ಸುಳ್ಳುಗಳ ಮುಖವಾಡ ಕಳಚಲು ಸಾಕ್ಷಾಧಾರಗಳನ್ನು ಒದಗಿಸುವ “ವಿ.ಡಿ.ಸಾವರ್ಕರ್ ಏಳು ಮಿಥ್ಯೆಗಳು” ಪುಸ್ತಕ

– ಎಚ್.ಆರ್.ನವೀನ್ ಕುಮಾರ್, ಹಾಸನ

ಇತ್ತೀಚಿನ ವರ್ಷಗಳಲ್ಲಿ ಸಾವರ್ಕರ್ ಕುರಿತ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಚರ್ಚೆಗಳಲ್ಲಿ ಕೇಳಿಬರುತ್ತಿರುವ ಪ್ರಮುಖ ಅಂಶಗಳೆಂದರೆ. ಸಾವರ್ಕರ್ ನಿಜವಾಗಲೂ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರಾ,?.. ಅವರು ಅಂಡಮಾನ್ ಜೈಲಿನಲ್ಲಿ‌ ಒಂದರ ಮೇಲೊಂದರಂತೆ 5 ಕ್ಷಮಾಪಣಾ ಪತ್ರಗಳನ್ನು ಯಾಕೆ ಬರೆದುಕೊಟ್ಟರು? ಅದರ ಹಿಂದಿರುವ ಉದ್ದೇಶವೇನಾಗಿತ್ತು? ಹಿಂದುತ್ವವಾದಿಗಳು ಆತನನ್ನು ಆರಾಧಿಸಲು ಕಾರಣಗಳೇನು, ಅವನು ಕ್ರಾಂತಿಕಾರಿಯೋ, ಹೇಡಿಯೋ, ಸಾವರ್ಕರ್ ನಿಜವಾಗಲೂ ಒಬ್ಬ ವಿಚಾರವಾದಿಯೇ, ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಗೂ ಸಾವರ್ಕರ್ ಗೂ ಏನು ಸಂಬಂಧ. ಹೀಗೆ ಹತ್ತು ಹಲವು ಪ್ರಶ್ನೆಗಳು, ಚರ್ಚೆಗಳು, ವಾದಗಳು ಈಗಲೂ ನಡೆಯುತ್ತಿವೆ… ಪುಸ್ತಕ

ಆದರೆ ಈ ಎಲ್ಲಾ ಚರ್ಚೆಗಳನ್ನು ಕೇಳಿದಾಗ ಯಾರೂ ಅತ್ಯಂತ ನಿಖರವಾಗಿ, ಆಧಾರಗಳ ಸಹಿತ, ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದು ಕಡಿಮೆಯೇ ಎಂದು ಹೇಳಬೇಕು. ದೇಶವನ್ನು ಕಾಡುತ್ತಿರುವ ಇಂತಹ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ತಮ್ಮ Savarkar Unmasked ಎಂಬ ಸಂಶೋಧನಾ ಕೃತಿಯಲ್ಲಿ ದೆಹಲಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಶಂಸುಲ್ ಇಸ್ಲಾಂ ನೀಡಿದ್ದಾರೆ. ಪ್ರತಿಯೊಂದು ವಾಕ್ಯಕ್ಕೂ ಸಾಕ್ಷ್ಯಾಧಾರಗಳನ್ನು ಒದಗಿಸುವುದು ಮಾತ್ರವಲ್ಲಾ, ಸ್ವತಃ ಸಾವರ್ಕರ್ ಬರೆದ ಪತ್ರಗಳು, ಬರಹಗಳು, ಅವರೇ ಕಟ್ಟಿ ಬೆಳೆಸಿದ ಹಿಂದೂ ಮಹಾಸಭಾ ದ ದಾಖಲೆಗಳನ್ನು ಉಲ್ಲೇಖಿಸಿ ಹಾಗೂ ಸಾವರ್ಕರ್ ಕುರಿತು ಬರೆದ ಬರಹಗಳನ್ನೇ ವಿಶ್ಲೇಷಿಸಿ, ಸಾವರ್ಕರ್ ಸೇರಿದಂತೆ ಅವರ ಹಿಂಬಾಲಕರು ಹೇಗೆ ಹಸಿಹಸಿ ಸುಳ್ಳುಗಳನ್ನು ದೇಶದ ತುಂಬಾ ಹರಡುತ್ತಿದ್ದಾರೆ ಎಂಬುದನ್ನು ಬಯಲು ಮಾಡಿದ್ದಾರೆ. ಪುಸ್ತಕ

