ಲೋಕಸಭಾ ಚುನಾವಣೆ : ಏಪ್ರಿಲ್ 26, ಮೇ 7 ಸಾರ್ವತ್ರಿಕ ಘೋಷಣೆ

ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮತದಾನ ದಿನವಾದ ಏಪ್ರಿಲ್ 26 ಮತ್ತು ಮೇ 7 ರಂದು ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಸಂಬಂಧಿತ ಸಂಸ್ಥೆಗಳ ನೌಕರರಿಗೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನಿಯಮಗಳು ಮತ್ತು ಕಾನೂನಿನ ಪ್ರಕಾರ ರಜೆಯನ್ನು ಘೋಷಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. 1881ರ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜೆ ಘೋಷಿಸಲಾಗಿದೆ. ತಮ್ಮ ರಾಜ್ಯಗಳಲ್ಲಿ ಮತದಾನದ ದಿನದಂದು ನೌಕರರಿಗೆ ರಜೆ ನೀಡುವಂತೆ ತಮಿಳುನಾಡಿನಂತಹ ಇತರ ರಾಜ್ಯಗಳಿಂದ ವಿನಂತಿಗಳು ಬಂದಿದ್ದವು.

ಇದನ್ನೂ ಓದಿಹದಿನೈದು ವರ್ಷಗಳ ಸಂಸದ, ಈಗ ‘ಮಾಜಿ’, ವರುಣ್ ಗಾಂಧಿ ದೀರ್ಘ ಕಾಯುವಿಕೆ ದೀರ್ಘವಾಗುತ್ತದೆ

ಕಳೆದ ವರ್ಷದ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ, ಮತದಾನದ ದಿನವು ಮೇ 10, 2023, ಬುಧವಾರವಾಗಿತ್ತು. ಮತದಾನದ ಪ್ರಮಾಣ ಕಳಪೆಯಾಗಿತ್ತು. ಕಳೆದ ಬಾರಿಯೂ ರಜೆ ಘೋಷಿಸಲಾಗಿತ್ತು. ಪ್ರಯಾಣಿಸಬೇಡಿ ಅಥವಾ ಹೊರಗೆ ಹೋಗಬೇಡಿ ಎಂದು ನಾವು ಜನರಿಗೆ ಹೇಳಲು ಸಾಧ್ಯವಿಲ್ಲ, ಮತದಾನ ಹಕ್ಕಾಗಿದ್ದು ಅದನ್ನು ಕಳೆದುಕೊಳ್ಳಬಾರದು ಎಂದು ಜನರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಹೇಳಿದರು. ಈ ಬಾರಿ, ಏಪ್ರಿಲ್ 26 ಶುಕ್ರವಾರ, ಮತ್ತು ಮೇ 7 ಮಂಗಳವಾರ ಬರುತ್ತದೆ. ಮತದಾನಕ್ಕೆ ನೀಡಿರುವ ರಜೆ ಕಡ್ಡಾಯವಾಗಿ ಮತದಾನಕ್ಕೆ ಬಳಕೆಯಾಗಬೇಕು ಎಂದರು.

ಇನ್ನು ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪುಜಾಪತಿನಿಧಿ ಕಾಯ್ದೆ 1951 ಕಲಂ 135 ಬಿ ಅಡಿಯಲ್ಲಿನ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲಾಗುವುದು ಎಂದರು.

 

Donate Janashakthi Media

Leave a Reply

Your email address will not be published. Required fields are marked *