ನವದೆಹಲಿ: ಎಂಟು ವರ್ಷದ ದಲಿತ ಬಾಲಕ ಬಕೆಟ್ ಮುಟ್ಟಿದ ಎಂಬ ಕ್ಷುಲ್ಲಕ ಕಾರಣಕ್ಕೆ ಆತನನ್ನು ಥಳಿಸಿದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಗ್ರಾಮದ ಸರ್ಕಾರಿ ಶಾಲೆಯ 4ನೇ ತರಗತಿ ಓದುತ್ತಿರುವ ಬಾಲಕ ಶಾಲಾ ಆವರಣದಲ್ಲಿರುವ ಕೈಪಂಪ್ಗೆ ನೀರು ಕುಡಿಯಲು ಹೋಗಿದ್ದಾಗ, ಆ ಸಮಯದಲ್ಲಿ ಬಕೆಟ್ನಲ್ಲಿ ‘ಮೇಲ್ವರ್ಗದ’ ವ್ಯಕ್ತಿಯೊಬ್ಬ ನೀರು ತುಂಬುತ್ತಿದ್ದ. ಆಗ ಆ ಬಾಲಕ ಆತನ ಬಕೆಟ್ ಅನ್ನು ಮುಟ್ಟಿದಾಗ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಶಾಲೆಯ ಗಡಿಯೊಳಗೆ ಕೈಪಂಪ್ ಇದ್ದು, ಗ್ರಾಮದ ಇತರರೂ ನೀರು ಸೇದುತ್ತಾರೆ. ನನ್ನ ಮಗ ಬಕೆಟ್ ಅನ್ನು ಪಕ್ಕಕ್ಕೆ ಸರಿಸಿ ಕೈ ಪಂಪ್ನಿಂದ ನೀರು ಕುಡಿಯಲೆಂದು ಬಕೆಟ್ ಅನ್ನು ಮುಟ್ಟಿದ್ದಾನೆ. ಆ ವ್ಯಕ್ತಿ ಮೇಲ್ಜಾತಿಗೆ ಸೇರಿದವನಾಗಿದ್ದು, ನನ್ನ ಮಗನನ್ನು ಬರ್ಬರವಾಗಿ ಹೊಡೆದಿದ್ದಾನೆ. ಶಾಲೆಯ ಬಳಿ ಹೋಗುತ್ತಿದ್ದ ನನ್ನ ಸಂಬಂಧಿಕರಿಗೆ ಮಗನ ಕಿರುಚಾಟ ಕೇಳಿದೆ. ಅವರು ಸ್ಥಳಕ್ಕೆ ಬಂದು ನೋಡಿದಾಗ ನನ್ನ ಮಗ ಅಳುತ್ತಿರುವುದನ್ನು ನೋಡಿದ್ದಾರೆ. ಘಟನೆ ಬಗ್ಗೆ ತಿಳಿದು ಆರೋಪಿಗಳ ಮನೆಗೆ ಹೋಗಿದ್ದೆವು.ಆದರೆ, ಆ ವ್ಯಕ್ತಿ ಕ್ಷಮೆ ಕೇಳಲು ನಿರಾಕರಿಸಿದ್ದಲ್ಲದೇ ನನ್ನ ಕುಟುಂಬದ ವಿರುದ್ಧ ಜಾತಿ ಆಧಾರಿತ ನಿಂದನೆ ಮಾಡಿದ್ದಾನೆ. ಅಲ್ಲದೇ ನನ್ನ ಮಗ ಮತ್ತೆ ಆತನಿಂದ ಹೊಡೆತ ತಿನ್ನಬೇಕಾಗುತ್ತದೆ ಎನ್ನುವ ಕಾರಣಕ್ಕೆ ಶಾಲೆಗೆ ಹೋಗಲು ಹೆದರುತ್ತಿದ್ದಾನೆ ಅಷ್ಟೇ ಅಲ್ಲದೇ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ನನಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಾಲಕನ ತಂದೆ ಮನವಿ ಮಾಡಿದ್ದಾರೆ.
ಇದನ್ನು ಓದಿ : ಬಿಜೆಪಿಯಿಂದ ಮಹಿಳೆಯರ ಅವಮಾನಗೊಳಿಸುವ ಜಾಹೀರಾತು: ಮಹಿಳಾ ಸಂಘಟನೆಗಳ ಆಕ್ರೋಶ
ಕಾರ್ಯನಿರ್ವಹಿಣಾಧಿಕಾರಿ ಸವಾಯಿ ಸಿಂಗ್, ದಲಿತ ದೌರ್ಜನ್ಯ ಕುರಿತು ಎಫ್ಐಆರ್ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿರುವುದಾಗಿಯೂ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು . ಹುಡುಗ ಸುರಕ್ಷಿತವಾಗಿ ಯಾವುದೇ ಸಮಸ್ಯೆಗಳಿಲ್ಲದೇ ಶಾಲೆಗೆ ಹೋಗುತ್ತಾನೆ ಎಂದು ಭರವಸೆ ನೀಡಿದರು.
ಇನ್ನು ಕಳೆದ 2020 ರ ಜುಲೈನಲ್ಲಿ ಜಲೋರ್ ಜಿಲ್ಲೆಯಲ್ಲಿ ಒಂಭತ್ತು ವರ್ಷದ ದಲಿತ ವಿದ್ಯಾರ್ಥಿ ಇಂದ್ರಕುಮಾರ್ ಎನ್ನುವವನು ಶಾಲೆಯಲ್ಲಿ ಮೇಲ್ಜಾತಿಯ ಜನರಿಗೆ ಇಟ್ಟಿದ್ದ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದ ಎನ್ನುವ ಕಾರಣಕ್ಕಾಗಿ ಶಿಕ್ಷಕರು ಥಳಿಸಿದ್ದರು. ಬಳಿಕ ಆಗಸ್ಟ್ 13 ರಂದು ಬಾಲಕ ಅಹಮದಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತನಾದ ಬಗ್ಗೆ ವರದಿಯಾಗಿತ್ತು.
ಇದನ್ನು ನೋಡಿ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹಿನ್ನೆಲೆ ಮತ್ತು ಮತಲೆಕ್ಕಾಚಾರ Janashakthi Media