ಪುಸ್ತಕವು ಪ್ರಾರಂಭದಿಂದ ಕೊನೆಯವರೆಗೂ ಒಂದೇ ಓಘದಲ್ಲಿ ಓದಿಸಿಕೊಂಡಿತು. ಓದುವ ಮಧ್ಯದಲ್ಲಿ‌ ಮತ್ತು ಓದಿದ ನಂತರ ನನಗೆ‌ ಅನಿಸಿದ ನಾಲ್ಕು ಮಾತುಗಳು. ಪುಸ್ತಕ

ಸಾವರ್ಕರ್ ಅಂಡಮಾನ್ ಜೈಲಿಗೆ ಪ್ರವೇಶ ಪಡೆಯುವ ಮುನ್ನ ಸ್ವಾತಂತ್ರಕ್ಕಾಗಿ ಚಳುವಳಿ ಮಾಡಬೇಕು ಅಂದುಕೊಂಡಿದ್ದು ನಿಜ. ಆ ಕುರಿತು ಅವರೇ ಬರೆದ The Indian War of Independence, 1857 ಪುಸ್ತಕದಲ್ಲಿ ಅವರ ವಿಚಾರಗಳನ್ನು ಓದಬೇಕು. ಆದರೆ ಅಂಡಮಾನಿಗೆ ಹೋಗಿ ಅಲ್ಲಿ ಕರಾಳ ಕರಿನೀರಿನ ಶಿಕ್ಷೆಯನ್ನು ಅನುಭವಿಸಲು ಶುರುವಾದ ಮೇಲೆ ಅವನ ಆಲೋಚನೆಗಳೆಲ್ಲಾ ಬದಲಾಗುತ್ತವೆ. ಪುಸ್ತಕ

ಜೈಲಿನಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ನೀಡುತ್ತಿದ್ದ ರೀತಿಯಲ್ಲಿಯೇ ಸಾವರ್ಕರ್ ಗೂ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಆದರೆ ಅಲ್ಲಿದ್ದ ಬೇರಾವ ಸ್ವಾತಂತ್ರ್ಯ ಹೋರಾಟಗಾರರು‌ ತಮ್ಮ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಕೇಳಲಿಲ್ಲ. ಮಾತ್ರವಲ್ಲ ಅಲ್ಲಿದ್ದ ಕ್ರಾಂತಿಕಾರಿಗಳು ನಾವು ಇಲ್ಲೇ ಸಾವನಪ್ಲಿದರೂ ಪರವಾಗಿಲ್ಲ ಬ್ರಿಟೀಷರಿಂದ ಕ್ಷೆಮೆಯನ್ನು ಕೇಳುವುದಿಲ್ಲಬೆಂಬ ದೃಢ ನಿರ್ಧಾರದಿಂದ ಅವರು ಕೊಡುವ ಎಲ್ಲಾ ರೀತಿಯ ಕರಾಳ ಚಿತ್ರ ಹಿಂಸೆಗಳನ್ನು ದೇಶಕ್ಕಾಗಿ ಅನುಭವಿಸಿದರು. ಪುಸ್ತಕ

ಆದರೆ ಸಾವರ್ಕರ್ ಈ ಹಿಂಸೆಯನ್ನು ತಡೆಯಲಾಗದೆ ಒಂದರ ಹಿಂದೊಂದರಂತೆ 5 ಕ್ಷಮಾಪಣಾ ಪತ್ರಗಳನ್ನು ಬರೆದುಕೊಟ್ಟದ್ದನ್ನ ನೋಡಿದರೆ ಇವ ಎಷ್ಟು ಪುಕಲ, ಇವನಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಅವ ಬರೆದಿರುವ ಪತ್ರಗಳ ಒಂದೊಂದು ಸಾಲುಗಳನ್ನು ಓದುತ್ತಿದ್ದರೆ ಇವ ಎಂತಹ ದೇಶದ್ರೋಹಿ ಎಂಬುದು ಗೊತ್ತಾಗುತ್ತದೆ. ಇವನನ್ನು ದೊಡ್ಡ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಸಂಸತ್ ಭವನದ ಸಭಾಂಗಣದಲ್ಲಿ ಗಾಂಧಿ ಫೋಟೋ ಎದುರಿಗೆ ಹಾಕಲಾಗಿದೆ. ಬಾರತಕ್ಕೆ ಇದಕ್ಕಿಂತ ದುರಂತ ಮತ್ತೊಂದಿದೆಯಾ? ಪುಸ್ತಕ

