ನವದೆಹಲಿ : ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಾಟ್ಸಾಪ್ ಬಳಕೆದಾರರಿಗೆ ಮಾಹಿತಿ ಕಳುಹಿಸಿದ ವಿಚಾರಕ್ಕೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
‘ವಿಕಸಿತ್ ಭಾರತ್ ಸಂಪರ್ಕ್’ ಖಾತೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ಪತ್ರವನ್ನು ವಾಟ್ಸಾಪ್ ಬಳಕೆದಾರರಿಗೆ ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆಯೋಗವು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಮುಖೇನ ಸೂಚಿಸಿದೆ.
ಇದನ್ನು ಓದಿ : ಕರ್ನಾಟಕ ಬಿಜೆಪಿ ಶುದ್ಧೀಕರಣ ನನ್ನ ಗುರಿ – ಡಿವಿ ಸದಾನಂದಗೌಡ
ಮಾರ್ಚ್ 15ರಂದು ಚುನಾವಣೆ ಘೋಷಣೆಯಾಗುವ ಮೊದಲು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಸಚಿವಾಲಯ ಮಾರ್ಚ್ 16ರಂದು ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಸಂದೇಶ ತಡವಾಗಿ ರವಾನೆಯಾಗಿದೆ.ಇಂತಹ ಸಂದೇಶಗಳು ನಾಗರಿಕರಿಗೆ ಫೋನ್ ಮೂಲಕ ರವಾನೆಯಾಗುತ್ತಿದೆ ಎಂದು ಹಲವು ದೂರುಗಳನ್ನು ಸ್ವೀಕರಿಸಲಾಗಿದೆ. ಈ ಕುರಿತು ಅನುಸರಣೆ ವರದಿಯನ್ನು ತಕ್ಷಣವೇ ಕಳುಹಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಾರ್ಚ್ 18ರಂದು ತೃಣಮೂಲ ಕಾಂಗ್ರೆಸ್ ಈ ವಿಷಯವನ್ನು ಪ್ರಸ್ತಾಪಿಸಿ ದೂರಿತ್ತು. . ಈ ಬಗ್ಗೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಎಸ್. ಕೃಷ್ಣನ್ ಅವರಿಗೆ ಪತ್ರ ಬರೆದಿದ್ದರು. ಮಾರ್ಚ್ 16ರಂದು ಸಂಜೆ 4:30ರ ನಂತರ ಹೆಚ್ಚಿನ ಜನರು ಈ ರೀತಿ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಸಮಯ ಎಂದು ಗೋಖಲೆ ಹೇಳಿದ್ದರು. ಭಾರತದ ಹೊರಗಿನ ಬಳಕೆದಾರರು ಸಹ ಪತ್ರವನ್ನು ಸ್ವೀಕರಿಸಿದ್ದಾರೆ. ಇದೇ ರೀತಿ ಪತ್ರವನ್ನು ಪ್ರಸಾರ ಮಾಡಲು ಯಾವ ಡೇಟಾಬೇಸ್ನ್ನು ಬಳಸಲಾಗಿದೆ ಎಂಬುವುದನ್ನು ತಿಳಿಸುವಂತೆ ಕಾರ್ಯದರ್ಶಿಗೆ ಆಗ್ರಹಿಸಿದ್ದಾರೆ.
ಇದನ್ನು ನೋಡಿ : ಲೋಕಸಭಾ ಚುನಾವಣೆ 2024 : ಏ 19 ರಿಂದ 7 ಹಂತಗಳಲ್ಲಿ ಮತದಾನ| ಜೂನ್ 04ಕ್ಕೆ ಫಲಿತಾಂಶ Janashakthi Media