ಬೆಂಗಳೂರು: 25 ವರ್ಷದ ಯುವಕರ ಮ್ಯಾಟ್ರಿಮೊನಿ ಸೈಟ್ನಲ್ಲಿ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿ ಎಂದು ಫೋಟೋ ಹಾಕಿ ನಕಲಿ ಖಾತೆಯನ್ನು ತೆರೆದ ಅಂಕಲ್ ಬರೋಬ್ಬರಿ 250 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ. ಮ್ಯಾಟ್ರಿಮೊನಿ
ಮ್ಯಾಟ್ರಿಮೊನಿಯಲ್ ವೆಬ್ಸೈಟ್ಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು, ವಿಧವೆ, ವಿಚ್ಛೇದಿತ ಮಹಿಳೆಯರನ್ನ ಪರಿಚಯ ಮಾಡಿಕೊಂಡು, ಬಳಿಕ ಬೆಂಗಳೂರಿಗೆ ಮಾತುಕತೆಗೆಂದು ಕರೆಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ವೇಳೆ ಅವರಿಗೆ ವಿವಿಧ ಕಾರಣಗಳನ್ನು ಹೇಳಿ ವಂಚನೆ ಮಾಡಿ ಎಸ್ಕೇಪ್ ಆಗುತ್ತಿದ್ದ ಎನ್ನಲಾಗಿದೆ. ಮ್ಯಾಟ್ರಿಮೊನಿ
ಕೊಯಮತ್ತೂರು ಮೂಲದ ಮಹಿಳೆಯೊಬ್ಬರನ್ನ ಮದುವೆ ಮಾತುಕತೆಗೆ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದನು. ಬಳಿಕ ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿರುವುದರಿಂದ ಪರ್ಸ್ ಮನೆಯಲ್ಲಿಯೇ ಬಿಟ್ಟು ಬಂದಿದ್ದಾಗಿ ತಿಳಿಸಿ ಹಣ ಪಡೆಯುತ್ತಿದ್ದನು. ಆರೋಪಿ ಎರಡು ಸಿಮ್ ಕಾರ್ಡ್ ಗಳನ್ನ ಬ್ಲಾಕ್ ನಲ್ಲಿ ಬಳಸುತ್ತಿದ್ದನು. ಹಿಂದಿ ಪತ್ರಿಕೆಯಲ್ಲಿ ಜಾಹಿರಾತಿನಲ್ಲಿ ಬರುವ ವಧು -ವರರ ಮೊಬೈಲ್ ಗೆ ಪೋನ್ ಮಾಡುತ್ತಿದ್ದನು. ಅಗರ್ ಸೇನಾಜಿ ವೈವಾಹಿಕ ಮಂಚ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸೇರ್ಪಡೆಯಾಗಿದ್ದನು ಎಂದು ಹೇಳಲಾಗಿದೆ.
ಇದನ್ನು ಓದಿ : ಈ ಹಿಂದೆ ಗುಹೆಗೆ, ಈಗ ನೀರಿಗೆ, ಮುಂದಿನ ಬಾರಿ ಚಂದ್ರನಲ್ಲಿಗೆ – ಪ್ರಕಾಶ ರೈ
ಮಹಿಳೆಯರನ್ನು ಗುರುತಿಸಿ ಅವರನ್ನ ಪೋನ್ ಮೂಲಕ ಮಾತನಾಡಿಸಿ ಅವರೊಂದಿಗೆ ಸಲುಗೆ ಬೆಳಸಿಕೊಂಡು ಮದುವೆ ಆಗುವುದಾಗಿ ನಂಬಿಸುತ್ತಿದ್ದನು. ರಾಜಸ್ಥಾನದ 56, ಉತ್ತರ ಪ್ರದೇಶದ 32, ದೆಹಲಿಯ 32, ಕರ್ನಾಟಕದ 17, ಮಧ್ಯಪ್ರದೇಶದ 16, ಮಹಾರಾಷ್ರ ದ 13, ಗುಜರಾತ್ 11 ಮಹಿಳೆಯರಿಗೆ ವಂಚನೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇದೇ ರೀತಿ ಹಲವು ಮಹಿಳೆಯರಿಗೆ ವಂಚನೆ ಮಾಡಿದ ಪ್ರಕರಣಗಳು ಬಯಲಿಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳಲ್ಲಿ ನಕಲಿ ಖಾತೆ ಸೃಷ್ಟಿಸಿಕೊಂಡು ವಂಚನೆ ಮಾಡುತ್ತಿದ್ದನು. ಅದರಲ್ಲಿಯೂ ವಿಧವೆಯರು ಹಾಗೂ ವಿಚ್ವೇದಿತ ಮಹಿಳೆಯರಿಗೆ ವಂಚನೆ ಮಾಡುವುದು ಈತನ ಖಯಾಲಿಯಾಗಿತ್ತು. ಏರ್ ಪೋರ್ಟ್ಕಸ್ಟಮ್ಸ್ ಅಧಿಕಾರಿ ಎಂದು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ನರೇಶ್ ಪುರಿ ಗೋಸ್ವಾಮಿಆರೋಪಿಯಾಗಿದ್ದಾನೆ.
ಇದನ್ನು ನೋಡಿ : ಚುನಾವಣಾ ಬಾಂಡ್ ಹಗರಣದ ಫಲಾನುಭವಿಗಳು ಯಾರು? ವಿವರ ಬಹಿರಂಗ! Janashakthi Media