ಅಂಡಮಾನ್ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮುಸ್ಲಿಮರಾಗಿದ್ದರು ಅನ್ನುವ ಕಾರಣದಿಂದಾಗಿ ಆತ ಇಡೀ ಮುಸ್ಲಿಂ ಸಮುದಾಯವನ್ನು ದ್ವೇಷಿಸುವ ಹಂತಕ್ಕೆ ಹೋಗಿದ್ದು ಗೋಚರಿಸುತ್ತದೆ. 50 ವರ್ಷಗಳ ಕಾಲ ಪಡೆಯಬೇಕಾಗಿದ್ದ ಶಿಕ್ಷೆಯನ್ನು‌ ಕೇವಲ 10 ವರ್ಷಗಳಲ್ಲೇ ಮುಗಿಸಿ ವಾಪಸ್ ಬರಬೇಕಾದರೆ ಅಲ್ಲಿರುವ ಬ್ರಿಟೀಷ್ ಅಧಿಕಾರಿಗಳು ಮಾತ್ರವಲ್ಲದೆ ಅವರ ವಿಚಾರಗಳಿಗೆ ಹೇಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದ ಎಂಬುದು ಗೊತ್ತಾಗುತ್ತದೆ. ಒಡೆದು ಆಳುವ ನೀತಿಯಲ್ಲಿ ಬ್ರಿಟೀಷರದ್ದು ಸಾವರ್ಕರ್ ದ್ದು ಒಂದೇ ಆಲೋಚನೆಯಾಗಿತ್ತು.

ಇದನ್ನು ಓದಿ :  ಸುಳ್ಳು ಹೇಳಿದ ಬಿಜೆಪಿ ನಾಯಕರು; ಅದನ್ನು ಹರಡಿದ ಪ್ರಜಾವಾಣಿ ಸಹಿತ ಕನ್ನಡದ ಮಾಧ್ಯಮಗಳು!

ಸಾವರ್ಕರ್ ಹುಟ್ಟು ಹಾಕಿದ ಹಿಂದೂ ಮಹಾಸಭಾವು ಸ್ವಾತಂತ್ರ್ಯ ಚಳುವಳಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರನ್ನು ವಿರೋಧಿಸುತ್ತದೆ ಮಾತ್ರವಲ್ಲ, ಬ್ರಿಟೀಷ್ ಸೈನ್ಯದಲ್ಲಿ ಹಿಂದು ಮಹಾಸಭಾದ ಕಾರ್ಯಕರ್ತರನ್ನು ದೊಡ್ಡಸಂಖ್ಯೆಯಲ್ಲಿ ಭರ್ತಿಮಾಡುತ್ತದೆ. ಬ್ರಿಟೀಷರ ಪರ ಕೆಲಸ ಮಾಡಿದ ಸಾವರ್ಕರ್ ದೇಶಪ್ರೇಮಿಯಾಗಲು ಹೇಗೆ ಸಾಧ್ಯ ಎಂಬ ಬಗ್ಗೆ ಎಲ್ಲರೂ ಪದೇ ಪದೇ ಚಿಂತಿಸಬೇಕಿದೆ ಮತ್ತು ಅದನ್ನು ಜನಮಾನಸಕ್ಕೆ ತಲುಪಿಸಬೇಕಿದೆ.

ಸಾವರ್ಕರ್ ಬರಹ ಮತ್ತು ಭಾಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಮುಸ್ಲಿಂ ವಿರೋಧಿ ಭಾಷೆ ಕಾಣುತ್ತದೆಯೇ ಹೊರತು, ಬ್ರಿಟೀಷ್ ವಿರೋಧಿ ಭಾಷೆ ಕಾಣಿಸುವುದಿಲ್ಲ.

ತ್ರಿವರ್ಣ ಧ್ವಜವನ್ನು ಒಪ್ಪದ ಸಾವರ್ಕರ್ ಭಗವಾಧ್ವಜವೇ ರಾಷ್ಟ್ರ ದ್ವಜವಾಗಬೇಕು, ನೇಪಾಳದ ರಾಜನೇ ನಮ್ಮೆಲ್ಲರ ಹಿಂದು ರಾಜನಾಗಬೇಕು ಎಂದು ಪ್ರತಿಪಾದಿಸಿದ್ದ. 1923 ರಲ್ಲಿ ರತ್ನಗಿರಿ ಜೈಲಿನಲ್ಲಿದ್ದಾಗಲೇ ಹಿಂದುತ್ವ ಎಂಬ ಪುಸ್ತಕವನ್ನು ಸಾವರ್ಕರ್ ಬರೆದು, ಅದನ್ನು ಜೈಲಿನಿಂದ ಹೊರತಂದು ಪ್ರಕಟಿಸಲಾಗಿದೆ. ಬ್ರಿಟೀಷರ ಸಹಕಾರವಿಲ್ಲದೆ ಈ ಕೆಲಸ ಸಾಧ್ಯವಿದೆಯೇ ? ಮತ್ತು ಸಾವರ್ಕರ್ ಪ್ರತಿಪಾದಿಸುತ್ತಿದ್ದ ಹಿಂದುತ್ವದ ವಿಷಯ ಬ್ರಿಟೀಷರಿಗೂ ಸಹಕಾರಿಯಾಗಿದ್ದರಿಂದ ಆ ಪುಸ್ತಕ ಪ್ರಕಟವಾಗಲು ಸಾಧ್ಯವಾಯಿತು.
ಸಾವರ್ಕರ್ ಜಾತಿವಾದದ ಸಮರ್ಥಕ, ವರ್ಣಾಶ್ರಮ ಪದ್ದತಿಯ ಪ್ರತಿಪಾದಕ ಮತ್ತು ಮನುಸ್ಮೃತಿಯನ್ನು ಪವಿತ್ರ ಎಂದು ಒಪ್ಪಿಕೊಂಡವನು ಎಂಬುದನ್ನು ಈ ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ.

