ ಸ್ವತಂತ್ರ ಭಾರತ ದೇಶದ ಮೊದಲ ಪ್ರಧಾನಮಂತ್ರಿ ಯಾರೆಂದರೆ ಅದು “ಸುಭಾಷ್ ಚಂದ್ರ ಬೋಸ್”. ಭಾರತದ ಮೊದಲಪ್ರಧಾನ ಮಂತ್ರಿ ಸುಭಾಷ್ ಚಂದ್ರ ಬೋಸ್ ಎಲ್ಲಿಗೆ ಹೋದರು ?ದೇಶಕ್ಕೆ ಸ್ವತಂತ್ರ ಬಂದಾಗ ಇವರು ಎಲ್ಲಿಗೆ ಹೋದರು? ಎಂದು ಕೇಳುವ ವೈರಲ್ ವಿಡಿಯೋ ಇದಾಗಿದೆ.
Clowns of Supreme Joker’s Party… what a Disgrace..#justasking .. ಮಹಾಪ್ರಭುವಿನ ಆಸ್ಥಾನ ವಿದೂಷಕರು… https://t.co/Q17wagFd0M
— Prakash Raj (@prakashraaj) April 4, 2024
ಕಂಗನಾ ತಪ್ಪಾಗಿ ಹೇಳಿದರೂ, ಆಂಕರ್ ನವಿಕಾ ಕುಮಾರ್ , ಕಂಗನಾ ರಣಾವತ್ ಅವರನ್ನು ಸರಿಪಡಿಸಲು ಪ್ರಯತ್ನಿಸಲಿಲ್ಲ. ಆದರೆ, ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಅಲ್ಲ ಎಂದು ನಾವಿಕ ಕುಮಾರ್ ಹೇಳಿದಾಗ, ಕಂಗನಾ “ಹಾಗಾದರೆ ಅವರೇಕೆ ಪ್ರಧಾನಿಯಾಗಲಿಲ್ಲ?” ಎಂದು ಮರುಪ್ರಶ್ನಿಸಿದ್ದಾರೆ.
ಈ ಟ್ರೋಲ್ ವಿಡಿಯೋವನ್ನು ನಟ, ಪ್ರಗತಿಪರ ಚಿಂತಕ ಪ್ರಕಾಶ್ ರೈ, ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್, ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತ್ತು ಇತರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ಮಹಾಪ್ರಭುವಿನ ಆಸ್ಥಾನ ವಿದೂಷಕರು” ಎಂದು ಪ್ರಕಾಶ್ ರೈ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.