ಚಿಕ್ಕಮಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಮಗಳೂರು ಕೆಎಸ್ಆರ್ಟಿಸಿ ವಿಭಾಗ ನಿಯಂತ್ರಕ ಬಸವರಾಜು ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ
ಚಿಕ್ಕಮಗಳೂರಿನಿಂದ ಕಡೂರು ಡಿಪೋಗೆ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲೇ ಬಸ್ ಚಾಲಕನಿಂದ 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಸವರಾಜು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕೆಎಸ್‌ಆರ್‌ಟಿಸಿ
ಇದನ್ನು ಓದಿ : ತೆಲಂಗಾಣ | ಹಾಲಿ ಬಿಆರ್‌ಎಸ್ ಸಂಸದ ಕಾಂಗ್ರೆಸ್ ಸೇರ್ಪಡೆ!
ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೆಎಸ್ಆರ್‌ಟಿಸಿ ಡಿಸಿ ಒಬ್ಬರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ಕೂಡ ಕೆಎಸ್ಆರ್‌ಟಿಸಿ. ಡಿಸಿ ಮೇಲೆ ಸಾಕಷ್ಟು ಆರೋಪಗಳು ಕೇಳ ಬಂದಿದ್ದವು. ಇಲಾಖೆಯ ನೌಕರರು, ಚಾಲಕರು ಹಾಗೂ ನಿರ್ವಾಹಕರನ್ನು ಒಂದು ಡಿಪೋವಿನಿಂದ ಮತ್ತೊಂದು ಡಿಪೋವಿಗೆ ವರ್ಗಾವಣೆ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೂಡ ಇವರ ಮೇಲಿದೆ. ಸಾಲದ್ದಕ್ಕೆ ಇಲಾಖೆ ನೌಕರರ ಮೇಲೆ ಜಾತಿ ನಿಂದನೆ ಮಾಡಿದ ಕಾರಣ ದಲಿತ ಸಂಘಟನೆಗಳು ಇವರ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. ಲಂಚ
ಇಂದು 10,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆಎಸ್ಆರ್‌ಟಿಸಿ ಡಿಸಿ ಬಸವರಾಜ್ ಎ1 ಆರೋಪಿಯಾಗಿದ್ದರೆ, ಚಾಲಕ ನಾಗರಾಜ್ ಎ2 ಆರೋಪಿಯಾಗಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಲಂಚ
ಇದನ್ನು ನೋಡಿ : ನ್ಯಾಶನಲ್ ಕಾಲೇಜ್ ಮುಂದೆ ಜನಾಕ್ರೋಶ :ಡಾ. ರವಿ ಬಾಗಿ ವರ್ಗಾವಣೆ ಹಿಂಪಡೆದ ಆಡಳಿತ ಮಂಡಳಿ Janashakthi Media