ಭಗತ್ ಸಿಂಗ್ ಮತ್ತು ಸಾವರ್ಕರ್ ನಡುವಿನ ಚಿಂತನೆಯಲ್ಲಿ ಎಂತಹ ಅಗಾಧವಾದ ವ್ಯತ್ಯಾಸವಿತ್ತು ಎಂಬುದರ ಕುರಿತು ಲೇಖಕರು ಇನ್ನೂ ಸ್ವಲ್ಪ ಒತ್ತುಕೊಡುವ ಅಗತ್ಯವಿತ್ತು. ಯಾಕೆಂದರೆ ಹಿಂದುತ್ವವಾದಿಗಳು ಇವರಿಬ್ಬರನ್ನು ಒಂದೇ ಕುರ್ಚಿಯಲ್ಲಿ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇವರಿಬ್ಬರು ಬಹುತೇಕ ಎಲ್ಲಾ ವಿಚಾರಗಳಲ್ಲೂ ತದ್ವಿರುದ್ಧವಾಗಿದ್ದರು. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ, ದೇಶಕ್ಕಾಗಿ ನಗುನಗುತ್ತಾ ನೇಣುಗಂಬಕ್ಕೆ ಕೊರಳೊಡ್ಡಿ ಪ್ರಾಣ ನೀಡಿದ ಹುತಾತ್ಮ ಭಗತ್ ಸಿಂಗ್ ಎಲ್ಲಿ,! ಬ್ರಿಟೀಷರಿಗೆ ಶರಣಾಗಿ ಕ್ಷಮಾಪಣೆ ಪತ್ರ ಬರೆದುಕೊಟ್ಟು‌ ಜೀವ ಉಳಿಸಿಕೊಂಡ ಹೇಡಿ ಸಾವರ್ಕರ್ ಎಲ್ಲಿ.!

ಪ್ರತಿಯೊಂದನ್ನು ಪ್ರಶ್ನಿಸು, ಪ್ರಮಾಣಿಸದೇ ಏನನ್ನೂ ಒಪ್ಪಿಕೊಳ್ಳಬೇಡ ಎಂಬ ವಿಜ್ಞಾನದ ಮೂಲ ತತ್ವದಂತೆ ಈ ಪುಸ್ತಕ ಮೂಡಿ ಬಂದಿದೆ. ಇಲ್ಲಿ ಪ್ರತಿಯೊಂದಕ್ಕೂ ಸಾಕ್ಷ್ಯಾಧಾರಗಳಿವೆ, ಅವು ಬಾಯಿ ಮಾತಿನ ಆಧಾರಗಳಲ್ಲ, ಲಿಖಿತ ಧಾಖಲೆಗಳ ಆಧಾರಗಳು, ಇಲ್ಲಿ ಸುಳ್ಳಿಗೆ ಆಸ್ಪದವಿಲ್ಲ. ಏನಿದ್ದರೂ ಸುಳ್ಳನ್ನು ಬಯಲುಮಾಡಿ‌ ಮುಖವಾಡವನ್ನು ಕಳಚುವ ಕೆಲಸ ಮಾತ್ರ ನಡೆದಿದೆ.

ಎಲ್ಲರೂ ಪುಸ್ತಕವನ್ನು ಓದಿ, ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಈ ಸತ್ಯವನ್ನೇ ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡೋಣ… ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯವಾಗಿಸುವ ಗೊಬೆಲ್ಸ್ ತಂತ್ರವನ್ನ ಸೋಲಿಸೋಣ…

ತಡಗಳಲೆ ಸುರೇಂದ್ರ ರಾವ್ ಈ ಪುಸ್ತಕವನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಪುಟಗಳು 163, ಮುಖ ಬೆಲೆ 180 ರೂ

ಇದನ್ನು ನೋಡಿ : ಯುವಜನ ಸಮ್ಮೇಳನಕ್ಕೆ ಸಿದ್ಧಗೊಂಡ ಮಂಗಳೂರು Janashakthi Media

Donate Janashakthi Media

Leave a Reply

Your email address will not be published. Required fields are marked *