ಬೆಂಗಳೂರು : ಬೇಸಿಗೆ ಶುರುವಾಗಿದ್ದು ರಾಜಧಾನಿ ಬೆಂಗಳೂರಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದೆ ಅವಕಾಶವನ್ನು ಬಳಸಿಕೊಳ್ಳುತ್ತಿರುವ ವಾಟರ್ ಟ್ಯಾಂಕರ್ ಸಪ್ಲೈಯರ್ ಗಳ ಹಾವಳಿ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿದ್ದು ತಮಗೆ ಇಷ್ಟಬಂದಂತೆ ಜನರಿಂದ ದುಡ್ಡು ದೋಚಿಕೊಳ್ಳಲು ಶುರು ಮಾಡಿದ್ದಾರೆ.
ಸಿಕ್ಕಿದ್ದೆ ಅವಕಾಶ ಎಂಬಂತೆ ಟ್ಯಾಂಕರ್ ಮಾಫಿಯಾ ಜನರಿಂದ ಬೇಕಾಬಿಟ್ಟಿ ದುಡ್ಡನ್ನು ಪೀಕುತ್ತಿರುವುದು ರಾಜಧಾನಿಯ ಎಲ್ಲೆಡೆ ಕಂಡುಬರುತ್ತಿದೆ. ಈ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ನೀರಿನ ಟ್ಯಾಂಕರ್ಗಳಿಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಇದನ್ನು ಓದಿ : ರೈತ ಸಮುದಾಯಕ್ಕೆ ದ್ರೋಹ ಎಸಗಿದ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ – ರೈತ-ಕಾರ್ಮಿಕರ ಪಂಚಾಯತ್ ನಿರ್ಣಯ
ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ನೀರು ಸರಬರಾಜಿಗೆ ತಾತ್ಕಾಲಿಕವಾಗಿ ನಾಲ್ಕು ತಿಂಗಳ ಅವಧಿಗೆ 200 ಖಾಸಗಿ ನೀರಿನ ಟ್ಯಾಂಕರ್ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಲು ಹಾಗೂ ದರ ನಿಗದಿಪಡಿಸಲು ಕೋರಿರುತ್ತಾರೆ. ಅದರಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ನಿಭಾಯಿಸುವ ದೃಷ್ಟಿಯಿಂದ ಟ್ಯಾಂಕರ್ಗಳಿಗೆ ದರ ನಿಗದಿಪಡಿಸಲು ತಾಂತ್ರಿಕ ಸಮಿತಿಯನ್ನು ರಚಿಸಲಾಗಿತ್ತು. ಈಗ ಆ ತಾಂತ್ರಿಕ ಸಮಿತಿಯ ಶಿಫಾರಿಸಿನ ಮೇರೆಗೆ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
6 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್ ಅನ್ನು ಬಾಡಿಗೆ ಪಡೆದರೆ ಪ್ರತಿ ದಿನಕ್ಕೆ 5,200 ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, 12 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕರ್ ಬಾಡಿಗೆ ಪಡೆದರೆ ಪ್ರತಿ ದಿನಕ್ಕೆ 7,100 ರೂಪಾಯಿಗಳನ್ನು ಪಾವತಿಸಬೇಕಿದೆ. ಇನ್ನು, 6 ಸಾವಿರ ಲೀಟರ್ ನೀರನ್ನು ತೆಗೆದುಕೊಂಡರೆ 600 ರಿಂದ 750 ರೂ. ಇದೆ. 8 ಸಾವಿರ ಲೀಟರ್ ನೀರಿಗೆ 700 ರಿಂದ 850 ರೂ. ನಿಗದಿಪಡಿಸಲಾಗಿದೆ. 12 ಸಾವಿರ ಲೀಟರ್ ನೀರಿಗೆ 1,000 ದಿಂದ 1,200 ರೂ. ದರವನ್ನು ನಿಗದಿಪಡಿಸಲಾಗಿದೆ. ಕಿಲೋ ಮೀಟರ್ಗಳ ಅಂತರದ ಮೇಲೆ ದರದಲ್ಲಿ ವ್ಯತ್ಯಾಸ ಇದೆ.
ಇದನ್ನು ನೋಡಿ : ಎಲೆಕ್ಟ್ರಿಕ್ ಬಸ್ ಖಾಸಗಿಯವರಿಗೆ ಬೇಡ, ಸಾರಿಗೆ ನಿಗಮಗಳೇ ಖರೀದಿಸಿಲಿ – ಸಾರಿಗೆ ನೌಕರರ ಆಗ್ರಹ Janashakthi Media