ನವದೆಹಲಿ : ಬೀಫ್ ರಫ್ತುದಾರರ ಪೈಕಿ ಭಾರತ ಎರಡನೇ ಸ್ಥಾನಕ್ಕೇರಿದೆ ಎಂದು ದಿ ವೈರಿ ವರದಿ ಮಾಡಿದೆ. ಬೀಫ್ ರಫ್ತು
ಭಾರತದ ನಂತರದ ಸ್ಥಾನದಲ್ಲಿ ಅಮೆರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿವೆ. ಮೊದಲನೇ ಸ್ಥಾನವನ್ನು ಬ್ರೆಝಿಲ್ ಪಡೆದಿದೆ. ಅತೀ ಹೆಚ್ಚು ಬೀಫ್ ಉತ್ಪಾದನೆಯಲ್ಲಿ ಅಮೆರಿಕಾ ಅಗ್ರ ಕ್ರಮಾಂಕದಲ್ಲಿದ್ದು, ಅದು ಉತ್ಪಾದಿಸುವ ಬಹುತೇಕ ಬೀಫ್ ಅನ್ನು ದೇಶೀಯ ಬಳಕೆಗೇ ಮಾರಾಟ ಮಾಡುತ್ತದೆ ಎಂದು ವರದಿಯಾಗಿದೆ. ಬೀಫ್ ರಫ್ತು
2023ರ ಎಪ್ರಿಲ್ ವರೆಗೆ ಭಾರತವು 14.75 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಬೀಫ್ ರಫ್ತು ಮಾಡಿ ಜಗತ್ತಲ್ಲೇ 2ನೇಕ್ಕೇರಿದೆ. ಜಗತ್ತಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ದೇಶ ಬ್ರೆಝಿಲ್ 2023ರ ಎಪ್ರಿಲ್ ವೇಳೆಗೆ 30 ಲಕ್ಷ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು. 14 ಲಕ್ಷದ 22 ಸಾವಿರ ಟನ್ ಬೀಫ್ ರಫ್ತು ಮಾಡುವ ಮೂಲಕ ಅಮೆರಿಕ ಮೂರನೆ ಸ್ಥಾನದಲ್ಲಿದ್ದರೆ, 14 ಲಕ್ಷ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 4ನೆ ಸ್ಥಾನದಲ್ಲಿದೆ. ಭಾರತವು 2022ರಲ್ಲಿ 11 ಲಕ್ಷದ 75 ಸಾವಿರ ಟನ್ ಗಳಷ್ಟು ಬೀಫ್ ರಫ್ತು ಮಾಡಿತ್ತು ಎಂದು ಅಮೆರಿಕದ ಕೃಷಿ ಇಲಾಖೆ ನೀಡಿದ ವರದಿಯಲ್ಲಿರುವ ಅಂಕಿ ಅಂಶಗಳು ತಿಳಿಸಿವೆ ಎಂದು ದಿ ವೈರ್ ಹೇಳಿದೆ. ಬೀಫ್ ರಫ್ತು
ಇದನ್ನೂ ಓದಿ : ಗೋಹತ್ಯೆ ನಿಷೇಧದ ಮೂಲಕ ಆಹಾರ ಹಕ್ಕಿನ ಮೇಲೆ ದಾಳಿ, ಹಲವರ ಆಕ್ರೊಶ
ಭಾರತವು ಕಳೆದ 10 ವರ್ಷದಲ್ಲಿ ವಿಶ್ವದ ಅತಿದೊಡ್ಡ ಬೀಫ್ ರಫ್ತುದೇಶವಾಗಿದೆ. ದೇಶದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ, ಬೀಫ್ ಬಾಸ್ಮತಿ ಅಕ್ಕಿಯನ್ನು ಹಿಂದಿಕ್ಕಿ ಭಾರತದ ಅತಿದೊಡ್ಡ ಕೃಷಿ ಆಹಾರ ರಫ್ತಾಗಿದೆ ಎಂದು ತಿಳಿದು ಬಂದಿದೆ. ವರ್ಷಕ್ಕೆ 4 ಶತಕೋಟಿ ಡಾಲರ್ ಮೌಲ್ಯದ ಬೀಫ್ನ್ನು ಭಾರತ ರಫ್ತು ಮಾಡುತ್ತದೆ” ಎಂದು ಅಂಕಿಅಂಶಗಳು ಹೇಳುತ್ತವೆ.