ಕೋಲಾರ: ಕೋವಿಡ್ ನಲ್ಲಿ ಮೃತ ಪಟ್ಟವರಿಗೆ ಶಾಂತಿ ಸಿಗಬೇಕಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಅವರನ್ನು ಸೋಲಿಸಿ ಮನೆಗೆ ಕಳುಸಿದಾಗ ಮಾತ್ರ ಸಾಧ್ಯ ಎಂದು ಮಾಲೂರು ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಸಮಾಜ ಸೇವಕ ಹೂಡಿ ವಿಜಯ್ ಕುಮಾರ್ ಮನವಿ ಮಾಡಿದರು.
ಈ ಬಗ್ಗೆ ಮಾಧ್ಯಮ ಗೋಷ್ಠಿ ನಡೆಸಿದ ಅವರು, ಕೋವಿಡ್ ಸಮಯದಲ್ಲಿ ಅವರು ಜನರನ್ನು ಕಾಳಜಿ ಮಾಡುವುದರ ಬದಲು ಲೂಟಿ ಮಾಡಿದ್ದೆ ಜಾಸ್ತಿ, ಅವರ ಲೂಟಿ ಕಾರಣದಿಂದಾಗಿ ಕೊವೀಡ್ ಹೆಚ್ಚಾಯಿತು, ಅನೇಕ ಸಾವು ನೋವುಗಳು ಕಂಡುವು ಹಾಗಾಗಿ ಸತ್ತವರಿಗೆ ಶಾಂತಿ ಸಿಗಬೇಕಾದರೆ ಸುಧಾಕರ್ ಸೋಲಬೇಕು ಎಂದರು.
ರಾಜ್ಯದಲ್ಲಿ 38 ಲಕ್ಷ ಜನ ಸಂಖ್ಯೆ ಹೊಂದಿರುವ ವಹ್ನಿಕುಲ ಸಮುದಾಯದ ರಾಜ್ಯದಲ್ಲಿ ಶಾಸಕರಾಗಲಿ ಎಂ.ಎಲ್.ಸಿ ಯಾಗಿ, ನಿಗಮ ಮಂಡಳಿ ಅಧ್ಯಕ್ಷರು ಸಹ ಇಲ್ಲ ಈ ವಿಚಾರವಾಗಿ ನನ್ನನ್ನು ಶಾಸಕರನ್ನಾಗಿ ಮಾಡಲು ಆಬಿಲಾಷೆಯನ್ನು ಮಾಲೂರಿನ ಜನತೆ ತೋರಿಸಿದ್ದರು ಆ ನಂಬಿಕೆ ಸಹ ಇತ್ತು ಆದರಂತೆ ಬಿಜೆಪಿ ಪಕ್ಷದ ಪರವಾಗಿ ಕಳೆದ 5 ವರ್ಷಗಳಿಂದ ಮಾಲೂರು ತಾಲ್ಲೂಕಿನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದರೂ ನಮ್ಮನ್ನು ಗುರುತಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡಲಿಲ್ಲ ಎಂದು ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದರ ಭಾಗವಾಗಿ ಮಾಲೂರು ಕ್ಷೇತ್ರದ ಜನತೆ ನನ್ನ ಪರವಾಗಿ ನಿಂತಿದ್ದರೂ ನನಗೆ ಕಳೆದ ವಿಧಾನಸಭೆ ಚುನಾವಣೆಗೆ ಟಿಕೇಟ್ ನೀಡುವ ಕೆಲಸವನ್ನು ಮಾಡಲಿಲ್ಲ ಮುಖ್ಯವಾಗಿ ನನಗೆ ಬಿಜೆಪಿಯಿಂದ ಟಿಕೇಟ್ ಕೈ ತಪ್ಪಲು ಮುಖ್ಯ ಕಾರಣರಾದವರು ಡಾ.ಸುಧಾಖರ್ ಅವರೇ ನೇರ ಕಾರಣ ಎಂದು ಆರೋಪಿಸಿದರು.
ಸಾಮಾನ್ಯ ಜನಾಂಗ, ಓಬಿಸಿ, ಹಿಂದುಳಿದ ಜನಾಂಗ ಎಸ್ಸಿ ಎಸ್ಟಿ ಸಮುದಾಯದವರನ್ನು ಕಂಡರೆ ಆ ಮನುಷ್ಯನಿಗೆ ಆಗೋದಿಲ್ಲ ಹತ್ತಿರಕ್ಕೂ ಸಹ ಸೇರಿಸಿಕೊಳ್ಳುವುದಿಲ್ಲ, ಕಳೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್ ಅವರು ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಸೋಲಿಸಲು ಯಾರು ಹುಟ್ಟಿಲ್ಲ ಎಂದು ಬೀಗುತ್ತಿದ್ದರು. ಭ್ರಮೆಯಲ್ಲಿದ್ದ ಆ ಮನಷ್ಯನಿಗೆ, ಚಿಕ್ಕಬಳ್ಳಾಪುರ ಜನತೆ ತಕ್ಕ ಪಾಠ ಕಲಿಸಿ ಉತ್ತರವನ್ನು ಕೊಟ್ಟರು, ದುಡ್ಡು ಮುಖ್ಯವಲ್ಲ, ಜನರ ಪ್ರೀತಿ ವಿಶ್ವಾಸ ಮುಖ್ಯ ತಮ್ಮ ಕಷ್ಟ ಸುಖಕ್ಕೆ ಸ್ಪಂದಿಸುವ ವ್ಯಕ್ತಿ ಬೇಕು ಎಂದು ಯಾರು ಊಹಿಸದ ರೀತಿಯಲ್ಲಿ ಪ್ರದೀಪ್ ಈಶ್ವರ್ ಅವರನ್ನು ಗೆಲ್ಲಿಸಿದ ಸಾಕ್ಷಿ ಕಣ್ಮುಂದೆ ಇದೆ ಎಂದರು.
ಗೋ ಬ್ಯಾಕ್ ಡಾ.ಸುಧಾಕರ್ ಎಂದು ಬಿಜೆಪಿ ಕಾರ್ಯಕರ್ತರು ಕರೆ ನೀಡಿದ್ದರೂ ಬಿಜೆಪಿಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೇಟ್ ನೀಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನತೆ ಯಾವುದೇ ಕಾರಣಕ್ಕೂ ಡಾ.ಸುಧಾಕರ್ ಅವರಿಗೆ ಮತ ಕೊಡಬೇಡಿ ಆ ಮನುಷ್ಯನಿಗೆ ಸಣ್ಣ ಪುಟ್ಟ ಸಮುದಾಯದ ಜನತೆಯನ್ನು ಕಂಡರೆ ಇಷ್ಟಾನೆ ಹಾಗೋದಿಲ್ಲ, ಜೊತೆಗೆ ಸಣ್ಣ ಪುಟ್ಟ ಜನಾಂಗದವರನ್ನು ಬೆಳೆಯುವ ಕೆಲಸ ಮಾಡುತ್ತಿದ್ದರೂ ಅದನ್ನು ಸಹಿಸದೇ ತುಳಿಯುವ ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ಮತ್ತೊಮ್ಮೆ ಡಾ.ಸುಧಾಕರ್ ಅವರನ್ನು ಚಿಕ್ಕಬಳ್ಳಾಪುರದ ಜನತೆ ಸೋಲಿಸಿ ಮನೆಗೆ ಕಳುಹಿಸುವಂತೆ ಮನವಿ ಮಾಡಿದರು.